• Home
  • »
  • News
  • »
  • uttara-kannada
  • »
  • Uttara Kannada: ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆ ಅಭಿಯಾನ, ಪಾಲ್ಗೊಳ್ಳೋದು ಹೇಗೆ?

Uttara Kannada: ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆ ಅಭಿಯಾನ, ಪಾಲ್ಗೊಳ್ಳೋದು ಹೇಗೆ?

ಉತ್ತರ ಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆ ಬೇಕು ಎಂಬ ಅಭಿಯಾನ

ಉತ್ತರ ಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆ ಬೇಕು ಎಂಬ ಅಭಿಯಾನ

ಜುಲೈ 24ರಂದು ಭಾನುವಾರ, ಅಂದರೆ ನಾಳೆಯೇ ಈ ಟ್ವಿಟರ್ ಅಭಿಯಾನ ನಡೆಯಲಿದ್ದು, ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆಯ ನಿರ್ಮಾಣಕ್ಕೆ ಟ್ವಿಟರ್​ನಲ್ಲಿ ಆಗ್ರಹಿಸುವಂತೆ ಮನವಿ ಮಾಡಲಾಗಿದೆ.

  • Share this:

    ಮೊನ್ನೆ ಮೊನ್ನೆಯಷ್ಟೇ ಶಿರೂರು ಟೋಲ್ ಗೇಟ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಆ್ಯಂಬುಲೆನ್ಸ್​ನಲ್ಲಿದ್ದ ನಾಲ್ವರು ಮೃತಪಟ್ಟ ನಂತರ ಉತ್ತರ ಕನ್ನಡದಲ್ಲಿ (Emergency Hospital In Uttara Kannada) ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಕೂಗು ಇನ್ನಷ್ಟು ಬಲ ಪಡೆದುಕೊಂಡಿದೆ. ಕರ್ನಾಟಕದ ಅತಿ ದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದ್ದರೂ ಒಂದು ಸುಸಜ್ಜಿತ ಆಸ್ಪತ್ರೆ (Emergency Hospital) ಇಲ್ಲದಿರುವ ಬಗ್ಗೆ ಕಳೆದ ಹಲವು ವರ್ಷಗಳಿಂದಲೂ ಉತ್ತರ ಕನ್ನಡಿಗರು (Uttara Kannada) ಧ್ವನಿ ಎತ್ತುತ್ತಲೇ ಬಂದಿದ್ದಾರೆ. ಇದೀಗ ಈ ಕೂಗನ್ನು ಇನ್ನೊಮ್ಮೆ ಜೋರಾಗಿ ಮೊಳಗಿಸಲು 2ನೇ ಬಾರಿಗೆ ರಾಷ್ಟ್ರ ಮಟ್ಟದ ಟ್ವಿಟರ್ ಅಭಿಯಾನಕ್ಕೆ (Twitter Campaign) ಕರೆ ನೀಡಲಾಗಿದೆ. ಈ ಅಭಿಯಾನದಲ್ಲಿ ನೀವೂ ಭಾಗಿಯಾಗಬಹುದಾಗಿದೆ.


    ಜುಲೈ 24ರಂದು ಭಾನುವಾರ, ಅಂದರೆ ನಾಳೆಯೇ ಈ ಟ್ವಿಟರ್ ಅಭಿಯಾನ ನಡೆಯಲಿದ್ದು, ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆಯ ನಿರ್ಮಾಣಕ್ಕೆ ಟ್ವಿಟರ್​ನಲ್ಲಿ ಆಗ್ರಹಿಸುವಂತೆ ಮನವಿ ಮಾಡಲಾಗಿದೆ.


    ಅಭಿಯಾನದಲ್ಲಿ ಪಾಲ್ಗೊಳ್ಳುವುದು ಹೇಗೆ?
    ಜನಸಾಮಾನ್ಯರೇ ರೂಪಿಸುತ್ತಿರುವ ಟ್ವಿಟರ್ ಅಭಿಯಾನ ಇದಾಗಿದೆ. #WeNeedEmergencyHospitalInUttaraKannada ಮತ್ತು #NoHospitalNoVote ಈ ಎರಡು ಹ್ಯಾಷ್​ಟ್ಯಾಗ್​ಗಳನ್ನು ಬಳಸಿ ಟ್ವೀಟ್ ಮಾಡಲು ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.


    ಇದನ್ನೂ ಓದಿ: Uttara Kannada: ನಿಧಾನಕ್ಕೆ ಚಲಿಸಿ, ಇಲ್ಲಿ ಆಸ್ಪತ್ರೆಗಳಿಲ್ಲ! ಅಪಘಾತವಾದರೆ ಮಣಿಪಾಲಕ್ಕೆ ಹೋಗಬೇಕಾಗಬಹುದು!


    ಅಲ್ಲದೇ ಟ್ವೀಟ್​ನಲ್ಲಿ @PMOIndia @narendramodi @AmitShah @mansukhmandviya @CmofKarnataka @Mla_sudhakar ಈ ಟ್ವಿಟರ್​ ಹ್ಯಾಂಡಲ್​ಗಳನ್ನು ಟ್ಯಾಗ್ ಮಾಡಲು ಆಗ್ರಹಿಸಲಾಗಿದೆ.  ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ತುರ್ತು ಚಿಕಿತ್ಸೆ ಆಸ್ಪತ್ರೆ ಏಕೆ ಅನಿವಾರ್ಯ ಎಂಬ ಕುರಿತು ನಿಮ್ಮ ಭಾವನೆ-ಅಭಿಪ್ರಾಯ ಮತ್ತು ಆಗ್ರಹವನ್ನು ಬರೆದು ತಪ್ಪದೇ ಈ ಮೇಲಿನ ಹ್ಯಾಷ್​ಟ್ಯಾಗ್ ಬಳಸಿ, ಟ್ಯಾಗ್ ಮಾಡಿ ಟ್ವೀಟ್ ಮಾಡುವಂತೆ ಕೋರಲಾಗಿದೆ.


    ಇದನ್ನೂ ಓದಿ: Karwar Free Ambulance: ಕಾರವಾರದಲ್ಲಿ ಉಚಿತ ಆ್ಯಂಬುಲೆನ್ಸ್ ಸೇವೆ! ಈ ನಂಬರ್​ಗೆ ಕರೆ ಮಾಡಿ


    ಅಪಘಾತಗಳ ಸಂಖ್ಯೆಯೇ ಆಘಾತ ಹುಟ್ಟಿಸುತ್ತೆ
    ಉತ್ತರ ಕನ್ನಡದಲ್ಲಿ 2018ರ ಮೇ ತಿಂಗಳಿನಿಂದ 2019ರ ಏಪ್ರಿಲ್‌ವರೆಗೆ ಜಿಲ್ಲೆಯ ವಿವಿಧೆಡೆ 1,103 ಅಪಘಾತಗಳಾಗಿವೆ. ಇವುಗಳಲ್ಲಿ ಪೈಕಿ 239 ಮಂದಿ ಮೃತಪಟ್ಟಿದ್ದಾರೆ. 522 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 1,331 ಮಂದಿ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎನ್ನುತ್ತವೆ ವರದಿಗಳು. ಇನ್ನು 2021ರಲ್ಲಿ 250ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 1 ಸಾವಿರಕ್ಕೂ ಹೆಚ್ಚು ಮಂದಿ ಅಪಘಾತಗಳಲ್ಲಿ ಗಾಯಗೊಂಡಿದ್ದಾರೆ.

    Published by:guruganesh bhat
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು