• Home
  • »
  • News
  • »
  • uttara-kannada
  • »
  • Dolphin Viral Video: ಡಾಲ್ಫಿನ್​ಗಳ ಹೈಜಂಪ್ ಸ್ಪರ್ಧೆ! ಕಣ್ಣಿಗೆ ಮಜವೋ ಮಜ!

Dolphin Viral Video: ಡಾಲ್ಫಿನ್​ಗಳ ಹೈಜಂಪ್ ಸ್ಪರ್ಧೆ! ಕಣ್ಣಿಗೆ ಮಜವೋ ಮಜ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಹೀಗೆ ಕಾರವಾರದ ದೇವಭಾಗ ಕಡಲ‌ ಕಿನಾರೆಯಲ್ಲಿ ಡಾಲ್ಫಿನ್‌ಗಳ ಜಿಗಿತ ನೋಡ್ತಿದ್ರೆ ಮೈ ಬಳಕಿಸೋ ಸುಂದರಿಯ ನೃತ್ಯದಂತೆ ಭಾಸವಾಗುತ್ತದೆ. ನೋಡಿದ್ರೆ ಮತ್ತೆ ಮತ್ತೆ ನೋಡಬೇಕೆನಿಸುತ್ತೆ.

  • News18 Kannada
  • Last Updated :
  • Uttara Kannada, India
  • Share this:

    ಕಾರವಾರ:  ನೆಗೆದು ಹಾರುತ್ತಾ ಆಟವಾಡ್ತಿರೋ ಡಾಲ್ಫಿನ್‌ಗಳು. ನೀಲಿ ಸಮುದ್ರದಿಂದ ನೀಲ ಆಗಸದೆಡೆ ಜಂಪ್ (Dolphin Viral Video) ಹೊಡೆಯುತ್ತಾ ಸಂಭ್ರಮಿಸ್ತಿರೋ ಸಮುದ್ರ ಸುಂದರಿಯರು. ಪ್ರವಾಸಿಗರ ಕಣ್ಣಿಗಂತೂ ಸೌಭಾಗ್ಯದ ದೃಶ್ಯವದು. ಉತ್ತರ ಕನ್ನಡದ (Uttara Kannada)  ದೇವಭಾಗ್ ಬೀಚ್ನಲ್ಲಿ ಡಾಲ್ಫಿನ್‌ಗಳ ಆಟದ ಸಖತ್ ದೃಶ್ಯವಿದು.


    ಹೌದು, ಸಾಮಾನ್ಯವಾಗಿ ನವೆಂಬರ್ ತಿಂಗಳು ಬಂತಂದ್ರೆ ಸಾಕು, ದೇವಭಾಗ ಕಡಲತೀರದಲ್ಲಿ ಡಾಲ್ಫಿನ್‌ಗಳ ಸಂಭ್ರಮ ಕಾಣಿಸುತ್ತೆ. ನೀರಿನಿಂದ ಮೇಲಕ್ಕೆ ಹಾರಿ ಮತ್ತೆ ನೀರಲ್ಲಿ ಮರೆಯಾಗೋ ಇವುಗಳನ್ನ ನೋಡೋಕೆ ಎರಡು ಕಣ್ಣು ಸಾಲೋದೇ ಇಲ್ಲ!


    ಇದನ್ನೂ ಓದಿ: Uttara Kannada: ಸ್ವತಃ ಕರೆಂಟ್ ತಯಾರಿಸೋ ಶಿರಸಿಯ ಗ್ರಾಮಸ್ಥರು! ಇವರಿಗೆ ಸರ್ಕಾರಿ ವಿದ್ಯುತ್ ಬೇಕಂತಿಲ್ಲ!


    ಹೈ ಜಂಪ್ ಸ್ಪರ್ಧೆ ನಡೆಯುತ್ತಿದೆ ಅನಿಸುತ್ತೆ!
    ಸಮುದ್ರದಲ್ಲಿ ಹೈಜಂಪ್ ಸ್ಪರ್ಧೆಯೇನಾದ್ರೂ ನಡೆಯುತ್ತಿದೆಯಾ ಹೇಗೆ ಅನ್ನೋ ಪ್ರಶ್ನೆನೂ ಹುಟ್ಟುತ್ತೆ! ಅವುಗಳ ಆಟ ಬೊಂಬಾಟ ಪ್ರವಾಸಿಗರಿಗೆ ಸಖತ್ ಮುದ ನೀಡುತ್ತೆ.


    ಇದನ್ನೂ ಓದಿ: Arecanut: ಅಡಿಕೆ ಎಲೆ ಚುಕ್ಕೆ ರೋಗಕ್ಕೆ ಔಷಧ! ಉಪಾಯ ಕಂಡುಕೊಂಡ ಉತ್ತರ ಕನ್ನಡದ ಕೃಷಿಕ


    ನೋಡಿದ್ರೆ ಮತ್ತೆ ಮತ್ತೆ ನೋಡಬೇಕೆನಿಸುತ್ತೆ!
    ಹೀಗೆ ಕಾರವಾರದ ದೇವಭಾಗ ಕಡಲ‌ ಕಿನಾರೆಯಲ್ಲಿ ಡಾಲ್ಫಿನ್‌ಗಳ ಜಿಗಿತ ನೋಡ್ತಿದ್ರೆ ಮೈ ಬಳಕಿಸೋ ಸುಂದರಿಯ ನೃತ್ಯದಂತೆ ಭಾಸವಾಗುತ್ತದೆ. ನೋಡಿದ್ರೆ ಮತ್ತೆ ಮತ್ತೆ ನೋಡಬೇಕೆನಿಸುತ್ತೆ.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: