Tibetan Camp: ಉತ್ತರ ಕನ್ನಡದ ಮಿನಿ ಟಿಬೆಟ್! ಒಳಗೆ ಏನೇನಿದೆ? ವೀಡಿಯೋ ನೋಡಿ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಮಿನಿ ಟಿಬೆಟ್ ಅಂತಲೆ ಗುರುತಿಸಿಕೊಂಡಿದೆ. ಹಲವು ದಶಕಗಳಿಂದಲೂ ಇಲ್ಲಿ ಟಿಬೆಟ್ ದೇಶದಲ್ಲಿರುವ ವಾತಾವರಣವನ್ನು ಕಾಣಬಹುದಾಗಿದೆ. ಹಾಗಿದ್ರೆ, ಈ ಪ್ರದೇಶವನ್ನು ಯಾಕಾಗಿ ಮಿನಿ ಟಿಬೆಟ್ ಅಂತಾ ಕರೀತಾರೆ ಅನ್ನೊದನ್ನ ಇಲ್ಲಿ ನೋಡಿ

ಟಿಬೆಟಿಯನ್ ಕ್ಯಾಂಪ್

"ಟಿಬೆಟಿಯನ್ ಕ್ಯಾಂಪ್"

  • Share this:
    ಉತ್ತರ ಕನ್ನಡ: ಟಿಬೆಟ್‌ಗೆ ಹೋಗ್ಬೇಕು ಅಂತ ಕನಸು ಕಟ್ಕೊಂಡಿದ್ದೀರಾ? ಬಣ್ಣದ ಬಾವುಟ, ಬುದ್ಧನ ವಿಗ್ರಹಗಳನ್ನ ಹತ್ತಿರದಿಂದ ನೋಡ್ಬೇಕು ಅಂತಿದೆಯಾ? ಆದರೆ, ಟಿಬೇಟ್‌ಗೆ ಹೋಗೋದೇಗೆ..? ಇಲ್ಲೇ ಆ ಥರ ಮಸ್ತ್ ಜಾಗ ಇದ್ರೆ ಹೋಗಿ ಬರ್ಬಹುದಿತ್ತು ಅಲ್ವಾ..? ನೀವ್ ಹೇಳಿದ್ದೂ ಸರಿ ಇದೆ. ನಮ್ದೇ ಕರ್ನಾಟಕದಲ್ಲಿ (Karnataka)  ಅದೂ ಉತ್ತರ ಕನ್ನಡದ ಮುಂಡಗೋಡಲ್ಲಿ (Mundgod Mini Tibet) ಮಿನಿ ಟಿಬೇಟೇ ಇದೆ! ನೀವು ಅಂದಾಜೂ ಮಾಡಿರಲ್ಲ, ಇಲ್ಲಿ 170 ಎಕರೆಗಿಂತಲೂ ಹೆಚ್ಚಿನ ಪ್ರದೇಶದಲ್ಲಿ 20,000 ಕ್ಕಿಂತ್ಲೂ ಹೆಚ್ಚು ಟಿಬೇಟಿಯನ್ಸ್ (Mundgod Tibetan Camp) ಇದ್ದಾರೆ! ನೀವೂ ವಿಡಿಯೋ ನೋಡಿಬಿಡಿ.

    ಬೆಂಗಳೂರಿಂದ ಮುಂಡಗೋಡಿಗೆ ಸೀದಾ ಬಸ್ ಇದೆ. ಮುಂಡಗೋಡ ಪೇಟೆಯಿಂದ ಸೀದಾ ಯಲ್ಲಾಪುರ ರಸ್ತೆಲಿ ಒಂದ್ ಐದ್ ಕಿಲೋ ಮೀಟರ್ ಬಂದ್ರೆ ಸಾಕು, ನಾವು ಭಾರತ ದೇಶದಲ್ಲೇ ಇಲ್ವೇನೋ ಅನಿಸಿಬಿಡುತ್ತೆ! ಅಷ್ಟರ ಮಟ್ಟಿಗೆ ಟಿಬೆಟಿಯನ್ನರು ಇಲ್ಲಿ ಆವರಿಸಿಕೊಂಡಿದ್ದಾರೆ.

    ಹೀಗಿದೆ ಮಿನಿ ಟಿಬೆಟ್
    ಮಿನಿ ಟಿಬೆಟ್ ಅಂತಲೆ ಕರೆಸಿಕೊಳ್ಳುವ ಮುಂಡಗೋಡದಲ್ಲಿ ಒಟ್ಟು ಏಳು ಬೌದ್ಧ ವಿಹಾರ, ಮೆಡಿಕಲ್ ಕಾಲೇಜು, ಎರಡು ಯೂನಿವರ್ಸಿಟಿ, ಟಿಬೇಟಿಯನ್ಸ್ ಪೇಟೆ.. ಹೀಗೆ ಕಣ್ಣು ಹಾಯಿಸಿದಲ್ಲೆಲ್ಲಾ ಟಿಬೇಟಿಯನ್ ಜನರೇ.. ಅಂದ ಹಾಗೆ ಇವರೆಲ್ಲ 1966 ರಿಂದಲೇ ಇಲ್ಲಿ ಜೀವನ‌ ನಡೆಸಿಕೊಂಡು ಬಂದಿದ್ದಾರೆ.

    Mundgod Tibetan Camp
    ಮುಂಡಗೋಡಿನ ಟಿಬೇಟಿಯನ್ ಕ್ಯಾಂಪ್​ಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

    ಮುಂಡಗೋಡಿನ ಟಿಬೇಟಿಯನ್ ಕ್ಯಾಂಪ್​ಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
    ಭಾರತದಲ್ಲಿ ಬೇರೆಲ್ಲೂ ಕಾಣಸಿಗದ ವಿಶಿಷ್ಟ್ಯ ವಾಸ್ತುಶಿಲ್ಪದ ಬೃಹತ್ ಕಟ್ಟಡ, ಬುದ್ಧನ ಪ್ರತಿಮೆ, ಟಿಬೇಟಿಯನ್ ಚಿತ್ರಕಲೆ ನಿಮ್ಮನ್ನ ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತೆ. ಕೃಷಿ, ಖಾದ್ಯತಿಂಡಿ, ಬಟ್ಟೆ ಕಸೂತಿ ಅವರದ್ದೇ ಪೇಟೆಯಲ್ಲಿ ಮಾರಾಟ ಮಾಡುತ್ತಾರೆ. ಹೀಗೆ ಏನೇಲ್ಲ ಸಾಧ್ಯ ಇದೆಯೋ ಅದೆಲ್ಲ ಮಾಡಿ ಜೀವನ ನಡೆಸುತ್ತಿದ್ದಾರೆ.

    ಇದನ್ನೂ ಓದಿ:  Sri Ramalingeshwara Temple: ಶಿವನ ಎದುರೇ ಶ್ರೀಮನ್ನಾರಾಯಣ! ನೀವೂ ದರ್ಶನ ಪಡೆಯಿರಿ

    ಟಿಬೆಟಿಯನ್ನರಲ್ಲಿ ಭಾರತೀಯತೆ
    ನೋಡೋಕೆ, ಕೇಳೋಕೆ ಏನೋ ಇವರು ಟಿಬೆಟಿಯನ್ನರು. ಆದರೆ, ಇವರು ಭಾರತೀಯರಲ್ಲಿ ಭಾರತೀಯರಾಗಿ ಬೆರೆತುಹೋಗಿದ್ದಾರೆ. ಹೆತ್ತ ತಾಯಿ‌ ಟಿಬೆಟ್ ಆದರೆ, ಹೊತ್ತು ಸಲುಹುತ್ತಿರುವವಳು ಭಾರತ ಮಾತೆ ಅನ್ನೋ ನೆನಪನ್ನು ಇವರು ಯಾವತ್ತು ಮರೆತು ನಡೆದವರಲ್ಲ.

    ಇದನ್ನೂ ಓದಿ: Droupadi Murmu: ವಿಡಿಯೋ ನೋಡಿ; ಯಕ್ಷಗಾನ ಶೈಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಅಭಿನಂದನೆ

    ಮುಂಡಗೋಡಕ್ಕೆ ಹೀಗೆ ಬನ್ನಿ
    ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಕ್ಕೆ ಆಗಮಿಸುವವರು ಹುಬ್ಬಳಿ ತನಕ ಮಾತ್ರ ರೈಲು ಅಥವಾ ವಿಮಾನದಲ್ಲಿ ಬರಬಹುದು. ಹುಬ್ಬಳ್ಳಿಯಿಂದ ಮುಂಡಗೋಡಿಗೆ ಬಸ್ ಅವಲಂಬಿಸಬೇಕಾಗುತ್ತದೆ. ಅದರ ಹೊರತಾಗಿ, ಮುಂಡಗೋಡಿಗೆ ಬರೋಕೆ ಬೆಂಗಳೂರು ಸೇರಿ ರಾಜ್ಯದ ಇತರ ನಗರಗಳಿಂದ ಬಸ್ ವ್ಯವಸ್ಥೆ ಇದೆ. ಹಾಗಿದ್ರೆ ಇನ್ನೇಕೆ ತಡ ಕಡಿಮೆ ಖರ್ಚಿನಲ್ಲಿ ಟಿಬೆಟ್ ಪಯಣ ಬೆಳೆಸಿ ವಿಭಿನ್ನ ಅನುಭವ ಪಡೆಯೋಣ.. ಏನಂತೀರ?

    ವರದಿ: ಎ.ಬಿ.ನಿಖಿಲ್
    Published by:guruganesh bhat
    First published: