Karwar: ಕಡಲ ತಡಿಯಲ್ಲಿ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ! ನೋಡುಗರಿಗೆ ಭರಪೂರ ಮನರಂಜನೆ

ಕೆಲವರು ಸಣ್ಣಪುಟ್ಟ ಮೀನುಗಳನ್ನು ಹಿಡಿದು ಖುಷಿ ಪಟ್ರೆ, ಇನ್ನು ಕೆಲವರು ಕೆ.ಜಿಗೂ ಹೆಚ್ಚು ತೂಕದ ಬೃಹತ್ ಮೀನನ್ನು ಹಿಡಿದ್ರು. ಅತಿ ಹೆಚ್ಚು ಮೀನು ಹಿಡಿದವರನ್ನು ವಿಜೇತರೆಂದು ಘೋಷಣೆ ಮಾಡಲಾಯಿತು.

ಕಾರವಾರದಲ್ಲಿ ನಡೆದ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ

ಕಾರವಾರದಲ್ಲಿ ನಡೆದ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ

  • Share this:
ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರದಲ್ಲಿ (Karwar) ನಿನ್ನೆ ವಿನೂತನ ಸ್ಪರ್ಧೆ (Compitation) ನಡೆಯಿತು. ಇತ್ತೀಚಿಗೆ ತೆರೆಮರೆಗೆ ಸರಿಯುತ್ತಿರುವ ಗಾಳ ‌ಮೀನುಗಾರಿಕೆ (Fishing) ಮತ್ತೆ ಪ್ರೋತ್ಸಾಹಿಸಬೇಕು ಎನ್ನುವ ನಿಟ್ಟಿನಲ್ಲಿ ಮೊಟ್ಟ ಮೊದಲ ಬಾರಿಗೆ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ದೆ ಹಮ್ಮಿಕೊಳ್ಳಲಾಗಿತ್ತು. ಕಡಲ ತಡಿಯಲ್ಲಿ (Sea) ನೂರಾರು ಸ್ಪರ್ಧಾಳುಗಳು ಮೀನು (Fish) ಹಿಡಿದು, ತಮ್ಮ ಮೀನುಗಾರಿಕೆ ಕಲೆ ಪ್ರದರ್ಶಿಸಿದ್ರು. ಸ್ಪರ್ಧಾಳುಗಳ ಪೈಕಿ ಒಂದಿಷ್ಡು ಮಂದಿ ಮೀನು ಹಿಡಿದು ಖುಷಿ ಪಟ್ರೆ ಇನ್ನು ಒಂದಿಷ್ಟು ಮಂದಿ ಖಾಲಿ ಕೈಯಲ್ಲಿ ಮರಳುತ್ತಿರುವುದು ಕಂಡುಬಂತು.

ಕಾರವಾರದಲ್ಲಿ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ

ಕೆಲವೆಡೆ ಆಗಾಗ ಕೆರೆಯಲ್ಲಿ ಮೀನು ಹಿಡಿಯುವುದನ್ನ ನೋಡುತ್ತಿರುತ್ತೇವೆ. ಇನ್ನೂ ಕೆಲವೆಡೆ ಬಲೆ, ಕೂಣಿ ಮೂಲಕ ಕೆರೆಯಲ್ಲಿ ಬೆಳೆಸಲಾದ ಮೀನುಗಳನ್ನು ಬೇಟೆಯಾಡಲಾಗುತ್ತದೆ. ಆದ್ರೆ ಕಾರವಾರದಲ್ಲಿ ಇದೇ ಮೊದಲಬಾರಿಗೆ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ಆಯೋಜಿಸಲಾಗಿತ್ತು. ವಿವಿಧೆಡೆಯಿಂದ ಆಗಮಿಸಿದ್ದ ಸ್ಪರ್ಧಾಳುಗಳು ತಮ್ಮದೇ ಶೈಲಿಯಲ್ಲಿ ಗಾಳ ಹಾಕುವ ಕಲೆ ಪ್ರದರ್ಶಿಸಿದರು‌.

ಗಾಳ ಹಾಕಿ ಮೀನು ಹಿಡಿಯುವ ಪದ್ಧತಿಗೆ ಪ್ರೋತ್ಸಾಹ

ಗಾಳ ಹಾಕಿ ಮೀನು ಹಿಡಿಯುವ ಪದ್ದತಿ ಇತ್ತೀಚೆಗೆ ಮರೆಯಾಗತೊಡಗಿದೆ. ಎಲ್ಲೊ‌ ಒಂದಿಷ್ಟು ಮಂದಿ ಹವ್ಯಾಸಕ್ಕಾಗಿ ಆಗಾಗ ಕೆರೆ, ನದಿ‌ದಂಡೆಗಳಲ್ಲಿ ಕುಳಿತು ಗಾಳ ಹಾಕಿ‌‌ ಒಂದೋ‌ ಎರಡೊ‌ ಮೀನನ್ನು ಹಿಡಿಯುತ್ತಿರುತ್ತಾರೆ. ಆದರೆ ಈ ಪದ್ದತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉತ್ತರಕನ್ನಡದ ಯುವ ಮೀನುಗಾರರ ಸಂಘರ್ಷ ಸಮಿತಿ ಸದಸ್ಯರು ಕಾರವಾರದಲ್ಲಿ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ಆಯೋಜಿಸಿದ್ದರು.

ಇದನ್ನೂ ಓದಿ: Heavy Rain: ಕೋಟೆನಾಡಿನ ಜನರನ್ನು ಕಂಗೆಡಿಸಿದ ಭಾರೀ ಮಳೆ; ಬಿರುಗಾಳಿ ಅಬ್ಬರಕ್ಕೆ ಅಡಿಕೆ-ತೆಂಗು ನಾಶ

ಹೊರ ಜಿಲ್ಲೆಗಳಿಂದಲೂ ಆಗಮಿಸಿದ್ದ ಸ್ಪರ್ಧಿಗಳು

ಬೈತಖೋಲ್ ಬಂದರು ವ್ಯಾಪ್ತಿಯ ಅಲೆತಡೆಗೊಡೆಯ ಎರಡು ಬದಿಯಲ್ಲಿ ಅವಕಾಶ ಕಲ್ಪಿಸಿದ್ದು ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದ ಸಾಕಷ್ಟು ಮಂದಿ ಆಗಮಿಸಿದ್ದರು. ಈ ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಮುಲ್ಲೈ‌ ಮುಗಿಲನ್ ಇದೊಂದು ಒಳ್ಳೆಯ ಸ್ಪರ್ಧೆ. ಮುಂದಿನ ದಿನಗಳಲ್ಲಿ ಈ ವಿಭಿನ್ನ ಸ್ಪರ್ಧೆಯನ್ನು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಗಾಳ ಹಾಕುವವರನ್ನು ಆಹ್ವಾನಿಸಿ ನಡೆಸುವಂತಾಗಬೇಕು.‌ ಇದರಿಂದ ಪ್ರವಾಸೋದ್ಯಮದ ಅಭಿವೃದ್ದಿ ಕೂಡ ಸಾಧ್ಯವಾಗಲಿದೆ ಎಂದು ಹೇಳಿದರು.

ಏನ್ ಅಂತಾರೆ ಸ್ಪರ್ದಾಳುಗಳು? ಹೇಗಿತ್ತು ಹುಮ್ಮಸ್ಸು?

ಇನ್ನು ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಗೆ ಉತ್ತರಕನ್ನಡ ಜಿಲ್ಲೆಯಿಂದ ಮಾತ್ರವಲ್ಲದೆ ಹುಬ್ಬಳ್ಳಿ ಸೇರಿ ವಿವಿಧ ಭಾಗಗಳಿಂದ 50 ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ರೇಡಿಯಂ ಹಾಗೂ ಕೈ ಗಾಳ ಹೀಗೆ ಎರಡು ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಕೆಲವರು ಸಣ್ಣಪುಟ್ಟ ಮೀನುಗಳನ್ನು ಹಿಡಿದು ಖುಷಿ ಪಟ್ರೆ, ಇನ್ನು ಕೆಲವರು ಕೆ.ಜಿಗೂ ಹೆಚ್ಚು ತೂಕದ ಬೃಹತ್ ಮೀನನ್ನು ಹಿಡಿದ್ರು. ಅತಿ ಹೆಚ್ಚು ಮೀನು ಹಿಡಿದವರನ್ನು ವಿಜೇತರೆಂದು ಘೋಷಣೆ ಮಾಡಲಾಯಿತು.

ಮೀನು ಹಿಡಿಯೋ ಅವಕಾಶ ಸಿಕ್ಕಿದ್ದಕ್ಕೆ ಸಂತಸ

ಗಾಳ ಹಾಕಿ ಮೀನು ಹಿಡಿಯುವವರ ಸಂಖ್ಯೆ ಕಡಿಮೆಯಾಗಿದೆ. ಕೆಲವೇ ಕೆಲವು ಮಂದಿ ಮಾತ್ರ ಹವ್ಯಾಸಕ್ಕಾಗಿ ಗಾಳದಲ್ಲಿ ಮೀನು ಹಿಡಿಯುತ್ತಾರೆ. ಆದರೆ ಈ ಪದ್ದತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಏರ್ಪಡಿಸಿದ ಸ್ಪರ್ಧೆಯಿಂದ ನಿಜಕ್ಕೂ ಖುಷಿಯಾಗಿದೆ. ಎಲ್ಲೊ ಮೊಬೈಲ್ ಹಿಡಿದು ಟೈಮ್ ಪಾಸ್ ಮಾಡುತ್ತಿದ್ದ ನಮಗೆ ಈ ರಿತಿ ಗಾಳದ ಮೀನು ಹಿಡಿಯಲು ಅವಕಾಶ ಸಿಕ್ಕಿರುವುದು ಹೆಚ್ಚು ಖುಷಿಯಾಗಿದೆ ಎನ್ನುತ್ತಾರೆ ಸ್ಪರ್ಧಾಳುಗಳು.

ಇದನ್ನೂ ಓದಿ: Puttur: ಹಿಂದೂ ವ್ಯಾಪಾರಿಗಳಿಂದಲೇ ಮಲ್ಲಿಗೆ ಖರೀದಿಸಿ: ಭಕ್ತಾದಿಗಳಿಗೆ ಸಂಘಟನೆಗಳ ಮನವಿ

ಮೊಬೈಲ್ ಹಿಡಿದು ಕಾಲಾಹರಣ ಮಾಡುವ ಇಂದಿನ ದಿನಗಳಲ್ಲಿ ಗಾಳ ಹಾಕಿ ಮೀನು ಹಿಡಿಯುವ ವಿಭಿನ್ನ ಸ್ಪರ್ಧೆ ಆಯೋಜನೆ ಮಾಡಿರುವುದು ಎಲ್ಲರ ಗಮನ ಸೆಳೆಯಿತು. ಸ್ಪರ್ಧಾಳುಗಳ ಪೈಕಿ ಒಂದಿಷ್ಡು ಮಂದಿ ಮೀನು ಹಿಡಿದು ಖುಷಿ ಪಟ್ರೆ ಇನ್ನು ಒಂದಿಷ್ಟು ಮಂದಿ ಖಾಲಿ ಕೈಯಲ್ಲಿ ಮರಳುತ್ತಿರುವುದು ಕಂಡುಬಂತು.
Published by:Annappa Achari
First published: