ಉತ್ತರ ಕನ್ನಡ: ಅರೆ! ಇದೇನಪ್ಪ ಆಫೀಸ್ ಒಳಗಡೆನೇ ಕಾರು ಓಡಿಸೋಕ್ ಶುರು ಮಾಡಿಬಿಟ್ರು ಅಂತಾ ಕನ್ಫ್ಯೂಶನ್ ಆಗ್ಬೇಡಿ. ಹೀಗೆ ಎಷ್ಟೇ ಡ್ರೈವ್ ಮಾಡಿದ್ರೂ ರೋಡ್ ಅಷ್ಟೇ ಮುಂದೆ ಹೋಗುತ್ತೆ ಬಿಟ್ರೆ, ಕಾರಿನಲ್ಲಿದ್ದವರಲ್ಲ. ನಿಜ, ರಾಜ್ಯದ ಕೆಲವು ಆರ್ ಟಿಓ ಕಚೇರಿಗಳಲ್ಲಿ ಈ ಆಟಿಕೆಯಂತಹ ಕಾರು ಇದ್ರು ಜನರಿಗೆ ಇದ್ರ ಮಾಹಿತಿನೇ ಕಮ್ಮಿ. ಇದೀಗ ಉತ್ತರ ಕನ್ನಡದ (Uttara Kannada News) ಕಾರವಾರ ಆರ್ಟಿಓದಲ್ಲೂ (Karwar RTO) ಈ ಕಾರು ಲಗ್ಗೆಯಿಟ್ಟಿದ್ದು ಜನರಿಗೂ ಟೆಸ್ಟ್ ಡ್ರೈವ್ ಮಾಡಬಹುದಾಗಿದೆ. ಹಾಗಿದ್ರೆ ಈ ಕಾರು (Car Simulator) ಯಾವುದು? ಇದ್ರ ಉಪಯೋಗ ಏನು ಅಂತಾ ಕೇಳ್ತೀರ? ಬನ್ನಿ ಆ ಬಗ್ಗೆ ಮಾಹಿತಿ ಕೋಡ್ತೀವಿ ನೋಡಿ.
ಥೇಟ್ ಕಾರಿನಂತಿರೋ ಸಿಮುಲೇಟರ್!
ಯೆಸ್, ಪುಟ್ಟದಾದ ನ್ಯಾನೋ ಕಾರ್ನಂತಿರೋ ಇದು ಕಾರ್ ಸಿಮುಲೇಟರ್. ಅಂದ್ರೆ ಇದು ಕಾರಿನಾ ಚಾಲನಾ ಅನುಭವವನ್ನ ನೀಡುವ ಮಾಡೆಲ್. ಇದನ್ನ ಕಾರು ಚಾಲನಾ ತರಬೇತಿ ನೀಡಲು ಬಳಸಬಹುದಾಗಿದೆ. ರೋಡಲ್ಲಿ ಓಡಾಡೋ ಕಾರಿನಂತೆಯೇ ಇದಕ್ಕೂ ಕ್ಲಚ್, ಗೇರ್, ಬ್ರೇಕ್ ಎಲ್ಲವೂ ಇರುತ್ತೆ. ಮುಂದೆ ಸ್ಕ್ರೀನ್ ಗ್ರಾಫಿಕ್ಸ್ನಲ್ಲಿ ಮೂಡುವ ರಸ್ತೆಯಲ್ಲಿ ಕಾರನ್ನ ಓಡಿಸಬಹುದಾಗಿದೆ. ಈ ಕಾರು ಓಡಿಸೋದ್ರಿಂದ ಯಾವುದೇ ರಿಸ್ಕ್ ಇಲ್ಲ. ಆದ್ರೆ, ನಾವು ರೋಡ್ನಲ್ಲಿ ಗಾಡಿ ಓಡಿಸಬಹುದಾದರೆ ಮಾಡಬಹುದಾದ ಎಡವಟ್ಟುಗಳನ್ನ ಹೇಳಿಕೊಡುತ್ತೆ.
ಹೀಗಿರುತ್ತೆ ರಸ್ತೆಗಳು!
ಆಟೋಮೆಟೆಡ್ ಗ್ರಾಫಿಕ್ ಅಲ್ಲಿ ಹೈವೇ, ಫ್ಲೈ ಓವರ್, ಗುಡ್ಡಗಾಡು, ನಾರ್ಮಲ್ ರೋಡನ್ನು ಡಿಸ್ಪ್ಲೇ ಮಾಡಲಾಗುತ್ತದೆ. ಆ ಡಿಸ್ಪ್ಲೇಯಲ್ಲಿ ನಿಮ್ಮ ಜೊತೆ ಜೊತೆಗೇ ಬೇರೆ ವಾಹನಗಳು ಹೋಗುತ್ತಿರುತ್ತವೆ. ನೀವು ರೋಡಲ್ಲಿ ಕಾರು ಓಡಿಸಿದ ಅನುಭವ ಕೊಡೋ ಸಿಮ್ಯುಲೇಟರ್ ಇದು ಪಕ್ಕಾ ಡ್ರೈವಿಂಗ್ ಟ್ರೈನಿಂಗ್ ನೀಡುತ್ತೆ.
ಜನರಿಗೂ ಡ್ರೈವಿಂಗ್ ಅವಕಾಶ
ಸುಮಾರು 15 ಲಕ್ಷ ರೂಪಾಯಿ ವೆಚ್ಚದ ಈ ಮಾಡೆಲ್ ಅನ್ನು ಇದೀಗ ಕಾರವಾರದ ಆರ್.ಟಿ.ಓ ಆಫೀಸ್ ನಲ್ಲಿ ಇನ್ ಸ್ಟಾಲ್ ಮಾಡಲಾಗಿದೆ. ಒಂದು ವಾರದ ಹಿಂದಷ್ಟೇ ಬಂದಿರುವ ಈ ಮಾಡೆಲ್ ನೋಡಲು, ಓಡಿಸಲು ಜನರು ಕೂಡಾ ಉತ್ಸುಕರಾಗಿದ್ದಾರೆ.
ಇದನ್ನೂ ಓದಿ: Uttara Kannada: ಇವರಿಗೆ ಆಕಾಶವೇ ಬಂಡವಾಳ, ಕಗ್ಗಾಡ ಹಳ್ಳಿಯಲ್ಲಿದೆ 40 ಲಕ್ಷದ ಆಸ್ಟ್ರೋ ಫಾರ್ಮ್!
ನಾಲ್ಕು ಮೋಡ್ಗಳಿರುವ ಮೂರು ಸ್ಕ್ರೀನ್ ಇರುವ ಈ ವಾಹನ ಫುಲ್ ಎಲೆಕ್ಟ್ರಿಕಲ್ ಆಗಿವೆ. ಒಂದು ವಾರದ ಫಿಸಿಕಲ್ ಟ್ರೈನಿಂಗ್ ನಂತರ ಅಭ್ಯರ್ಥಿಗಳನ್ನು ಈ ಕಾರ್ ಸೀಟಲ್ಲಿ ಕೂರಿಸಿ ಡ್ರೈವಿಂಗ್ ಎಬಿಸಿಡಿ ಕಲಿಸಿಕೊಡುತ್ತಾರೆ. ಒಂದು ವಾರ ಈ ಕಾರಲ್ಲಿ ಕುಳಿತುಕೊಂಡು ಬೇಸಿಕ್ ಜ್ಞಾನವನ್ನು ಪಡೆಯಬಹುದು. ಜೊತೆಗೆ ಎಫೆಕ್ಟಿವ್ ಆಗಿ ಕಲಿಯಬಹುದು.
ಇದನ್ನೂ ಓದಿ: Uttara Kannada: ದೇವರಿಗೇ ಚೆಂದದ ಮನೆ ಕಟ್ಟಿಸಿದ್ರು ನೋಡಿ ಭಕ್ತರು!
ಸಿಮುಲೇಟರ್ ಡ್ರೈವ್ ಗೆ ರೆಡಿ ಆಗಿ!
ಹಾಗಿದ್ರೆ ಈ ಡೆಮೋ ಕಾರನ್ನ ಚಲಾಯಿಸೋ ಆಸೆ ನಿಮ್ಗಿದ್ರೆ ನೀವ್ ಕೂಡಾ ಕಾರವಾರ ಆರ್ ಟಿಓ ಕಚೇರಿಯನ್ನ ನೇರವಾಗಿ ಭೇಟಿ ಮಾಡಬಹುದು. ಈಗ ಡ್ರೈವಿಂಗ್ ಅದೆಷ್ಟು ಸುಲಭ ಅನ್ನೋ ಫೀಲ್ ಈ ಸಿಮುಲೇಟರ್ ಕೊಡೋದ್ರಲ್ಲಿ ಮಾತ್ರ ಸಂಶಯನೇ ಇಲ್ಲ.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ