Uttara Kannada: ದೇವರಿಗೇ ಚೆಂದದ ಮನೆ ಕಟ್ಟಿಸಿದ್ರು ನೋಡಿ ಭಕ್ತರು!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಬೆಟ್ಟದ ಮೇಲಿರುವ ಈ ದೇಗುಲದ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ನಾಲ್ಕು ತಿಂಗಳ ಹಿಂದೆ ಗೋಕರ್ಣದ ಯಂಗ್ ಸ್ಟಾರ್ ಕ್ಲಬ್ ಈ ದೇವಸ್ಥಾನದ ಪುನರ್ನಿರ್ಮಾಣಕ್ಕೆ ಮುಂದಾಯಿತು. ತಮ್ಮ ಸ್ವಂತ ಖರ್ಚಿನಲ್ಲಿ ಮನೆಯಂತೆ ಕಾಣೋ ಈ ದೇಗುಲವನ್ನ ನಿರ್ಮಿಸಲಾಯಿತು.

  • Share this:

ಉತ್ತರ ಕನ್ನಡ: ದೂರದಿಂದ ನೋಡ್ತಿದ್ರೆ ಕಾಡಿನ ಮಧ್ಯೆ ಎದ್ದು ನಿಂತಿರುವ ಕಟ್ಟಡ. ಒಳಗಡೆ ಪ್ರವೇಶಿಸಿದ್ರೆ ಆಗುತ್ತೆ ದೇಗುಲದ ಅನುಭವ. ರಾಮಾಯಣಕ್ಕೂ ಪೂರ್ವದ ಇತಿಹಾಸ ಹೊಂದಿರೋ ಇಲ್ಲಿನ ದೇವರಿಗೆ, ಭಕ್ತರೇ ಚೆಂದದ ಮನೆ (Bheemeshwara Temple) ಕಟ್ಟಿದ್ದಾರೆ. ಈ ಮೂಲಕ ದೇವರ ಮೇಲಿನ ತನ್ನ ಭಕ್ತಿಯನ್ನ ಪ್ರದರ್ಶಿಸುತ್ತಿದ್ದಾರೆ ಉತ್ತರ ಕನ್ನಡದ (Uttara Kannada News) ಮಂದಿ.


ರಾಮಾಯಣ ಪೂರ್ವ ಇತಿಹಾಸ
ಯೆಸ್, ಉತ್ತರ ಕನ್ನಡದ ಗೋಕರ್ಣದ ಯಂಗ್ ಸ್ಟಾರ್ ಕ್ಲಬ್ ಸಂಸ್ಥೆಯು ಇಂತಹ ಅಪರೂಪದ ದೇಗುಲವನ್ನು ಪುನರ್ ನಿರ್ಮಾಣ ಮಾಡಿದೆ. ಇಲ್ಲಿನ ಕೋಟಿತೀರ್ಥದ ಮೇಲಿರುವ ಭೀಮಕುಂಡಕ್ಕೆ ರಾಮಾಯಣ ಪೂರ್ವದ ಹಿನ್ನಲೆಯಿದೆ. ಕಾಶಿಯಲ್ಲಿದ್ದ ಭೀಮ ರಾಜನು ಇಲ್ಲಿ ಬಂದು ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡು ಶಿವ ಹಾಗೂ ನಾರಾಯಣ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ನಂತರ ಶಿವ ಪ್ರಸಾದವಾದ ಭೀಮಕುಂಡದ ನೀರಿಂದ ಅಭಿಷೇಕ ಮಾಡಿದ್ದ ಎಂಬ ಉಲ್ಲೇಖವಿದೆ.




ಭಕ್ತರಿಂದ ಪುನರ್ನಿರ್ಮಾಣ
ಆದ್ರೆ ಬೆಟ್ಟದ ಮೇಲಿರುವ ಈ ದೇಗುಲದ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ನಾಲ್ಕು ತಿಂಗಳ ಹಿಂದೆ ಗೋಕರ್ಣದ ಯಂಗ್ ಸ್ಟಾರ್ ಕ್ಲಬ್ ಈ ದೇವಸ್ಥಾನದ ಪುನರ್ನಿರ್ಮಾಣಕ್ಕೆ ಮುಂದಾಯಿತು. ತಮ್ಮ ಸ್ವಂತ ಖರ್ಚಿನಲ್ಲಿ ಮನೆಯಂತೆ ಕಾಣೋ ಈ ದೇಗುಲವನ್ನ ನಿರ್ಮಿಸಲಾಯಿತು.


ಇದನ್ನೂ ಓದಿ: Uttara Kannada: 142 ವರ್ಷಗಳ ಲಿಖಿತ ಇತಿಹಾಸವಿರುವ ಬಗ್ಗೋಣ ಪಂಚಾಂಗ ಬರೆಯುವ ಕನ್ನಡತಿ!


ಖಾವಿ ಕಲೆಯ ಮೆರುಗು
ಚಿತ್ರ ಕಲಾವಿದ ರವಿ ಗುನಗಾ ಅವರು ಖಾವಿ ಕಲೆಯಿಂದ ಇಡೀ ದೇವಸ್ಥಾನಕ್ಕೆ ಮೆರುಗು ನೀಡಿದ್ದಾರೆ. ಚೆಂದದ ಸುಣ್ಣ ಬಣ್ಣ ಬಳಿದು ಅತ್ಯಾಕರ್ಷಕವಾಗಿ ನೆಲೆ ನಿಲ್ಲುವಂತೆ ಮಾಡಿದ್ದಾರೆ. ಅತ್ಯಾಕರ್ಷಕ ವಿನ್ಯಾಸ, ರಚನೆ ಇವುಗಳೆಲ್ಲವೂ ಕಾನನದ ವಾತಾವರಣಕ್ಕೆ ಹೊಂದುವಂತೆ ಇದೆ. ಹೀಗೆ ಊರವರು ಸೇರಿ ನಿರ್ಮಿಸಿರುವ ದೇವಸ್ಥಾನ ಇದಾಗಿದೆ.


ಇದನ್ನೂ ಓದಿ: Uttara Kannada: ಕಾರವಾರದಲ್ಲಿ ಕೊರಗಜ್ಜ, ದೈವದ ಜೀವನ ಚರಿತ್ರೆ ನೋಡಿ


10 ಲಕ್ಷ ರೂ. ವೆಚ್ಚ
ಕ್ಲಬ್​ನ ಅಧ್ಯಕ್ಷ ಕುಮಾರ್ ಗೋಪಿಯವರು ಅತ್ಯಂತ ಮುತುವರ್ಜಿಯಿಂದ ಈ ಕೆಲಸವನ್ನ ಮಾಡಿದ್ದಾರೆ. ಸುಮಾರು ಹತ್ತು ಲಕ್ಷ ರೂಪಾಯಿ ಖರ್ಚಿನಲ್ಲಿ ನಿರ್ಮಾಣವಾದ ಈ ದೇವಾಲಯಕ್ಕೆ ಜನರ ಕೊಡುಗೆಯೇ ಅಪಾರ. ಮುಂದಿನ 29 ರಿಂದ 31ರ ವರೆಗೆ ದೇವಸ್ಥಾನದ ಕಳಸ ಪ್ರತಿಷ್ಠೆ ನಡೆಯಲಿದೆ. ಒಟ್ಟಿನಲ್ಲಿ ಜನರೇ ಸೇರಿ ಭೀಮೇಶ್ವರನ ದೇಗುಲವನ್ನ ಮನೆಯಂತೆ ಚೆಂದಗೊಳಿಸಿದ್ದು ವಿಶೇಷವೇ ಸರಿ.

top videos


    ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ

    First published: