Dodda Ganapathi Temple: ಮದುವೆ, ಕಳ್ಳತನ ಎಲ್ಲ ಸಮಸ್ಯೆಗೂ ಪರಿಹಾರ! ಶಿರಸಿ ದೊಡ್ಡ ಗಣಪತಿಯ ಮಹಿಮೆಯೂ ದೊಡ್ಡದು

Uttara Kannada Temples: ಉತ್ತರ ಕನ್ನಡದ ಶಿರಸಿಯಲ್ಲಿನ ದೊಡ್ಡ ಗಣಪತಿ ದೇವರು ಶೀಘ್ರ ಒಲಿಯುವ ವರದಮೂರ್ತಿ ಎಂದೇ ಪ್ರಸಿದ್ಧನಾಗಿದ್ದಾನೆ. ಈ ಪವಿತ್ರ ತಾಣದ ವಿಡಿಯೋ ನೋಡಿ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:
    ಉತ್ತರ ಕನ್ನಡ: ದೇವ್ರು ಕೇಳಿದ್ ತಕ್ಷಣ ತಥಾಸ್ತು ಅಂದ್ರೆ ಹೇಗಿರುತ್ತೆ ಅಲ್ವ? ಅದು ಆಗಿಲ್ಲ ಅಂದ್ರೆ ಒಂದು ಹೂವಾದ್ರೂ ದೇವರ ವಿಗ್ರಹದಿಂದ ಕೆಳಕ್ಕೆ ಬಿದ್ದರೆ ಆಗೋ ಮನೋ ತೃಪ್ತಿ ಹೇಗಿರುತ್ತೆ ಅಲ್ವ? ಈಗ ನಾವು ಅಂತಹದ್ದೇ ಒಂದು ಸ್ಟೋರಿ ಹೇಳ್ತಿದ್ದೀವಿ ನೋಡಿ.. ಇದು ಸಾಕ್ಷಾತ್ ಕೈಲಾಸದಿಂದ ಕೆಳಗಿಳಿದಂತೆ ಕಂಗೊಳಿಸೋ ಮಹಾನ್ ಶಕ್ತಿಶಾಲಿ ವರದಮೂರ್ತಿ ಗಣೇಶನ ದೇಗುಲದ ಕಥೆ.

    ಕೂಡಲೇ ಒಲಿಯುವ ಗಣಪ
    ಶಿರಸಿ ಪಟ್ಟಣದಲ್ಲಿರುವ ಗಣಪತಿ ದೇವಸ್ಥಾನಕ್ಕೆ ಸುಮಾರು 418 ವರ್ಷಗಳ ಇತಿಹಾಸವಿದೆ. ಇಲ್ಲಿರೋ ಗಣೇಶ ದೇವರು ಭಕ್ತರ ಇಷ್ಟಾರ್ಥಗಳಿಗೆ ಕೂಡಲೇ ಒಲಿಯುತ್ತಾನೆ ಅನ್ನೋದೆ ಈ ಕ್ಷೇತ್ರದ ಪ್ರಸಿದ್ಧಿ.

    ಭಕ್ತರು ಪುಷ್ಪವನ್ನು ದೇವರ ಮೇಲಿರಿಸಿ ತಮ್ಮ ಸಮಸ್ಯೆಯನ್ನು ಅರಿಕೆ ಮಾಡಿಕೊಂಡರೆ ಕ್ಷಣಾರ್ಧದಲ್ಲಿ ಹೂವು ಬಿದ್ದು ಕಾರ್ಯಗತಿಯ ಸೂಚನೆಯನ್ನು ಹಾಗೂ ಕೆಲಸ ನೆರವೇರಿಸಿ ಕೊಡುವ ಅಭಯವನ್ನು ನೀಡುತ್ತಾನೆ. ಹೀಗಾಗಿಯೇ ಈ ಮಹಾಗಣೇಶನಿಗೆ ಎಣಿಸಲಾರದಷ್ಟು ಭಕ್ತರಿದ್ದಾರೆ.

    ಗಣೇಶನಿಗೆ ವಿಶೇಷ ಪೂಜೆ
    ಚೌತಿ,ಸಂಕಷ್ಠ ಚತುರ್ಥಿ,ವಿನಾಯಕ ಚತುರ್ಥಿ, ಮಂಗಳವಾರ, ಅಮಾವಾಸ್ಯೆ ಹಾಗೂ ಹುಣ್ಣಿಮೆಯಂದು ಶ್ರೀದೇವರಿಗೆ ವಿಶೇಷ ಪೂಜೆ-ಸೇವೆ ನಡೆಯುತ್ತದೆ.

    ಇದನ್ನೂ ಓದಿ: Uttara Kannada Chakli Kambala: ಜನರ ಒಗ್ಗಟ್ಟು ಬೆಸೆಯುತ್ತೆ ಚಕ್ಕುಲಿ! ಇದು ಉತ್ತರ ಕನ್ನಡದ ಚಕ್ಕುಲಿ ಕಂಬಳದ ಸ್ಪೆಷಲ್

    Dodda Ganapathi Temple Sirsi
    ದೊಡ್ಡ ಗಣಪತಿ ದೇಗುಲಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ಗಣಪನ‌ ಮಹಿಮೆ ಅಪಾರ
    ಇಲ್ಲಿ ನಡೆದ ಕಾರಣಿಕ ಅಷ್ಟಿಷ್ಟಲ್ಲ. ಕರು ಕಳೆದುಕೊಂಡವರಿಂದ ಹಿಡಿದು ಕೋರ್ಟು ಕೇಸಿನವರೆಗೆ ಎಲ್ಲದಕ್ಕೂ ಈ ವರದಮೂರ್ತಿಯಿಂದಲೇ ಪರಿಹಾರ ನಿರೀಕ್ಷಿಸಲಾಗ್ತದೆ. ಪಕ್ಕದಲ್ಲೇ ಶಂಕರಹೊಂಡವೂ ಇದ್ದು ಇಲ್ಲಿಂದಲೇ ಅಘನಾಶಿನಿ ನದಿಯ ಉಗಮವಾಗುತ್ತದೆ.

    ಇದನ್ನೂ ಓದಿ: Ganesh Chaturthi: ಇವರು ತಯಾರಿಸೋ ಗಣಪತಿ ಭಾರೀ ಫೇಮಸ್!

    ಚೌತಿ ಹಬ್ಬದಿಂದಾಗಿ ಶಿರಸಿಯ ಈ ವರದಮೂರ್ತಿ ಗಣೇಶನನ್ನು ಕಾಣಲು ಬರುವ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ.

    ವರದಿ: ಎ.ಬಿ.ನಿಖಿಲ್, ಮುಂಡಗೋಡು
    Published by:guruganesh bhat
    First published: