Uttara Kannada Chakli Kambala: ಜನರ ಒಗ್ಗಟ್ಟು ಬೆಸೆಯುತ್ತೆ ಚಕ್ಕುಲಿ! ಇದು ಉತ್ತರ ಕನ್ನಡದ ಚಕ್ಕುಲಿ ಕಂಬಳದ ಸ್ಪೆಷಲ್

ಈ ವಿಶಿಷ್ಟ ಸಂಪ್ರದಾಯಕ್ಕೆ ‘ಚಕ್ಲಿ ಕಂಬ್ಳ' ಎಂದೇ ಹೆಸರು. ಊರ ಹಿರಿಯರಿಂದ ಹಿಡಿದು ಕಿರಿಯರವರೆಗೂ ಎಲ್ರೂ ಜೊತೆಗೂಡಿ ಸಂಭ್ರಮಿಸೋಕೂ ಒಂದು ಅವಕಾಶ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:
    ಉತ್ತರ ಕನ್ನಡ: ಜಿಲ್ಲೆಯ ಶಿರಸಿಯಲ್ಲಿ ಈಗ ಚಕ್ಕುಲಿ ಕಂಬಳದ (Sirsi Chakli Kambala) ಸುಗ್ಗಿ. ಇದೇನಿದು ಚೌತಿ ಹಬ್ಬಕ್ಕೆ ಮಾರಾಟ ಮಾಡೋಕೆ ಅಂದ್ಕೊಂಡ್ರಾ ಹಾಗೇನಿಲ್ಲ. ಇಲ್ಲಿ ತಯಾರಿಸೋ ಪ್ರತಿಯೊಂದು ಚಕ್ಕುಲಿನೂ ಪ್ರತಿ ಕುಟುಂಬವನ್ನು, ಪ್ರತಿಯೊಬ್ಬನನ್ನು ಬೆಸೆಯುವ ಗಟ್ಟಿತನ ಹೊಂದಿದೆ. ಅರೆ, ಇದೇನಿದು ಚಕ್ಕುಲಿಗೂ ಮನುಷ್ಯನಿಗೂ ಅದೇನು ಸಂಬಂಧ ಅಂತೀರಾ? ಅದೇ ನೋಡಿ ಶಿರಸಿ ಮಂದಿಯ ಒಗ್ಗಟ್ಟಿನ ಗುಟ್ಟು ಕೂಡಾ. ಏನಿದು ಚಕ್ಕುಲಿ ಕಂಬಳ? (What Is Chakli Kambala) ಈ ಆಚರಣೆ ಎಲ್ಲಿದೆ? ಇದು ಹೇಗೆ ಜನರನ್ನು ಬೆಸೆಯುತ್ತೆ? ಎಲ್ಲ ವಿವರ ತಿಳಿಯಿರಿ.



    ಮನೆ ಮನೆಯಲ್ಲೂ ಚಕ್ಕುಲಿ
    ಇಲ್ಲಿ ಮಾಡ್ತಿರೋ ಚಕ್ಕುಲಿಗಳ್ಯಾವುದೂ ಮಾರಾಟ ಮಾಡುವುದಕ್ಕಲ್ಲ. ಈ ಚಕ್ಕುಲಿಗಳ ಚಮತ್ಕಾರವೇ ಬೇರೆ ಇದೆ. ಶಿರಸಿಯ ಹೆಗಡೆ ಕಟ್ಟಾ, ಹೆಗ್ಗಾರ, ಕಲ್ಮನೆ ಹಳ್ಳಿಗಳಲ್ಲಿ ಮನೆ ಮನೆಗೆ ತೆರಳಿ ಚಕ್ಕಲಿ ಮಾಡೋ ಹಬ್ಬ ನಡೀತಿದೆ. ಡೊಳ್ಳುಹೊಟ್ಟೆ ಗಣಪ ಮನೆಗೆ ಬರುವ ಈ ದಿನಮಾನಗಳಲ್ಲಿ ಅವನ ಆಗಮನಕ್ಕಾಗಿ ಮನೆಯ ಕಿರಿತಲೆಯಿಂದ ಹಿಡಿದು ಹಿರಿತಲೆಯವರೆಗೆ ಎಲ್ಲರೂ ಚಕ್ಕುಲಿ ಮಾಡುವಲ್ಲಿ ನಿರತರಾಗುತ್ತಾರೆ. ತಮ್ಮ ಮನೆಯಲ್ಲಿ ಚಕ್ಕುಲಿ ಮಾಡಿದ ತಕ್ಷಣ ಮತ್ತೊಂದು ಮನೆಗೆ ಹೋಗಿ ಚಕ್ಕುಲಿ ಮಾಡಿ ಬರುವುದೇ ಇಲ್ಲಿನ ವಿಶೇಷ.



    ಊರಿನ ಎಲ್ಲರೂ ಸೇರಿ ಚಕ್ಕುಲಿ ಮಾಡುವುದೇ ವಿಶೇಷ ಯಾವುದೇ ಕೆಮಿಕಲ್ ಬಳಸದೇ ರುಬ್ಬಬೇಕಾದನ್ನು ರುಬ್ಬಿ ತುರಿಯಬೇಕಾದನ್ನು ತುರಿದು ಕರಿಯಬೇಕಾದನ್ನು ಕರಿದು ಹಂಚಿಕೊಂಡು ತಿನ್ನುತ್ತಾರೆ.

    ಇದನ್ನೂ ಓದಿ:Uttara Kannada: ಶಾರದಜ್ಜಿಯ ಹಾಡು ಕೇಳಿ! ಇವರು ಹೊನ್ನಾವರದ ಜಾನಪದ ಗಾನಶಾರದೆ 

    ಕೂಡಿ ಮಾಡುವರು, ಹಂಚಿ ತಿನ್ನುವರು
    ಇನ್ನು ಈ ಚಕ್ಕುಲಿ ಮಾಡುವ ಸಂಪ್ರದಾಯ ಹೇಗಿದೆ ಅಂದ್ರೆ, ಗ್ರಾಮದಲ್ಲಿ ಎಷ್ಟು ಮನೆಗಳಿವೆಯೋ ಅಷ್ಟೂ ಮನೆಗೆ ಸರದಿಯಂತೆ ಭೇಟಿ ನೀಡಿ ಚಕ್ಕುಲಿ ತಯಾರಿಸಲಾಗುತ್ತದೆ. ಮಧ್ಯಾಹ್ನ 2.00 ಕ್ಕೆ ಶುರುವಾಗುವ ಈ ಸಂಭ್ರಮ, ಮುಗಿಯುವುದು ಬೆಳಗಿನ ಜಾವ 2.00 ಕ್ಕೆ. ಗಂಡಸರು ಚಕ್ಕುಲಿಯನ್ನು ಕೈಯಿಂದ ಮಾಡಿದರೆ ಹೆಂಗಸರು ಅದನ್ನು ಎಣ್ಣೆಯಲ್ಲಿ ಕರೆಯಯುತ್ತಾರೆ.

    ಇದನ್ನೂ ಓದಿ: Ghatiana Dwivarna: ಬಿಳಿ ಮೈ, ಕಾಲು ಚಾಕ್ಲೇಟ್ ಬಣ್ಣ! ಅಪರೂಪದ ಘಾಟಿಯಾನ ದ್ವಿವರ್ಣ ಏಡಿಯ ವಿಡಿಯೋ ನೋಡಿ

    ಅತಿಯಾದ ಜಿಡ್ಡಿಲ್ಲದ ಬಾಯಲ್ಲಿಟ್ಟರೆ ಕರಗುವಂತಹ ಅದ್ಭುತ ಚಕ್ಕುಲಿಗಳು ತಯಾರು ಮಾಡುತ್ತಾರೆ. ಬಳಿಕ ಹಂಚಿಕೊಂಡು ತಿನ್ನುತ್ತಾರೆ. ಇನ್ನು ನಿಗದಿಪಡಿಸಿದ ಒಬ್ಬರು ಇವತ್ತು ನಮ್ಮ ಮನೇಲಿ ಚಕ್ಲಿ ಕಂಬ್ಳ ಉಂಟು ಬನ್ನಿ ಎಂದು ಕರೆಯುತ್ತಾರೆ. ಅವರ ಮನೆಗೆ ಎಲ್ಲರೂ ಹೋಗಿ ಚಕ್ಕುಲಿ ಮಾಡುತ್ತಾರೆ. ಅವರ ಕಷ್ಟ-ಸುಖ, ಹಾಡು- ಪಾಡಿಗೆ ಆ ದಿನ ಸಾಕ್ಷಿಯಾಗುತ್ತದೆ.

    ಈ ವಿಶಿಷ್ಟ ಸಂಪ್ರದಾಯಕ್ಕೆ ‘ಚಕ್ಲಿ ಕಂಬ್ಳ' ಎಂದೇ ಹೆಸರು. ಊರ ಹಿರಿಯರಿಂದ ಹಿಡಿದು ಕಿರಿಯರವರೆಗೂ ಎಲ್ರೂ ಜೊತೆಗೂಡಿ ಸಂಭ್ರಮಿಸೋಕೂ ಒಂದು ಅವಕಾಶ. ಹೀಗೆ ಜಾನಪದ ಆಚರಣೆಗಳು ಜನರ ಒಗ್ಗಟ್ಟನ್ನ ಗಟ್ಟಿಗೊಳಿಸುತ್ತದೆ ಅನ್ನೊದಕ್ಕೆ ಈ ಚಕ್ಲಿ ಕಂಬ್ಳವೂ ಸಾಕ್ಷಿ.

    ವರದಿ: ಎ.ಬಿ.ನಿಖಿಲ್, ಮುಂಡಗೋಡು
    Published by:guruganesh bhat
    First published: