Ganesha in Tree: ಮರದಲ್ಲಿ ಮೂಡಿದ ಗಣಪ! ಪ್ರಕೃತಿ ವಿಸ್ಮಯಕ್ಕೆ ಗಣೇಶನೇ ಸಾಕ್ಷಿ!

ಪ್ರಕೃತಿದತ್ತವಾಗಿ ಗಣಪತಿ ಉದ್ಭವಿಸಿದರೆ ಹೇಗಿದ್ದೀತು? ಹೌದು, ಯಲ್ಲಾಪುರದಲ್ಲಿ ಅರಣ್ಯ ಮಧ್ಯೆ ಚಾಚಿಕೊಂಡಿರುವ ಮರದಡಿ ಗಣಪತಿ ಮೂರ್ತಿ ಉದ್ಭವಿಸಿದೆ. ನೀವೂ ಈ ಗಣಪನ ದರ್ಶನ ಪಡೆಯಿರಿ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:
    ಉತ್ತರ ಕನ್ನಡ: ನಿಜ ಭಕ್ತನಿಗೆ ಪ್ರಕೃತಿಯ ಎಲ್ಲೆಲ್ಲೂ ಭಗವಂತನಿದ್ದಾನೆ. ಅದ್ರಲ್ಲೂ ಪ್ರಕೃತಿಯನ್ನೇ ಆರಾಧಿಸುವವರಿಗಂತೂ ಪ್ರಕೃತಿ ಜೊತೆಗೆ ಬೆಸೆದುಕೊಂಡಿರುವ ಈ ಭಗವಂತ ಕಾಣದಿರುವನೇ? ಹೌದು, ಗಣೇಶ ಚತುರ್ಥಿ (Ganesh Chaturthi) ಈ ಸಮಯದಲ್ಲಿ ಮರದ ಕೆಳಗೆ ಕೂತಂತಿರುವ ಈ ಬಾಲ ಗಣೇಶನನ್ನು ನೋಡಲೇಬೇಕು. ಆತನನ್ನು ಕಣ್ಣಾರೆ ಕಂಡು ಕಣ್ತುಂಬಿಕೊಳ್ಳಲೇಬೇಕು. ಉತ್ತರ ಕನ್ನಡ ಜಿಲ್ಲೆಯ (Uttara Kannada) ಯಲ್ಲಾಪುರದ ಕಾಡುಗಳಲ್ಲಿ (Yellapur Forest) ಗಗನಚುಂಬಿ ಮರಗಳು ಹಬ್ಬಿ ಕಬಂಧ ಬಾಹುಗಳನ್ನು ಚಾಚಿ ಇಡೀ ಕಾಡನ್ನು ಹಸಿರುಮಯವಾಗಿಸಿದೆ. ಅಂತಹ ಯಲ್ಲಾಪುರ ಹಾಗೂ ಮುಂಡಗೋಡದ ಮುಕ್ಕಾಲು ಭಾಗ (Mundgod Forest) ಕಾಡೇ ಕಾಡು. ಅಂತಹ ಕಾಡಿನ ಒಂದು ಆಳೆತ್ತರದ ಮರದ ಬುಡದಲ್ಲಿ ಗಜವದನ ತನ್ನ ಆವಾಸ ಹೂಡಿದ್ದಾನೆ.

    ಹೌದು, ಈ ಮರದ ಬುಡ ಗಮನಿಸಿ ಆ ಬೇರಿನ ಮೇಲ್ಭಾಗಕ್ಕೆ ಸಂಧಿಸಿರುವ ಕಾಂಡದ ಭಾಗದಲ್ಲಿ ಶ್ರೀ ದೇವರ ಪಾದಗಳಿವೆ. ಅಲ್ಲಿಂದ ಚೂರು ಮೇಲೆ ನೋಡಿದರೆ ದಂತ, ಚತುರ್ಭುಜಗಳೊಡನೆ ವಿಸ್ತಾರವಾದ ಸೊಂಡಿಲೊಂದಿಗಿರುವ ಚಪ್ಪಟೆ ನೆತ್ತಿಯ ಬಾಲಗಣೇಶನ ದರ್ಶನ ನಿಮಗಾಗುತ್ತದೆ.

    ಇದನ್ನೂ ಓದಿ: Uttara Kannada Chakli Kambala: ಜನರ ಒಗ್ಗಟ್ಟು ಬೆಸೆಯುತ್ತೆ ಚಕ್ಕುಲಿ! ಇದು ಉತ್ತರ ಕನ್ನಡದ ಚಕ್ಕುಲಿ ಕಂಬಳದ ಸ್ಪೆಷಲ್

    ಉದ್ಭವ ಗಣಪತಿ
    ಕಳೆದ ನಾಲ್ಕು ವರ್ಷದ ಹಿಂದೆ ಈ ವಿಗ್ರಹ ಮೂಡಿದ್ದು ಅನೇಕ ಪವಾಡಗಳಿಗೆ ಸಾಕ್ಷಿಯಾಗಿದೆ. ಅನೇಕರು ಬಂದು ಹರಕೆ-ಕಾಣಿಕೆ ಕೊಟ್ಟು ಮೂಡುಗಣಪತಿ, ಸ್ವಯಂ ಭೂ ಗಣಪತಿ ಎಂದು ಪ್ರಸಿದ್ಧವಾಗಿದೆ.

    ಇದನ್ನೂ ಓದಿ: Dodda Ganapathi Temple: ಮದುವೆ, ಕಳ್ಳತನ ಎಲ್ಲ ಸಮಸ್ಯೆಗೂ ಪರಿಹಾರ! ಶಿರಸಿ ದೊಡ್ಡ ಗಣಪತಿಯ ಮಹಿಮೆಯೂ ದೊಡ್ಡದು

    Bharatanahalli, Karnataka ಭರತನಹಳ್ಳಿ ಬಸ್ ಸ್ಟಾಪ್​ನಲ್ಲಿ ಇಳಿದು ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)[/caption]

    ಸುತ್ತಮುತ್ತಲ ಎಲ್ಲಾ ಊರಿನ ಜನರಿಗೆ ಇದು ಆರಾಧ್ಯದೈವ ಮುಂಡಗೋಡದಿಂದ ಯಲ್ಲಾಪುರಕ್ಕೆ ತೆರಳುವ ಎಲ್ಲರೂ ಶ್ರೀ ದೇವರಿಗೆ ನಮಸ್ಕರಿಸಿಯೇ ಮುಂದೆ ಸಾಗುತ್ತಾರೆ. ಹೀಗೆ ಕಾನನದ ನಡುವೆ ಇರುವ ಗಜಾನನ ಮುಂದೆ ಶಿರಬಾಗದವರೇ ಇಲ್ಲ.

    ವರದಿ: ಎ.ಬಿ.ನಿಖಿಲ್, ಮುಂಡಗೋಡು
    Published by:guruganesh bhat
    First published: