Uttara Kannada: ಪ್ರಾಣ ಪಣಕ್ಕಿಟ್ಟು ಬೆಕ್ಕಿನ ಮರಿ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

Cat Viral Video: ಮುದ್ದಾದ ಬೆಕ್ಕಿನ ಮರಿಯೊಂದು 60 ಅಡಿ ಆಳದ ಬಾವಿಯಲ್ಲಿ ಬಿದ್ದು ಒದ್ದಾಡುತ್ತಿತ್ತು. ಅಕ್ಕಪಕ್ಕದ ಮನೆಯವರು ಬೆಕ್ಕಿನ ಮರಿಯನ್ನು ರಕ್ಷಿಸುವಂತೆ ಅಗ್ನಿಶಾಮಕ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.

 • Share this:

  ಉತ್ತರ ಕನ್ನಡ: ಬಾವಿಯ ಸುತ್ತ ನೆರೆದಿರೋ ಜನ, ಲಗುಬಗೆಯಿಂದ ಕಾರ್ಯಾಚರಣೆಯಲ್ಲಿ ತೊಡಗಿರೋ ಅಗ್ನಿಶಾಮಕದಳದ (Fire Brigade) ಸಿಬ್ಬಂದಿ. ನೋಡಿದವ್ರಿಗೆ ಪಾಳು ಬಿದ್ದಂತಿರೋ ಈ ಬಾವಿಲಿ  (Old Well) ಯಾರಾದ್ರೂ ಬಿದ್ದಿದ್ದಾರಾ? ಛೇ! ಅಂತನಿಸೋ ಸಂದರ್ಭ. ಆದ್ರೆ ಈ ಬಾವಿಗೆ ಬಿದ್ದಿರೋದು ಮನುಷ್ಯರಲ್ಲ, ಪುಟ್ಟ ಪುಟಾಣಿ ಬೆಕ್ಕು! (Cat In Well)


  ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಪೊಲೀಸ್ ಕ್ವಾರ್ಟರ್ಸ್ ಎದುರು ಇರೋ 60 ಅಡಿ ಆಳದ ಬಾವಿಯಲ್ಲಿ ಬಿದ್ದ ಬೆಕ್ಕಿನ ಮರಿಯನ್ನು ಯಲ್ಲಾಪುರ ಅಗ್ನಿಶಾಮಕ ದಳದವರು ಸುರಕ್ಷಿತವಾಗಿ ರಕ್ಷಿಸಿದ್ದಾರೆ.


  60 ಅಡಿ ಆಳದ ಬಾವಿಯಲ್ಲಿ ಮುದ್ದು ಬೆಕ್ಕಿನ ಮರಿ!
  ಮುದ್ದಾದ ಬೆಕ್ಕಿನ ಮರಿಯೊಂದು 60 ಅಡಿ ಆಳದ ಬಾವಿಯಲ್ಲಿ ಬಿದ್ದು ಒದ್ದಾಡುತ್ತಿತ್ತು. ಅಕ್ಕಪಕ್ಕದ ಮನೆಯವರು ಬೆಕ್ಕಿನ ಮರಿಯನ್ನು ರಕ್ಷಿಸುವಂತೆ ಅಗ್ನಿಶಾಮಕ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಅಗ್ನಿಶಾಮಕದಳದ ಸಿಬ್ಬಂದಿಯೂ ಅರೆಕ್ಷಣವೂ ತಡಮಾಡದೇ ಮುಗ್ದ ಬೆಕ್ಕಿನ ಮರಿಯನ್ನು ರಕ್ಷಣೆ ಮಾಡಿದ್ದಾರೆ.


  ಇದನ್ನೂ ಓದಿ: Snake Viral Video: ನಾಗರಹಾವು ರಸ್ತೆ ದಾಟಲು ಹೆದ್ದಾರಿಯೇ ಅರ್ಧ ಗಂಟೆ ಬಂದ್!


  ಯಲ್ಲಾಪುರ ಅಗ್ನಿಶಾಮಕ ಸಿಬ್ಬಂದಿಯ ರೋಚಕ ಕಾರ್ಯಾಚರಣೆ
  ಈ ಕಾರ್ಯಾಚರಣೆಯಲ್ಲಿ ಯಲ್ಲಾಪುರ ಅಗ್ನಿಶಾಮಕ ಠಾಣಾಧಿಕಾರಿ ಶಂಕರಪ್ಪ ಅಂಗಡಿ, ಪ್ರಧಾನ ಅಗ್ನಿಶಾಮಕ ಹನುಮಂತ ನಾಯ್ಕ, ಆಗ್ನಿ ಶಾಮಕ ಸಿಬ್ಬಂದಿಗಳಾದ ಅಮಿತ ಗುನಗಿ, ಉಲ್ಲಾಸ ನಾಗೇಕರ, ನೀಲಕಂಠ ಅಗ್ನಿಶಾಮಕ ವಾಹನ ಚಾಲಕ ಗಜಾನನ ನಾಯ್ಕ ಪಾಲ್ಗೊಂಡಿದ್ದರು.
  ಇದನ್ನೂ ಓದಿ: Uttara Kannada: 2 ಸಾವಿರಕ್ಕಿಂತ ಕಡಿಮೆ ಹಣಕ್ಕೆ ಅದ್ಭುತ ಕೃಷಿ ಉಪಕರಣ ತಯಾರಿಸಿದ ವಿದ್ಯಾರ್ಥಿಗಳು!


  ಸದ್ಯ ಈ ಅಗ್ನಿಶಾಮಕದ ಸಿಬ್ಬಂದಿ ಬೆಕ್ಕಿನ ಮರಿ ರಕ್ಷಿಸಿರೋದು ವೈರಲ್ ಆಗಿದೆ. ಜೊತೆಗೆ ಸಾರ್ವಜನಿಕರ ಪ್ರಶಂಸೆಗೂ ಪ್ರಾಪ್ತವಾಗಿದೆ.

  Published by:ಗುರುಗಣೇಶ ಡಬ್ಗುಳಿ
  First published: