• Home
 • »
 • News
 • »
 • uttara-kannada
 • »
 • Magician Family: ಇದು ಜಾದೂಗಾರ್ ಕುಟುಂಬ! ಅಪ್ಪ, ಮಗ, ಮಗಳು ಎಲ್ರೂ ಮಾಡ್ತಾರೆ ಮ್ಯಾಜಿಕ್

Magician Family: ಇದು ಜಾದೂಗಾರ್ ಕುಟುಂಬ! ಅಪ್ಪ, ಮಗ, ಮಗಳು ಎಲ್ರೂ ಮಾಡ್ತಾರೆ ಮ್ಯಾಜಿಕ್

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರಾಯಲ್ ಕೇರಿಯ ಈ ಜಾದೂಗಾರ್ ಕುಟುಂಬಕ್ಕೆ ಮ್ಯಾಜಿಕ್ ಕುಟುಂಬದಿಂದಲೇ ಬಳುವಳಿಯಾಗಿ ಬಂದ ವಿದ್ಯೆ!

 • Share this:

  ಬೆಂಕಿಯಿಂದ ಹ್ಯಾಂಡ್ ಕರ್ಚೀಫು. ಹ್ಯಾಂಡ್ ಕರ್ಚೀಫ್ ಒಳಗಡೆ ಪಾರಿವಾಳ. ಸ್ಟಿಕ್ ಕೊಟ್ರೆ ಫ್ಲವರ್, ತುಂಡು ಬಟ್ಟೆ ಕೊಟ್ರೆ ಸ್ಟಿಕ್ಕು. ಹೀಗೆ ಅದೇನೇ ಕೈಗೆ ತಗೊಂಡ್ರು ಅಲ್ಲೊಂದು ಜಾದೂ (Magic) ನಡೆಯುತ್ತೆ. ಎಷ್ಟೇ ಸೀಕ್ರೆಟ್ ಆಗಿ ಇಸ್ಪೀಟ್ ಕಾರ್ಡ್ ತೆಗೆದ್ರೂ ಅದ್ಯಾವುದು ಅನ್ನೋದು ಕ್ಷಣ ಮಾತ್ರದಲ್ಲಿ ಹೇಳೋ ಚಾಕಚಕ್ಯತೆ. ಇದುವೇ ನೋಡಿ ಉತ್ತರ ಕನ್ನಡದ (Uttara Kannada News) ಜಾದೂ ಕುಟುಂಬದ ಕಣ್ಕಟ್ಟು. ಹೌದು, ಹೀಗೆ ಕಣ್ಣ ಮುಂದೆಯೇ ಕಣ್ಕಟ್ಟು ಮಾಡೋ ಇವ್ರದ್ದು (Jadugar Family) ಜಾದೂಗಾರ್ ಫ್ಯಾಮಿಲಿ.


  ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರಾಯಲ್ ಕೇರಿಯ ಈ ಜಾದೂಗಾರ್ ಕುಟುಂಬಕ್ಕೆ ಮ್ಯಾಜಿಕ್ ಕುಟುಂಬದಿಂದಲೇ ಬಳುವಳಿಯಾಗಿ ಬಂದ ವಿದ್ಯೆ. ಇವರು ಶ್ರೀರಾಮ್ ಜಾದೂಗಾರ್ ಹಾಗೂ ಅವರ ತಂಗಿ ಅನು ಜಾದೂಗಾರ್. ಇವರಿಬ್ಬರೂ ತಮ್ಮ ತಂದೆ ಅಶೋಕ್ ಜಾದೂಗಾರ್ ಅವರಿಂದ ಕಲಿತ ಮ್ಯಾಜಿಕ್ ವಿದ್ಯೆಯನ್ನ ಇಂದಿಗೂ ಪ್ರದರ್ಶಿಸುತ್ತಾ ಬಂದಿದ್ದಾರೆ.


  ಹಳ್ಳಿಯಿಂದ ದಿಲ್ಲಿಯವರೆಗೂ ಇವರದ್ದೇ ಮ್ಯಾಜಿಕ್!
  ತಂದೆ ಹಾಗೂ ಅಣ್ಣನ ಜೊತೆಗೂಡಿ ಬಾಲ್ಯದಿಂದಲೇ ಅನು ಕೂಡಾ ಮ್ಯಾಜಿಕ್ ಶೋ ಮಾಡ್ತಿದ್ದಾರೆ. ಶ್ರೀರಾಮ್ ಅವರಂತೂ ಜಾದೂ ಕಲೆಯಿಂದಾಗಿ ಹಳ್ಳಿಯಿಂದ ದಿಲ್ಲಿಯವರೆಗೂ ಎರಡೆರಡು ಬಾರಿ ಪಯಣ ಬೆಳೆಸಿದ್ದಾರೆ. ಸರಿಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ಜಾದೂ ಪ್ರದರ್ಶನ ನೀಡಿ ಜನರಿಂದ ಭೇಷ್ ಎನಿಸಿಕೊಂಡಿದ್ದಾರೆ.


  ಇದನ್ನೂ ಓದಿ: Positive Story: 1,500 ರೂಪಾಯಿಯಲ್ಲಿ ಕಮಾಲ್ ಮಾಡಿದ ಉತ್ತರ ಕನ್ನಡದ ಯುವಕ


  ಹಲವು ಸಿನಿಮಾಗಳಲ್ಲೂ ನಟನೆ
  ಈಗ ಅವರು ಮಗ ಮತ್ತು ಮಗಳು ಆ ಕಲೆಯನ್ನ ಉಳಿಸಿ ಬೆಳೆಸುತ್ತಾ ಸಾಗಿದ್ದಾರೆ. ರಾಜ್ಯಾದ್ಯಂತ ಸಂಚರಿಸಿ ಜನರ ಮುಂದೆ ತಮ್ಮ ಕಲೆಯನ್ನ ಪ್ರದರ್ಶಿಸುತ್ತಾ ಬಂದಿದ್ದಾರೆ. ಶ್ರೀರಾಮ್ ದೆಹಲಿ ಕನ್ನಡ ಸಂಘದಿಂದ ಎರಡು ಬಾರಿ ಆಹ್ವಾನ ಪಡೆದು ರಾಷ್ಟ್ರ ರಾಜಧಾನಿಯಲ್ಲಿ ತಮ್ಮ ಇಂದ್ರಜಾಲದ ಕಲೆ ಪ್ರದರ್ಶಿಸಿ ಸೈ ಎನಿಸಿಕೊಂಡವರು. ಜೊತೆಗೆ ಕಲಾವಿದನೂ ಆಗಿರುವ ಶ್ರೀರಾಮ್ ಹಲವು ಚಲನಚಿತ್ರಗಳಲ್ಲೂ ನಟಿಸಿದ್ದಾರೆ.


  ಇದನ್ನೂ ಓದಿ: Uttara Kannada: ಕಂಬಳದ ಬಾರುಕೋಲು ಇಲ್ಲೇ ತಯಾರಾಗುತ್ತೆ!


  ಶ್ರೀರಾಮ್ ತಂಗಿ ಅನು ಕೂಡಾ ಪ್ರತಿಭಾವಂತ ಜಾದೂಗಾರ್ತಿ. ಇವರು ಕೂಡ ತಾವೇ ಸ್ವತಂತ್ರವಾಗಿ ಇದುವರೆಗೆ 70 ಜಾದೂ ಪ್ರದರ್ಶನವನ್ನು ನೀಡಿದ್ದಾರೆ. ಹೀಗೆ ಇಡೀ ಕುಟುಂಬವೇ ಜಾದೂ ಕಲೆಯನ್ನು ಉಳಿಸಲು ಹಾಗೂ ಅದನ್ನ ಬೆಳೆಸಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ.


  ವರದಿ: ಎ.ಬಿ.ನಿಖಿಲ್, ಮುಂಡಗೋಡ್

  Published by:ಗುರುಗಣೇಶ ಡಬ್ಗುಳಿ
  First published: