• Home
  • »
  • News
  • »
  • uttara-kannada
  • »
  • Uttara Kannada: ಹೆರಿಗೆಯ ದಿನ ಬಂದ್ರೂ ಈ ಎಮ್ಮೆಗೆ ಕೆಚ್ಚಲೇ ಮೂಡಿಲ್ಲ!

Uttara Kannada: ಹೆರಿಗೆಯ ದಿನ ಬಂದ್ರೂ ಈ ಎಮ್ಮೆಗೆ ಕೆಚ್ಚಲೇ ಮೂಡಿಲ್ಲ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಸಾಮಾನ್ಯವಾಗಿ ಏನೇ ಇದ್ರೂ ಗರ್ಭಿಣಿಯಾದ ಎಂಟು ತಿಂಗಳ ಹೊತ್ತಿಗೆ ಎಮ್ಮೆಗೆ ಕೆಚ್ಚಲು ಮೂಡಬೇಕಿತ್ತು. ಆದರೆ ಈ ಎಮ್ಮೆಗೆ ಹತ್ತು ತಿಂಗಳಾದ್ರೂ ಅಂತಹ ಯಾವುದೇ ಲಕ್ಷಣವೂ ಕಾಣಿಸುತ್ತಿಲ್ಲ.

  • Share this:

    ಉತ್ತರ ಕನ್ನಡ: ಅಬ್ಬಬ್ಬ! ಈ ಎಮ್ಮೆಗೆ ಒಂಥರಾ ನೋವಾದ್ರೆ, ಇದನ್ನ ಸಾಕ್ತಿರೋ ಮನೆಯವರದ್ದೂ ಇನ್ನೊಂದು ರೀತಿಯ ವೇದನೆ. ಯಾರಲ್ಲೂ ಹೇಳಿಕೊಳ್ಳಲಾಗದ ಮೂಕ ಪ್ರಾಣಿಯ ರೋಧನೆ, ಅಷ್ಟಕ್ಕೂ ಈ ಎಮ್ಮೆಗೆ (Buffalo Farming) ಆಗಿದ್ದೇನು ಅಂತೀರಾ? ಅದನ್ನ ಕೇಳಿದ್ರೆ ನಿಮ್ ಕಣ್ಣಲ್ಲೂ ನೀರು ಬರೋದು ಗ್ಯಾರಂಟಿ. ಕೋಣದಂತೆ ಕಾಣೋ ಇದು ಕೋಣವಲ್ಲ, ಬದಲಿಗೆ ನಾಲ್ಕು ವರ್ಷದ ಎಮ್ಮೆ. ಅಷ್ಟೇ ಅಲ್ಲ, ಈ ಎಮ್ಮೆ ಈಗ 10 ತಿಂಗಳ ಗರ್ಭಿಣಿ. ಆದರೆ ಖೇದದ ಸಂಗತಿ ಅಂದ್ರೆ ಇನ್ನೇನು ಹೆರಿಗೆಯ ದಿನ ಹತ್ತಿರ ಬಂದ್ರೂ ಈ ಎಮ್ಮೆಗೆ ಇನ್ನೂ ಕೆಚ್ಚಲು ಬೆಳೆದಿಲ್ಲ. ಸ್ತನದ ಯಾವುದೇ ಗುರುತು ಕಾಣುತ್ತಿಲ್ಲ. ಹೀಗಾಗಿ ಮನೆ ಮಂದಿಯೂ ಗಾಬರಿಯಾಗಿದ್ದಾರೆ.


    ಹುಟ್ಟೋ ಎಮ್ಮೆಯ ಕಂದಮ್ಮಗಳ ಅವಸ್ಥೆ ಏನು ಅಂತಾ ಚಿಂತಿತರಾಗಿದ್ದಾರೆ. ಅಪರೂಪದಲ್ಲಿ ಅಪರೂಪದ ಈ ಪ್ರಕರಣ ಕಂಡು ಪಶುವೈದ್ಯರು ಅಚ್ಚರಿಯಾಗಿದ್ದಾರೆ. ಆದ್ರೂ ಹೆರಿಗೆಯಾಗಲಿ, ಮುಂದೆ ನೋಡೋಣ ಎಂಬ ವೈದ್ಯಾಧಿಕಾರಿಗಳ ಭರವಸೆ ಮೇಲಷ್ಟೇ ಮನೆ ಮಾಲೀಕರು ದಿನದೂಡುತ್ತಿದ್ದಾರೆ.




    ಇದನ್ನೂ ಓದಿ: Gokarna Kotitirtha: ಗೋಕರ್ಣದ ಪವಿತ್ರ ಕೋಟಿತೀರ್ಥಕ್ಕಿದೆ ಅಪಾರ ಮಹಿಮೆ!


    ಯಾರು ಸಾಕಿರೋ ಎಮ್ಮೆಯಿದು?
    ಇಂತಹ ಅಪರೂಪದ ಪ್ರಕರಣ ಪತ್ತೆಯಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಒಡಗೆರೆಯ ಭಾಸ್ಕರ್ ರಾಮ ಗೌಡ ಅವರ ಮನೆಯಲ್ಲಿ. ಪಾರಂಪರಿಕ ಹೈನುಗಾರಿಕೆ ಕುಟುಂಬದವರಾದ ಅವರ ಮನೆಯಲ್ಲಿ ಹುಟ್ಟಿದ ಈ ಎಮ್ಮೆ ನಾಲ್ಕು ವರ್ಷದಲ್ಲಿ ಗರ್ಭಿಣಿಯಾಗಿದೆ. ನೋಡಲು ಆರೋಗ್ಯಕರವಾಗಿಯೇ ಇರುವ ಈ ಎಮ್ಮೆಗೆ ಸ್ತನಗಳೇ ಇಲ್ಲ. ಕೆಚ್ಚಲಿಲ್ಲದ ಎಮ್ಮೆಗೆ ಹೆರಿಗೆ ಆದ್ರೂ ಮಾಡೋದೇನು ಅಂತಾ ಮನೆ ಮಂದಿಯೂ ವೇದನೆಯಲ್ಲಿದ್ದಾರೆ.


    ಇದನ್ನೂ ಓದಿ: Uttara Kannada: 10 ಸಾವಿರದಲ್ಲೇ ರೋಪ್ ವೇ ನಿರ್ಮಿಸಿದ ಕೃಷಿಕ!


    8 ತಿಂಗಳಿಗೇ ಕೆಚ್ಚಲು ಮೂಡಬೇಕಿತ್ತು
    ಸಾಮಾನ್ಯವಾಗಿ ಏನೇ ಇದ್ರೂ ಗರ್ಭಿಣಿಯಾದ ಎಂಟು ತಿಂಗಳ ಹೊತ್ತಿಗೆ ಎಮ್ಮೆಗೆ ಕೆಚ್ಚಲು ಮೂಡಬೇಕಿತ್ತು. ಆದರೆ ಈ ಎಮ್ಮೆಗೆ ಹತ್ತು ತಿಂಗಳಾದ್ರೂ ಅಂತಹ ಯಾವುದೇ ಲಕ್ಷಣವೂ ಕಾಣಿಸುತ್ತಿಲ್ಲ. ಇನ್ನಾದ್ರೂ ಈ ಎಮ್ಮೆ ಆರೋಗ್ಯ ಸರಿಹೋಗ್ಲಿ ಅನ್ನೋ ಬೇಡಿಕೆ ಬೇಗನೆ ಫಲಿಸಲಿ ಅಂತ ನಾವೂ ಪ್ರಾರ್ಥಿಸಬಹುದಷ್ಟೇ ಅಲ್ವಾ?


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: