ಕಾರವಾರ: ಇರುಮುಡಿ ಹೊತ್ತು ಸಾಗುತ್ತಿರೋ ಅಯ್ಯಪ್ಪ ಭಕ್ತರು. ಮಾಲಾಧಾರಿಗಳನ್ನೇ ಅನುಸರಿಸುತ್ತಾ ನಾ ಮುಂದು ತಾ ಮುಂದು ಅಂತಾ ಹೆಜ್ಜೆ ಹಾಕ್ತಿರೋ ನಾಯಿ. ಇದರ ನಿಷ್ಠೆ, ಭಕ್ತಿ ಕಂಡರೆ ನೀವು ಅಚ್ಚರಿಪಡೋದು ಗ್ಯಾರಂಟಿ! ಯಾಕೆಂದ್ರೆ ಈ ಶ್ವಾನ ಮಾಲಾಧಾರಿಗಳ ಮನೆಯ ಕಾವಲು ನಾಯಿಯಲ್ಲ. ಬದಲಿಗೆ ಬೀದಿಯಲ್ಲಿ ನಡೆಯುತ್ತಾ ಸಿಕ್ಕ ಮುದ್ದಾದ ನಾಯಿಯಿದು. ಹೌದು, ಹೀಗೆ ಶಬರಿಮಲೆಯತ್ತ ಹೊರಟ ಅಯ್ಯಪ್ಪ ಮಾಲಾಧಾರಿಗಳ ಜೊತೆಗೆ ಈ ನಾಯಿಯೂ ಹೆಜ್ಜೆ ಹಾಕ್ತಿದೆ. 777 ಚಾರ್ಲಿ ಸಿನಿಮಾದಲ್ಲಿ ನಟ ರಕ್ಷಿತ್ ಶೆಟ್ಟಿಗೆ ನಾಯಿ ಸಿಕ್ಕಂತೆ ಧಾರವಾಡದ (Dharwad) ಮಂಗಳಗಟ್ಟಿಯಿಂದ ಶಬರಿಮಲೆಗೆ ಪಾದಯಾತ್ರೆ (Ayyappa Padayatris) ಹೊರಟ ಅಯ್ಯಪ್ಪ ಭಕ್ತರಿಗೆ ಈ ನಾಯಿ (Ayyappa Devotees Met Dog) ಸಿಕ್ಕಿತ್ತು!
ಮೊದಮೊದಲು ಯಾರೂ ಅಷ್ಟಾಗಿ ಗಮನಿಸಿರ್ಲಿಲ್ಲ, ಆದ್ರೆ 200 ಕಿಲೋಮೀಟರ್ ನಡೆದರೂ ನಾಯಿ ಹಿಂಬಾಲಿಸಿದಾಗ ಎಲ್ಲರ ಗಮನಸೆಳೆದಿದೆ. ತಮ್ಮ ಜೊತೆಯೇ ಸಾಗಿಬಂದ ನಾಯಿಗೆ ಅಯ್ಯಪ್ಪ ಭಕ್ತರೂ ಅನ್ನ ಆಹಾರ ನೀಡಿ ಸಲಹಿದ್ದಾರೆ.
ಉತ್ತರ ಕನ್ನಡದಲ್ಲಿ ನಡೆದ ಅಚ್ಚರಿ!
1100 ಕಿ.ಮೀ. ದೂರದ ಕೇರಳದ ಶಬರಿಮಲೆಗೆ ತೆರಳುತ್ತಿರುವ ಭಕ್ತರ ತಂಡವೀಗ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕಾಸರಕೋಡು ದಾಟಿದೆ. ಶಬರಿಮಲೆಗೆ ಬರುವ ಮಹಿಳಾ ವೃತಧಾರಿಗಳನ್ನು ಮಾಳಿಗೆ ಪುರತ್ತಮ್ಮ ಎಂದು ಕರೆಯಲಾಗುತ್ತೆ.
ಮಾಳಗಿ ಎಂದು ಹೆಸರಿಟ್ಟ ಪಾದಯಾತ್ರಿಗಳು
ಹೀಗಾಗಿ ಶಬರಿಮಲೆ ಪಾದಯಾತ್ರೆಗೆ ಜೊತೆಯಾದ ಈ ಹೆಣ್ಣು ನಾಯಿಗೆ ಮಾಳಗಿ ಎಂದು ಹೆಸರಿಡಲಾಗಿದೆ. ಜೊತೆಗೆ ಅದರ ಕೊರಳಿಗೆ ಕಪ್ಪು ಬಟ್ಟೆಯನ್ನೂ ಕಟ್ಟಿ ಅಯ್ಯಪ್ಪನ ದರ್ಶನಕ್ಕೆಂದು ಕರೆದೊಯ್ಯಲಾಗ್ತಿದೆ.
ಇದನ್ನೂ ಓದಿ: Positive Story: ಬ್ರಿಟೀಷರ ವಿರುದ್ಧ ಹೋರಾಡಿ ದೇವರಾದ ಹಿಂದೂ-ಮುಸ್ಲಿಂ ಗೆಳೆಯರು, ಅಕ್ಕಪಕ್ಕದಲ್ಲೇ ಇದೆ ದೇವಸ್ಥಾನ
ವೃತಧಾರಿಗಳ ತಂಡ ವಿಶ್ರಾಂತಿ ಪಡೆಯುವಾಗ ಮಾಳಗಿಯೂ ವಿಶ್ರಾಂತಿ ಪಡೆಯುತ್ತಿದೆ. ಮುಂಜಾನೆಯೂ ಬೇಗ ಎದ್ದು ಎಲ್ಲರೊಂದಿಗೆ ಹೆಜ್ಜೆ ಹಾಕ್ತಿದೆ. ಮಾಲಾಧಾರಿಗಳೊಂದಿಗೆ ಆಟವಾಡುವುದರ ಜೊತೆಗೆ ಅವರ ವಸ್ತುಗಳನ್ನು ಕಾಯುತ್ತಿದೆ. ಇದು ಅಯ್ಯಪ್ಪ ಸ್ವಾಮಿಯ ಲೀಲೆ ಅಂತಾರೆ ಅಯ್ಯಪ್ಪ ವೃತಧಾರಿ.
ಇದನ್ನೂ ಓದಿ: Football League: ಕರ್ನಾಟಕದಲ್ಲಿ ಫೀಮೇಲ್ ಫುಟ್ಬಾಲ್ ಸುಗ್ಗಿ! ಕಾಲ್ಚೆಂಡಿನ ಚಾಲಾಕಿಗಳ ಬೊಂಬಾಟ್ ಆಟ
ಅಂಜದೆ- ಅಳುಕದೆ, ದಣಿವರಿಯದೆ ಸಾಗುತ್ತಿದೆ ಪ್ರಯಾಣ
ಸದ್ಯ ಮಾಳಗಿ ವೃತಧಾರಿಗಳಾದ ನಾಗನಗೌಡ ಪಾಟೀಲ್, ಮಂಜು ಹಾಗೂ ರವಿಯವ ಜೊತೆಗೆ ತಾನೂ ಓರ್ವ ಸದಸ್ಯೆಯಾಗಿದ್ದಾಳೆ. ಒಟ್ಟಿನಲ್ಲಿ ಅಯ್ಯಪ್ಪ ದೇವರ ಮೇಲಿನ ಭಕ್ತಿಯೋ ಅಥವಾ ಮಣಿಕಂಠನ ಮಹಿಮೆಯೋ, ಅಂಜದೆ- ಅಳುಕದೆ, ದಣಿವರಿಯದೆ ಮಾಲಾಧಾರಿಗಳೊಂದಿಗೆ ಶ್ವಾನವೊಂದು ಹೀಗೆ ಹೆಜ್ಜೆ ಹಾಕುತ್ತಿರುವುದು ನಿಜಕ್ಕೂ ಅಚ್ಚರಿಯೇ ಸರಿ.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ