ಉತ್ತರ ಕನ್ನಡ: ಹೂವಿನಲ್ಲಿ ಐ ಲವ್ ಶಿರಸಿ, ಮಾರಿಕಾಂಬಾ ದೇಗುಲ, (Marikamba Temple) ಮಂಜುಗುಣಿ ದೇವರು, ಯಾಣ, ಮಹಾಸ್ಯಂದನ ರಥ, ಪುಷ್ಪವಲ್ಲಿಯಲ್ಲಿ ಅರಳಿದ ಆದಿಯೋಗಿ, ಯಲ್ಲಮ್ಮ, ನಳನಳಿಸುವ ಗುಲಾಬಿ, ಚಿಲಿಪಿಲಿ ಗುಡುವ ಹಕ್ಕಿಗಳು. ಹೌದು, ಈ ಎಲ್ಲ ದೃಶ್ಯ ಕಂಡು ಬಂದಿದ್ದು ಶಿರಸಿಯಲ್ಲಿ ನಡೆದ ಫಲಪುಷ್ಪ (Sirsi Flowers Show) ಪ್ರದರ್ಶನದಲ್ಲಿ. ಹಾಗಿದ್ರೆ ಹೇಗಿತ್ತು 'ಫ್ಲವರ್ ಫೆಸ್ಟ್ʼ ಅನ್ನೋದನ್ನ ನೋಡೋಣ.
ಕೆಂಪು ಗುಲಾಬಿಯ ಆಕರ್ಷಣೆ
ಯೆಸ್, ಶಿರಸಿಯಲ್ಲಿ ಕಳೆದ ಹದಿನೈದು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಫಲಪುಷ್ಪ ಪ್ರದರ್ಶನ ಈ ಬಾರಿ ಇನ್ನೂ ಸಂಭ್ರಮದಿಂದ ನಡೆಯಿತು. ಸುಮಾರು 25,000ಕ್ಕೂ ಹೆಚ್ಚಿನ ತಳಿಯ ಹೂವುಗಳನ್ನು ತೋಟಗಾರಿಕಾ ಇಲಾಖೆ ಕಸಿ ವಿಧಾನದ ಮೂಲಕ ನಾನಾ ವಿಧದ ಹೂವುಗಳನ್ನು ಪ್ರದರ್ಶನಕ್ಕಿಟ್ಟರೆ, ಸ್ಥಳೀಯ ಆರೆಕೊಪ್ಪದ ನಿವಾಸಿಯೊಬ್ಬರು ಬೆಳೆದ ಗುಲಾಬಿಗಳನ್ನು ತೆಗೆದುಕೊಳ್ಳಲು ಜನ ಮುಗಿಬಿದ್ದರು. 100 ರೂಪಾಯಿಗೆ ಒಂದರಂತೆ ಗುಲಾಬಿ ಗಿಡ ಮಾರಾಟವಾದರೆ, ನಂತರದಲ್ಲಿ ಒಂದೇ ವರ್ಷದಲ್ಲಿ ಬೆಳೆಯುವ ಹಲಸು ಜನರ ನೋಟ ಕದಿಯಿತು.
ಇದನ್ನೂ ಓದಿ: Uttara Kannada: ಮಲೆನಾಡ ರೈತರ ಮೊಗದಲ್ಲಿ ನಗು ತಂದ ಬಿಸಿಲನಾಡಿನ ಚೆಲುವೆ!
ಮಾರಿಕಾಂಬೆ, ಸೆಲ್ಫಿ ಸ್ಟ್ಯಾಂಡ್, ಗನ್ ಶಾಪ್ ವಿಶೇಷ
ಮಂಗನ ಓಡಿಸುವ ಸಾಧನಕ್ಕೆ ಗನ್ ರೂಪ ಕೊಟ್ಟ ಪಾಂಡುರಂಗ ಭಟ್ಟರ ಗನ್ ಶಾಪ್ ಅಂತೂ ಕೃಷಿಕರ ಮನ ಗೆದ್ದಿತು. ಪುಷ್ಪಗಳಿಂದ ಅರಳಿದ ವಿವಿಧ ಕಲಾಕೃತಿಗಳು, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಸೆಲ್ಫೀ ಸ್ಟ್ಯಾಂಡ್, ಆಜಾದಿ ಕಾ ಅಮೃತ ಮಹೋತ್ಸವ, ಮಾರಿಕಾಂಬಾ ದೇಗುಲ, ತೆಂಗಿನ ಗರಿಯ ನಾಗ ಸಿಂಹಾಸನ ಇದೆಲ್ಲವೂ ಜನರ ಮೆಚ್ಚುಗೆ ಪಡೆಯಿತು.
ಇದನ್ನೂ ಓದಿ:
ಒಟ್ಟಿನಲ್ಲಿ ಶಿರಸಿಯಲ್ಲಿ ನಡೆದ ಫಲಪುಷ್ಪ ಪ್ರದರ್ಶನ ಹತ್ತು ಹಲವು ವೆರೈಟಿಗಳಿಗೆ ಸಾಕ್ಷಿಯಾಯಿತು. ಜನರು ಕೂಡಾ ಫ್ಲವರ್ ಶೋನಲ್ಲಿ ತುಂಬಾ ಉತ್ಸುಕತೆಯಿಂದ ಪಾಲ್ಗೊಂಡು ಖುಷಿಪಟ್ಟರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ