Ganesh Chaturthi: ಇವರು ತಯಾರಿಸೋ ಗಣಪತಿ ಭಾರೀ ಫೇಮಸ್!

ಉತ್ತರ ಕನ್ನಡದಾದ್ಯಂತ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಶಿರಸಿಯ ಮರಾಠಿ ಕೊಪ್ಪದಲ್ಲಿ ಆಳೆತ್ತರ ಗಾತ್ರದ ಗಣಪನ ಮೂರ್ತಿಗಳನ್ನು ಸಂಪೂರ್ಣವಾಗಿ ಮಣ್ಣಿನಿಂದಲೇ ತಯಾರಿಸಲಾಗಿದ್ದು ವಿಶೇಷವಾಗಿದೆ.

ಶಿರಸಿ ಗಣಪತಿ ವಿಶೇಷ

"ಶಿರಸಿ ಗಣಪತಿ ವಿಶೇಷ"

  • Share this:
    ಉತ್ತರ ಕನ್ನಡ: ಯಕ್ಷಗಾನ ಗಣಪ, ಶಿವ-ಪಾರ್ವತಿ ಗಣಪ, ರಾಜ ಗಣಪ, ವಟಪತ್ರ ಶಾಯಿ ಗಣಪ, ಸರ್ವಾಭರಣ ಗಣಪ, ಮಣಿಕಂಠ ಗಣಪ ಇವುಗಳಿಗೆಲ್ಲ ಮುಕುಟದಂತೆ ಮರಾಠಿ ಕೊಪ್ಪದ ಗಣಪ. ಹೀಗೆ ಒಂದೊಂದು ಗಣಪನೂ (Ganapathi Idol) ಒಂದು ಒಂದು ಆಕಾರ. ಸಂಪೂರ್ಣ ಮಣ್ಣಿನಲ್ಲೇ ತಯಾರಾದ ಆಳಡಿ ಎತ್ತರದ ಗಣಪನೂ ಕಾಣಬಹುದು. ಇನ್ನೇನ್ ಚೌತಿ ಹಬ್ಬಕ್ಕೆ (Ganesh Chaturthi)  ಕ್ಷಣಗಣನೆ ಆರಂಭವಾಗ್ತಿದ್ದಂಗೆ ಗಣೇಶ ಮೂರ್ತಿಯ ಫೈನಲ್ ಟಚ್ ಕೆಲಸ ನಡೀತಿದೆ. ಹಾಗಾದ್ರೆ ಬನ್ನಿ, ಉತ್ತರ ಕನ್ನಡದ ಶಿರಸಿಯ (Uttara Kannada Sirsi) ಮರಾಠಿಕೊಪ್ಪದ ಈ ಗಣಪತಿ ವಿಶೇಷತೆಯೇನು? ವಿಡಿಯೋ ನೋಡೋಣ.

    ಸಂಪೂರ್ಣ ಮಣ್ಣಿನಲ್ಲೇ ಗಣಪ
    ಎಲ್ಲೂ ಯಾವುದೇ ರೀತಿಯ ಅಚ್ಚು ಬಳಸದೇ, ಸಂಪೂರ್ಣವಾಗಿ ಮಣ್ಣನಲ್ಲಿಯೇ ಗಣೇಶನ ಮೂರ್ತಿ ರಚಿಸೋದು ಇಲ್ಲಿನ ವಿಶೇಷ. ಗಣೇಶನ ಪ್ರತಿಯೊಂದು ಭಾಗಗಳನ್ನು ಸಂಪೂರ್ಣ ಮಣ್ಣಿನಿಂದ ರಚಿಸೋದು ಇವರ ಕಲಾ ನೈಪುಣ್ಯತೆಗೆ ಸಾಕ್ಷಿ.

    ಅಂದಹಾಗೆ ಹೀಗೆ ಗಣಪತಿ ಮೂರ್ತಿ ಕೆತ್ತಿರೋದು ಶಿರಸಿ ಮರಾಠಿ ಕೊಪ್ಪದಲ್ಲಿ. ಕಲಾವಿದ ಕೇಶವ್ ಮಹಾದೇವ್ ನಾಯ್ಕ್ ಅವರೇ ಈ ಎಲ್ಲ ಪರಿಸರ ಸ್ನೇಹಿ ಗಣಪತಿ ಹಿಂದಿನ ಕಲಾ ಮಾಂತ್ರಿಕ.

    ಇದನ್ನೂ ಓದಿ: Uttara Kannada: ಶಾರದಜ್ಜಿಯ ಹಾಡು ಕೇಳಿ! ಇವರು ಹೊನ್ನಾವರದ ಜಾನಪದ ಗಾನಶಾರದೆ

    25 ವರ್ಷಗಳಿಂದ ಗಣಪತಿ ತಯಾರಿ!
    ಕಳೆದ ಇಪ್ಪತ್ತೈದು ವರ್ಷದಿಂದ ಮೂರ್ತಿ ತಯಾರು ಮಾಡುತ್ತಿರುವ ಇವರು ಆಯಾಯ ಪ್ರದೇಶಕ್ಕೆ ಅನುಗುಣವಾಗಿ ಗಣಪತಿ ತಯಾರಿಸುವ ನೈಪುಣ್ಯತೆಯನ್ನು ಹೊಂದಿದ್ದಾರೆ. ಅದರಲ್ಲೂ ಶಿರಸಿಯಲ್ಲೇ ಅತಿ ಎತ್ತರದ ಮಣ್ಣಿನ ಗಣೇಶ ತಯಾರಿಸುವಲ್ಲಿ ಕೇಶವ್ ಎತ್ತಿದ ಕೈ.

    ಇದನ್ನೂ ಓದಿ: Uttara Kannada Chakli Kambala: ಜನರ ಒಗ್ಗಟ್ಟು ಬೆಸೆಯುತ್ತೆ ಚಕ್ಕುಲಿ! ಇದು ಉತ್ತರ ಕನ್ನಡದ ಚಕ್ಕುಲಿ ಕಂಬಳದ ಸ್ಪೆಷಲ್

    ವಿದ್ಯಾರ್ಥಿಗಳಿಗೂ ತರಬೇತಿ
    ಇವ್ರ ಜೊತೆ ಸಹಾಯಕ್ಕಾಗಿ ಗಣಪತಿ ಮೂರ್ತಿ ತಯಾರಿಸೋ ಆಸಕ್ತಿ ಇರೋ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಹೀಗೆ ಕೇಶವ್ ಮಹಾದೇವ್ ನಾಯ್ಕ್ ಅವ್ರು ತಾನು ಗಣಪತಿಯನ್ನ ತಯಾರಿಸುವ ಜೊತೆಗೆ ಇತರರಿಗೆ ಕಲಿಸುವ ಇರಾದೆಯನ್ನೂ ಹೊಂದಿದ್ದಾರೆ. ಹೀಗೆ ಶಿರಸಿ ಭಾಗದಲ್ಲಿಯೇ ಅತೀ ಎತ್ತರದ ಗಣಪತಿ ತಯಾರಿಸುವ ಮೂಲಕ ಇವ್ರು ಗಣೇಶ ಸೇವೆಯಲ್ಲಿ ತೊಡಗಿದ್ದಾರೆ.

    ವರದಿ: ಎ.ಬಿ.ನಿಖಿಲ್, ಮುಂಡಗೋಡು
    Published by:guruganesh bhat
    First published: