• Home
  • »
  • News
  • »
  • uttara-kannada
  • »
  • Uttara Kannada: ಉತ್ತರ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಫ್ಲೋರ್ ಬಾಲ್ ಮ್ಯಾಚ್!

Uttara Kannada: ಉತ್ತರ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಫ್ಲೋರ್ ಬಾಲ್ ಮ್ಯಾಚ್!

X
ಇಲ್ಲಿ ಮ್ಯಾಚ್ ನೋಡಿ

"ಇಲ್ಲಿ ಮ್ಯಾಚ್ ನೋಡಿ"

ರಾಜ್ಯಮಟ್ಟದ ಈ ಪಂದ್ಯಾವಳಿಯಲ್ಲಿ ಸುಮಾರು 25 ತಂಡಗಳು ಹಣಾಹಣಿ ನಡೆಸಿದವು. ಬಾಲಕರ ವಿಭಾಗದಲ್ಲಿ ಬೆಂಗಳೂರು ಹಾಗೂ ಬಾಲಕಿಯರ ವಿಭಾಗದಲ್ಲಿ ಮಂಗಳೂರು ಪ್ರಥಮ ಸ್ಥಾನಕ್ಕೆ ಮುತ್ತಿಟ್ಟವು.

  • Share this:

    ಕ್ರೀಡಾಂಗಣದಲ್ಲಿ ಪಟಪಟನೆ ಓಡಾಡ್ತಿರೋ ಆಟಗಾರರು, ಚೆಂಡಿನ ಮೇಲೆ ಪಾರುಪತ್ಯ ಸಾಧಿಸೋಕೆ ಭಾರೀ ಸ್ಪರ್ಧೆ. ಗೋಲ್ ಗಳಿಸುವ ಆತುರತೆ, ಕಪ್ ಗೆಲ್ಲೋ ಕಾತರ. ಹಾಗಂತ ನೋಡೋಕೆ ಥೇಟ್ ಹಾಕಿ ಆಟದಂತೆಯೇ ಕಂಡ್ರೂ ಇದು ಹಾಕಿಯಲ್ಲ. ಮಲೆನಾಡಿನಲ್ಲಿ ಇತ್ತೀಚಿಗೆ ನಡೆದ ಹಾಕಿಯನ್ನೇ ಹೋಲುವ ಆಟವೊಂದರ ಕೂಟವಿದು! ಹಾಕಿ ಮಾದರಿಯಲ್ಲೇ ಆಟ ಆಡುವ ಅಪರೂಪದ ಆಟವೇ ಈ ಫ್ಲೋರ್ ಬಾಲ್. ಬಹುತೇಕ ಹಾಕಿಯ ಸಾಮ್ಯತೆಯನ್ನೇ ಹೊಂದಿರೋ ಈ ಕ್ರೀಡಾಕೂಟ (Floorball Match) ಉತ್ತರ ಕನ್ನಡದ (Uttara Kannada News) ಕುಮಟಾ ತಾಲೂಕಿನ (Kumta Taluk) ಸರ್ಕಾರಿ ಕಾಲೇಜಿನಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರ ಸಂಘ ಏರ್ಪಡಿಸಿತ್ತು.


    ರಾಜ್ಯಮಟ್ಟದ ಈ ಪಂದ್ಯಾವಳಿಯಲ್ಲಿ ಸುಮಾರು 25 ತಂಡಗಳು ಹಣಾಹಣಿ ನಡೆಸಿದವು. ಬಾಲಕರ ವಿಭಾಗದಲ್ಲಿ ಬೆಂಗಳೂರು ಹಾಗೂ ಬಾಲಕಿಯರ ವಿಭಾಗದಲ್ಲಿ ಮಂಗಳೂರು ಪ್ರಥಮ ಸ್ಥಾನಕ್ಕೆ ಮುತ್ತಿಟ್ಟವು.


    ಇದನ್ನೂ ಓದಿ: Uttara Kannada: ಈ ಜಾತ್ರೆಯಲ್ಲಿ ರಂಗೋಲಿಯೇ ಆಕರ್ಷಣೆ! ಕಾಂತಾರ, ಗಂಧದಗುಡಿ ವೈಭವ ನೋಡಿ


    ಏನಿದು ಆಟ?
    ಹಾಕಿ ಮಾದರಿಯ ಈ ಆಟದಲ್ಲಿ ಏಳು ಜನರ ತಂಡವಿರುತ್ತದೆ. ಸಿಮೆಂಟ್ ಫ್ಲೋರ್ ಮೇಲೆ ಹಾಕಿ ಸ್ಟಿಕ್​ಗಿಂತ ಅಗಲವಾದ ಮುಖ ಹೊಂದಿರುವ ಸ್ಟಿಕ್​ನಲ್ಲಿ ಫ್ಲೋರ್ ಬಾಲ್ ಆಡಲಾಗುತ್ತೆ. ಅಷ್ಟೇ ಅಲ್ದೇ ಇದನ್ನು ಔಟ್ ಡೋರ್ ಹಾಗೂ ಇನ್ ಡೋರ್ ಎರಡೂ ರೀತಿಯಲ್ಲಿ ಆಡಬಹುದು.


    ಇದನ್ನೂ ಓದಿ: PVC Pipe Gun: ಮಂಗನನ್ನು ಓಡಿಸೋಕೆ ಪೈಪ್ ಗನ್! ಕೃಷಿಕರೇ, ವಿಡಿಯೋ ನೋಡಿ


    ಒಟ್ಟಿನಲ್ಲಿ ಮೊಟ್ಟ ಮೊದಲ ಬಾರಿಗೆ ಉತ್ತರ ಕನ್ನಡದಲ್ಲಿ ನಡೆದ ಫ್ಲೋರ್ ಬಾಲ್ ಕ್ರೀಡೆಗೆ ಉತ್ತರ ಸ್ಪಂದನೆ ವ್ಯಕ್ತವಾಯಿತು.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: