Fake Note: ಕಾರವಾರದಲ್ಲೇ ಪ್ರಿಂಟ್ ಆಗ್ತಿದೆ ಖೋಟಾ ನೋಟು! ಇದರ ಕಿಂಗ್ ಪಿನ್ ಯಾರು ಗೊತ್ತಾ?

ಕಾರವಾರದಿಂದ ಗೋವಾದ ವ್ಯಕ್ತಿಗಳಿಗೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ನಸುಕಿನಲ್ಲಿಯೇ ಕಾರವಾರಕ್ಕೆ ಆಗಮಿಸಿ ಠಿಕಾಣಿ ಹೂಡಿದ್ದರು. ಅದರಂತೆ ಆರೋಪಿಗಳ ಚಲನವಲನಗಳನ್ನು ಸಂಗ್ರಹಿಸುತ್ತಿದ್ದ ಪೊಲೀಸರು ರಾತ್ರಿ ಸರಿಯಾಗಿ 7.30ಕ್ಕೆ ಕೋಡಿಭಾಗದ ಖಾಸಗಿ ಹೋಟೆಲ್ ಒಂದರ ಬಳಿ ದಾಳಿ ನಡೆಸಿ ಹಣ ವರ್ಗಾವಣೆಯಲ್ಲಿ ತೊಡಗಿಕೊಂಡಿದ್ದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಾರವಾರ, ಉತ್ತರ ಕನ್ನಡ: ಜಿಲ್ಲೆಯಲ್ಲಿ ಈವರೆಗೆ ದಾಖಲಾದ ಸಾಮಾನ್ಯ ಎಲ್ಲಾ ಪ್ರಕರಣಗಳಲ್ಲಿ (Case) ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಖೋಟಾ ನೋಟುಗಳನ್ನು (Fake Notes) ತಂದು ಚಲಾವಣೆ ಮಾಡಿದ ಪ್ರಕರಣಗಳೇ ಬೆಳಕಿಗೆ ಬಂದಿದ್ದವು. ಆದರೆ ಇದೀಗ ಜಿಲ್ಲಾ ಕೇಂದ್ರ ಕಾರವಾರದಿಂದಲೇ (Karwar) ಬೇರೆಡೆಗೆ ಖೋಟಾ ನೋಟು ಮುದ್ರಿಸಿ (Print) ಸಾಗಿಸಲಾಗುತ್ತಿತ್ತು ಎನ್ನುವ ಸಂಗತಿ ಕರಾವಳಿಗರನ್ನು ಬೆಚ್ಚಿ ಬೀಳಿಸುವಂತಿದೆ. ನಿನ್ನೆ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಕಾರವಾರ ಮತ್ತು ಗೋವಾ (Gao) ಮೂಲದ ಐವರನ್ನ ಬಂಧಿಸಿದ್ದು (Arrest) ಕಾರವಾರದವರೇ ಕಿಂಗ್ ಪಿನ್ (King Pin) ಎನ್ನೋ ಮಾಹಿತಿ ಬಯಲಾಗಿದೆ.

ಖೋಟಾ ನೋಟು ಚಲಾವಣೆ ಮಾಡುವವರು ಅಂದರ್

ಕಾರವಾರ ನಗರದ ಕೋಡಿಭಾಗ ಭದ್ರಾ ಹೋಟೆಲ್ ಬಳಿ ಖೋಟಾ ನೋಟು ಚಲಾವಣೆ ವೇಳೆ ಸಿಕ್ಕಿ ಬಿದ್ದ ಪ್ರಕರಣದ ಮುಖ್ಯ ಕಿಂಗ್‌ಫಿನ್ ಕಾರವಾರದವನೇ ಆಗಿದ್ದು, ಇಲ್ಲಿಯೇ ಖೋಟಾ ನೋಟುಗಳು ಮುದ್ರಿಸಿ ತನ್ನ ಆಪ್ತರ ಮೂಲಕ ವ್ಯವಸ್ಥಿತವಾಗಿ ಚಲಾವಣೆ ಮಾಡಿಸುತ್ತಿದ್ದ ಆತಂಕಕಾರಿ ಸಂಗತಿ ತಿಳಿದು ಬಂದಿದೆ.

ಕಾರವಾರ, ಗೋವಾದಲ್ಲಿ ಚಲಾವಣೆ

ಈಗಾಗಲೇ ಜಿಲ್ಲೆಯ ಕರಾವಳಿ ಭಾಗ ಹಾಗೂ ನೆರೆಯ ಗೋವಾ ರಾಜ್ಯದಲ್ಲಿ ಲಕ್ಷಾಂತರ ರು.ಮೌಲ್ಯದ ನಕಲಿ ಕರೆನ್ಸಿಗಳು ಚಲಾವಣೆ ಆಗಿದ್ದು, ತಲೆಮರೆಸಿಕೊಂಡಿರುವ ಈ ಜಾಲದ ಪ್ರಮುಖ ಸೂತ್ರಧಾರ ಮುಸ್ತಾಕ್ ಹಸನ್ ಶೇಖ್ ಜೊತೆ ಇನ್ನೂ ಹಲವರ ಸಾಥ್ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತನಿಖೆ ತೀವೃಗೊಳಿಸಿದ್ದಾರೆ...

ಇದನ್ನೂ ಓದಿ: Sukri Gowda: ಮತ್ತೆ ಅಸ್ವಸ್ಥರಾದ ಪದ್ಮಶ್ರೀ ಸುಕ್ರಿಗೌಡ, ಮಂಗಳೂರು ಆಸ್ಪತ್ರೆಗೆ ದಾಖಲಾದ 'ಹಾಡುಹಕ್ಕಿ'

ಈ ಹಿಂದೆಯೂ ಖೋಟಾ ನೋಟು ಚಲಾವಣೆ

ಜಿಲ್ಲೆಯಲ್ಲಿ ಈ ಹಿಂದೆ ಖೋಟಾ ನೋಟುಗಳ ಚಲಾವಣೆ ಆಗುತ್ತಿದೆ ಎನ್ನುವ ಬಗ್ಗೆ ಕೇಳಿ ಬಂದಿತ್ತು. ಆದರೆ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿರಲಿಲ್ಲ. ಕಳೆದ ವರ್ಷ 2021 ರ ಜೂನ್ ತಿಂಗಳಲ್ಲಿ ದಾಂಡೇಲಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು 72 ಲಕ್ಷ ರು. ಮೌಲ್ಯದ ಖೋಟಾನೋಟುಗಳು ಹಾಗೂ 4.50.ಲಕ್ಷ ಮೌಲ್ಯದ ಅಸಲಿ ನೋಟುಗಳೊಂದಿಗೆ ಆರು ಮಂದಿಯನ್ನು ಬಂಧಿಸಿ ಎರಡು ಕಾರುಗಳನ್ನು ವಶಕ್ಕೆ ಪಡೆದಿದ್ದರು.

ಆರೋಪಿಗಳಿಗಾಗಿ ಪೊಲೀಸರಿಂದ ಶೋಧ

ಕಳೆದ ಕೆಲ ದಿನಗಳ ಹಿಂದೆ ಅಂಕೋಲಾ ಎರಡು ಸ್ಥಳದಲ್ಲಿ ಖೋಟಾನೋಟು ಚಲಾವಣೆ ಆಗುತ್ತಿರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್ ಈ ಪ್ರಕರಣದ ಜಾಲ ಪತ್ತೆ ಹಚ್ಚಲು ಅಂಕೋಲಾ ಸಿಪಿಐ ಸಂತೋಷ ಶೆಟ್ಟಿ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಿದ್ದು, ಕಳೆದ 12 ದಿನಗಳಿಂದ ಈ ತಂಡ ಆರೋಪಿಗಳ ಪತ್ತೆಗಾಗಿ  ಶೋಧ ಕಾರ್ಯ ನಡೆಸಿತ್ತು.

ನಸುಕಿನಲ್ಲೇ ಪೊಲೀಸರ ಕಾರ್ಯಾಚರಣೆ

ಕೊನೆಗೂ ಅಂಕೋಲಾದಲ್ಲಿ ಚಲಾವಣೆಗೊಳಿಸುತ್ತಿದ್ದ ಓರ್ವನನ್ನು ವಶಕ್ಕೆ ಪಡೆದು ಮಾಹಿತಿ ಸಂಗ್ರಹಿಸಿದ ತಂಡ ಕಾರವಾರದಿಂದ ಗೋವಾದ ವ್ಯಕ್ತಿಗಳಿಗೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ನಸುಕಿನಲ್ಲಿಯೇ ಕಾರವಾರಕ್ಕೆ ಆಗಮಿಸಿ ಠಿಕಾಣಿ ಹೂಡಿದ್ದರು. ಅದರಂತೆ ಆರೋಪಿಗಳ ಚಲನವಲನಗಳನ್ನು ಸಂಗ್ರಹಿಸುತ್ತಿದ್ದ ಪೊಲೀಸರು ರಾತ್ರಿ ಸರಿಯಾಗಿ 7.30ಕ್ಕೆ ಕೋಡಿಭಾಗದ ಖಾಸಗಿ ಹೋಟೆಲ್ ಒಂದರ ಬಳಿ ದಾಳಿ ನಡೆಸಿ ಹಣ ವರ್ಗಾವಣೆಯಲ್ಲಿ ತೊಡಗಿಕೊಂಡಿದ್ದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳು


ದಂಧೆಯ ಕಿಂಗ್ ಪಿನ್ ಯಾರು ಗೊತ್ತಾ?

ಪ್ರಮುಖ ಆರೋಪಿ ಕೋಡಿಭಾಗದ ಮುಸ್ತಾಕ್ ಹಸನ್ ಶೇಖ್  ಈತ ಈ ಹಿಂದೆಯೂ ಹಲವು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಬಗ್ಗೆ ಮಾಹಿತಿ ಇದ್ದು ಈತನೇ ನಕಲಿ ಕರೆನ್ಸಿಗಳನ್ನು ಪ್ರಿಂಟ್ ಹಾಕುತ್ತಿದ್ದ ಎನ್ನಲಾಗಿದೆ. ಅದು ಕೂಡ ಜಿಲ್ಲಾ ಕೇಂದ್ರ ಕಾರವಾರದಿಂದಲೇ ತನ್ನ ಚಟುವಟಿಕೆಗಳ ಮೇಲೆ ಹಿಡಿತ ಹೊಂದಿದ್ದ ಎನ್ನಲಾಗಿದೆ.  ಈತನ ಜೊತೆ ಇನ್ನೂ ಹಲವರು ಸಾಥ್ ನೀಡಿದ್ದಾರೆ ಎನ್ನಲಾಗಿದ್ದು, ಇನ್ನುಳಿದವರ ಶೋಧ ಕಾರ್ಯ ಮುಂದುವರೆದಿದೆ.

ಇದನ್ನೂ ಓದಿ: Karwar: ಕಾರ್ಮಿಕ ಇಲಾಖೆ ಯೋಜನೆ ಪ್ರಚಾರಕ್ಕಾಗಿ ಹೊಸ ತಂತ್ರ, ಕಾರವಾರದಿಂದ ಬೆಂಗಳೂರಿನವರೆಗೂ ಸ್ಕೆಟಿಂಗ್!

ಜಿಲ್ಲೆಯ ಕರಾವಳಿ ಭಾಗದಲ್ಲಿ ವ್ಯವಸ್ಥಿತವಾಗಿ ಸಾಗಾಟವಾಗಿದ್ದು ಲಕ್ಷಾಂತರ ರು. ಮೌಲ್ಯದ ನಕಲಿ ನೋಟು ಚಲಾವಣೆಗೊಂಡಿದೆ ಎನ್ನಲಾಗಿದೆ. ಈತ ನೋಟ್ ಫ್ರಿಂಟ್ ಹಾಕುತ್ತಿದ್ದ ಸ್ಥಳ ಎಲ್ಲಿ, ಮಸೀನ್ ಎಲ್ಲಿಂದ ತಂದಿದ್ದ ಈವೆರೆಗೂ ಎಷ್ಟು ನಕಲಿ ನೋಟ್ ಫ್ರಿಂಟ್ ಹಾಕಿ ಚಲಾವಣೆ ಮಾಡಿದ್ದಾನೆ ಎನ್ನುವುದು ಪೊಲೀಸ್ ತನಿಖೆಯಿಂದಲೇ ತಿಳಿದು ಬರಬೇಕಿದೆ.
Published by:Annappa Achari
First published: