• Home
 • »
 • News
 • »
 • uttara-kannada
 • »
 • Uttara Kannada: ಘನತ್ಯಾಜ್ಯದಿಂದ ಗೊಬ್ಬರ! ಇದು ಅಡಿಕೆಗೂ ಭಾರೀ ಬೆಸ್ಟ್ ಅಂತೆ!

Uttara Kannada: ಘನತ್ಯಾಜ್ಯದಿಂದ ಗೊಬ್ಬರ! ಇದು ಅಡಿಕೆಗೂ ಭಾರೀ ಬೆಸ್ಟ್ ಅಂತೆ!

ಇಲ್ಲಿದೆ ನೋಡಿ ವಿಡಿಯೋ

"ಇಲ್ಲಿದೆ ನೋಡಿ ವಿಡಿಯೋ"

ಈ ಗೊಬ್ಬರವು ಬಾಳೆ, ಅಡಿಕೆ, ಮೆಕ್ಕೆಜೋಳ, ಭತ್ತ ಕೃಷಿಗಳಿಗೆ ಹೇಳಿ ಮಾಡಿಸಿದಂತಿದೆ ಅಂತಾರೆ ಕೃಷಿಕರು. ಯೂರಿಯಾ ಗೊಬ್ಬರಕ್ಕಿಂತಲೂ ಈಗ ರೈತರು ಈ ಗೊಬ್ಬರವನ್ನೇ ನೆಚ್ಚಿಕೊಳ್ಳೋ ಮಟ್ಟಿಗೆ ಶಿರಸಿ ನಗರಸಭೆ ತ್ಯಾಜ್ಯ ವಿಲೇವಾರಿ ಮಾದರಿಯಾಗಿದೆ.

 • News18 Kannada
 • Last Updated :
 • Uttara Kannada, India
 • Share this:

  ಶಿರಸಿ: ತ್ಯಾಜ್ಯ ವಿಲೇವಾರಿ ತಲೆನೋವಿನ ಕೆಲ್ಸ ಅಂದ್ಕೊಳ್ಳೋದೇ ಜಾಸ್ತಿ. ಆದ್ರೆ ಶಿರಸಿ ನಗರಸಭೆಗೆ ಅದೊಂದು ಆದಾಯ ಮೂಲ!  ಶಿರಸಿ ನಗರಸಭೆ (Sirsi Municipality) ಅದೆಂತಹದ್ದೇ ತ್ಯಾಜ್ಯವಿರಲಿ, ಅದ್ರಿಂದಾನೂ ಉಪಯೋಗ ಪಡೆದುಕೊಳ್ಳುತ್ತಿದೆ! ಅರೇ, ಇದೇಗೆ ಸಾಧ್ಯ ಅಂದ್ಕೊಂಡ್ರಾ? ಬನ್ನಿ ಶಿರಸಿಗೆ ಹೋಗಿಬರೋಣ. ಸ್ಥಳೀಯ ಸಂಸ್ಥೆಯೊಂದು ಮನಸ್ಸು ಮಾಡಿದ್ರೆ ಸಂಗ್ರಹವಾಗುವ ಕಸದಿಂದ (Solid Waste) ಲಾಭ ತೆಗೀಬಹುದು ಅನ್ನೋದಕ್ಕೆ ಶಿರಸಿ ಬೆಸ್ಟ್ ಎಕ್ಸಾಂಪಲ್. ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ದಿನವೊಂದಕ್ಕೆ ಹತ್ತು ಟನ್ನಷ್ಟು ಹಸಿ ಕಸ ಒಟ್ಟುಗೂಡುತ್ತದೆ. ಇದರಲ್ಲಿ ಮಾಂಸ ಹಾಗೂ ತರಕಾರಿ ತ್ಯಾಜ್ಯಗಳು ಇರ್ತವೆ. ಇವನ್ನೆಲ್ಲ ವಿಂಗಡಿಸಿ ಎರೆಹುಳು ಗೊಬ್ಬರ ಮಾಡಿ ಜನರಿಗೆ ಸಾವಯವ ಗೊಬ್ಬರವನ್ನು (Organic Fertilizer)  ಮಾರಲಾಗ್ತಿದ್ದು ರೈತರ ಬೆಳೆಗಳಿಗೆ ಸಂಜೀವಿನಿಯಾಗಿದೆ.


  ವಿಂಗಡನೆಯಾಗುವ ಹಸಿ ಘನ ತ್ಯಾಜ್ಯವನ್ನು ನಿರ್ದಿಷ್ಟ ತಾಪದವರೆಗೆ ಒಂದು ಗುಂಡಿಯಲ್ಲಿ ಹಾಕಲಾಗುತ್ತದೆ, ಆಫ್ರಿಕನ್ ಹಾಗೂ ಭಾರತೀಯ ತಳಿಯ ಎರೆಹುಳುವನ್ನು ಆ ತ್ಯಾಜ್ಯಕ್ಕೆ ಬೆರೆಸಲಾಗುತ್ತದೆ.


  5 ಕೆಜಿಗೆ 50 ರೂಪಾಯಿ ಮಾತ್ರ
  ಹೀಗೆ ಡಿಕಂಪೋಸ್ ಆಗುತ್ತಾ 30 ದಿನದ ನಂತರ ಅದ್ರಿಂದ ಗೊಬ್ಬರ ಉತ್ಪಾದನೆಯಾಗುತ್ತೆ. ಇನ್ನು ಪ್ರಾಣಿ ತ್ಯಾಜ್ಯಕ್ಕೆ ಎನ್​ಝೈಮ್ ಸೇರಿಸಿ ಒಂದೇ ವಾರದಲ್ಲೂ ಗೊಬ್ಬರವನ್ನು ತಯಾರಿಸಬಹುದು. ಹೀಗೆ ಸಿಗುವ ಗೊಬ್ಬರವನ್ನು ನಗರಸಭೆಯು 5 ಕೆಜಿಗೆ 50 ರೂಪಾಯಿಯಂತೆ ಮಾರಾಟ ಮಾಡುತ್ತಿದೆ.


  ಇದನ್ನೂ ಓದಿ: Kamakshi Temple: ಕುದಿಯುವ ಎಣ್ಣೆಯಿಂದ ವಡೆ ತೆಗೆಯೋ ಉತ್ತರ ಕನ್ನಡದ ಭಕ್ತರು!


  ಈ ಗೊಬ್ಬರವು ಬಾಳೆ, ಅಡಿಕೆ, ಮೆಕ್ಕೆಜೋಳ, ಭತ್ತ ಕೃಷಿಗಳಿಗೆ ಹೇಳಿ ಮಾಡಿಸಿದಂತಿದೆ ಅಂತಾರೆ ಕೃಷಿಕರು. ಶಿರಸಿಯ ಪೌರ ಕಾರ್ಮಿಕರು, ನಗರಸಭೆಯ ನಾರಾಯಣ್ ನಾಯಕ್, ಗುತ್ತಿಗೆದಾರರಾದ ರವಿ ಭಟ್, ಶರತ್ ಅವರ ಶ್ರಮದಿಂದ ಈ ಪ್ರಯೋಗ ಫಲಕಂಡಿದೆ.


  ಇದನ್ನೂ ಓದಿ: Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾಧನೆ


  ಯೂರಿಯಾ ಗೊಬ್ಬರಕ್ಕಿಂತಲೂ ಈಗ ರೈತರು ಈ ಗೊಬ್ಬರವನ್ನೇ ನೆಚ್ಚಿಕೊಳ್ಳೋ ಮಟ್ಟಿಗೆ ಶಿರಸಿ ನಗರಸಭೆ ತ್ಯಾಜ್ಯ ವಿಲೇವಾರಿ ಮಾದರಿಯಾಗಿದೆ. ನಿಮಗೂ ಈ ಗೊಬ್ಬರ ಬೇಕಿದ್ದರೆ ಶಿರಸಿಯ ನಗರಸಭೆಯನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ:  97401 19288


  ವರದಿ: ಎ.ಬಿ.ನಿಖಿಲ್, ಮುಂಡಗೋಡು

  Published by:ಗುರುಗಣೇಶ ಡಬ್ಗುಳಿ
  First published: