ಉತ್ತರ ಕನ್ನಡ: ಒಂದು ಕಡೆ ನೃತ್ಯ (Dance), ಸಂಗೀತದ ರಸದೌತಣ. ಇನ್ನೊಂದೆಡೆ ಭರ್ಜರಿ ಬಾಡೂಟದ (Non Veg Food) ಸ್ಪರ್ಧಾ ಕಣ. ಆಟ (Game) , ಊಟದ ನಡುವೆಯೇ ಕಳೆ ತುಂಬಿತ್ತು ನೋಡಿ ಅಂಕೋಲಾದ ಈ ಅಂಗಣ.
ಉಂಡೋನೆ ಮಹಾಶೂರ
ಯೆಸ್, ಹೀಗೆ ಭರ್ಜರಿ ಬಾಡೂಟ ಸವಿಯುತ್ತಿರೋದು ಯಾವುದೋ ವೀಕೆಂಡ್ ಪಾರ್ಟಿಲೋ, ಮದ್ವೆ ಡಿನ್ನರ್ ನಲ್ಲೋ ಅಲ್ವ, ಬದಲಿಗೆ ಉತ್ತರ ಕನ್ನಡದ ಅಂಕೋಲಾದಲ್ಲಿ ನಡೆದ 'ಉಂಡೋನೆ ಮಹಾಶೂರ' ಸ್ಪರ್ಧಾ ಕೂಟದಲ್ಲಿ.. ಶೆಟಗೇರಿಯ ಕ್ರಿಯೇಟಿವ್ ಗ್ರೂಫ್ ಆಫ್ ಅಂಕೋಲಾ ಎಂಬ ಯುವಕರ ತಂಡ ಕಳೆದ ಎರಡು ವಾರದಿಂದ ಇಂತಹ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಂತಿಮವಾಗಿ ಫಿನಾಲೆ ಕೂಟ ಭರ್ಜರಿಯಾಗಿಯೇ ನಡೆಯಿತು.
ನಾಲ್ವರ ಒಂದು ತಂಡ
ಸಂಕಷ್ಟಿಗೊಮ್ಮೆ ಅನ್ನದಾನ ಮಾಡುವ ಅನುಪ್ ನಾಯಕ್ ಮತ್ತು ಗೆಳೆಯರು ಈ ಸಲ ಏನಾರೂ ಡಿಫ್ರೆಂಟಾಗಿ ಮಾಡ್ಬೇಕು ಅಂತ ಯೋಚಿಸಿ ಸ್ಪರ್ಧೆ ಇಟ್ಟಿದ್ರು, ಅಂಕೋಲಾ ದ 30 ವಿವಿಧ ತಂಡಗಳು ಇದರಲ್ಲಿ ಭಾಗವಹಿಸಿದ್ದವು. ಅದರಲ್ಲಿ ಫೈನಲ್ ಗೆ ಬಂದಿದ್ದು ಎಂಟೇ ತಂಡ. ಇಲ್ಲಿ ನಾಲ್ವರಂತೆ ಒಂದು ಗ್ರೂಪ್ ರಚಿಸಿಕೊಂಡು ಸ್ಪರ್ಧೆ ಒಡ್ಡಬೇಕು.
30 ನಿಮಿಷ, 15 ಕೆಜಿ
ತಿನ್ನೋದಂದ್ರೆ ಮಾಮೂಲು ಏನು ಅಲ್ಲರೀ, ಮೂವತ್ತು ನಿಮಿಷದಲ್ಲಿ ಬರೋಬ್ಬರಿ 15 ಕೆಜಿ ಊಟನ ಖಾಲಿ ಮಾಡ್ಬೇಕು ಅನ್ನೋದೇ ಸವಾಲು. ಅಂಕೋಲಾ ಸ್ಪೆಷಲ್ ಕೊಟ್ಟೆರೊಟ್ಟಿ, ಚಿಕನ್ ಬಿರಿಯಾನಿ, ಕಬಾಬ್, ಅನ್ನ, ರಸಂ, ಮೊಟ್ಟೆ ಎಲ್ಲಾ ಸೇರಿ ಭರ್ತಿ ಹದಿನೈದು ಕೆಜಿ ತೂಕ ನಾಲ್ಕು ಜನರ ತಂಡ ಮೂವತ್ತು ನಿಮಿಷದಲ್ಲಿ ತಮ್ಮ ಕೈ-ಬಾಯಿ ಚಳಕ ತೋರಿಸಿತು. ಅಂದಹಾಗೆ ಅಂಕೋಲಾದಲ್ಲಿ ಮೊದಲ ಬಾರಿಗೆ ಇಂತಹ ಕಾರ್ಯಕ್ರಮ ಇಷ್ಟು ಅದ್ಧೂರಿಯಾಗಿ ನಡೆದಿದ್ದು ಜನರಂತೂ ಖುಷಿಪಟ್ಟರು. ಇನ್ನು 'ಉಂಡೋನೆ ಮಹಾಶೂರ'ದಲ್ಲಿ ನೃತ್ಯ, ಸಂಗೀತಗಳು ಮನರಂಜಿಸಿದವು.
ಭರ್ಜರಿ ತಿಂದವರು ಇವರೇ!
ತೃಪ್ತಿ ತುತ್ತು ತಂಡ 9 ಕೆಜಿ ಊಟ ಮಾಡುವುದರೊಂದಿಗೆ 25,000 ರೂಪಾಯಿ ಬಹುಮಾನ ಗೆದ್ದು ಪ್ರಥಮ ಸ್ಥಾನ ಪಡೆದುಕೊಂಡರೆ, ಆಟೋರಾಜ ತಂಡ 8 ಕೆಜಿ ಆಹಾರ ತಿನ್ನೋ ಮೂಲಕ 15,000 ಪ್ರೈಸ್ ಜೊತೆಗೆ ಎರಡನೇ ಸ್ಥಾನ ಪಡೆದುಕೊಂಡಿತು. ಒಟ್ಟಿನಲ್ಲಿ ಭರ್ಜರಿ ಬಾಡೂಟದ ಉಂಡೋನೆ ಮಹಾಶೂರ ಸ್ಪರ್ಧೆಯು ಅಂಕೋಲಾದಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ