ಒಂದೆಡೆ ಸುತ್ತಲೂ ಹಚ್ಚ ಹಸಿರಿನ ಪರಿಸರ. ಚೇಷ್ಟೆ ಮಾಡೋ ಕಪಿಗಳು. ಇನ್ನೊಂದೆಡೆ ಸೊಂಡಿಲಿನಿಂದ ಕಾಣಿಕೆ ಪಡೆಯೋ ಆನೆ. ಅಲ್ಲೇ ಚಿಕ್ಕದಾದ ಗುಡಿ. ಈ ರಸ್ತೆಯಲ್ಲಿ ಸಂಚರಿಸೋರಂತೂ ಇಲ್ಲಿ ಕೈ ಮುಗಿಯದೇ ಮುಂದೆ ಹೋಗೋದೇ ಇಲ್ಲ. ವಾಹನ ಸವಾರರನ್ನು ಕಾಪಾಡೋ ದೇವಿ (Goddess) ಎಂದೇ ಫೇಮಸ್ ಆಗಿದೆ ಈ ಕ್ಷೇತ್ರ. ಇದು ಉತ್ತರ ಕನ್ನಡ ಜಿಲ್ಲೆಯ (Uttara Kannada) ಕುಮಟಾದಿಂದ ಶಿರಸಿಗೆ (Kumta To Sirsi) ತೆರಳುವ ಮಾರ್ಗಮಧ್ಯೆ ಸಿಗೋ ದೇವಿಮನೆ (Devimane Ghat) ಘಟ್ಟ .
ಇಲ್ಲಿನ ಕ್ಷೇತ್ರಪಾಲ ದೇಗುಲದ ಸುಂದರ ದೃಶ್ಯಗಳೇ ಇಲ್ಲಿ ನೀವ್ ನೋಡ್ತಿರೋದು. ಇಲ್ಲಿ ಜಟಿಕೇಶ್ವರ, ಮಹಾಸತಿ, ಯಕ್ಷಿ ದೇವರುಗಳು ಒಂದೇ ಗುಡಿಯಲ್ಲಿದ್ದು, ಮೂರೂ ದೇವರುಗಳನ್ನ ಒಟ್ಟಾಗಿ ಸೇರಿ ಕ್ಷೇತ್ರಪಾಲ ಎಂದು ಕರೆಯಲಾಗುತ್ತೆ. ಶಿರಸಿ- ಕುಮಟಾ ರಸ್ತೆಯಲ್ಲಿ ಸಂಚರಿಸುವವರು ಒಮ್ಮೆ ನಿಂತೇ ಹೋಗುವ ತಾಣವಿದು. ಜೊತೆಗೆ ನಿರ್ಭಯವಾಗಿ ಸಾಗಲು ಅಭಯ ನೀಡುವ ಶಕ್ತಿ ಕ್ಷೇತ್ರವೂ ಹೌದು.
ಇಲ್ಲಿ ಆಶೀರ್ವಾದ ಪಡೆದರೆ ಆ್ಯಕ್ಸಿಡೆಂಟ್ ಆಗಲ್ವಂತೆ
ಪ್ರಾಣಿ- ಪಕ್ಷಿಗಳು, ಔಷಧೀಯ ಸಸ್ಯಗಳಿಂದ ಸಂಪದ್ಭರಿತವಾದ ಶಿರಸಿ- ಕುಮಟಾ ರಸ್ತೆಯಲ್ಲಿ ಸಾಕಷ್ಟು ತಿರುವು, ಮುರುವುಗಳಿವೆ. ಈ ಘಟ್ಟದಲ್ಲಿ ಆಗಾಗ ಅಪಘಾತಗಳು ಸಂಭವಿಸಿ, ಗಾಯ- ನೋವುಗಳು ಆಗುತ್ತಲೇ ಇರ್ತವೆ. ಈ ಕ್ಷೇತ್ರಪಾಲನ ಬಳಿ ಬೇಡಿಕೊಂಡು ಮುಂದೆ ಸಾಗಿದ್ರೆ ಯಾವ್ದೇ ಅಪಘಾತಗಳೂ ಆಗಲ್ಲ ಅಂತಾನೆ ಪ್ರಯಾಣಿಕರು ನಂಬ್ತಾರೆ. ಆಶೀರ್ವಾದ ಪಡೆದು ಮುಂದೆ ಸಾಗ್ತಾರೆ.
ಇದನ್ನೂ ಓದಿ: Uttara Kannada: ಲೋಟ, ತಟ್ಟೆಗಳಲ್ಲೇ ಸಂಗೀತ ನುಡಿಸುವ ಬಾಲಕ!
ಇಲ್ಲೇ ಇದೆ ಸೌಂದರ್ಯದ ಗಣಿ
ಇನ್ನು ಇಲ್ಲಿನ ಕ್ಷೇತ್ರಪಾಲ ದೇವರಿಗೆ ಜಾತಿ- ಧರ್ಮದ ಹಂಗಿಲ್ಲ. ಈ ರಸ್ತೆಯಲ್ಲಿ ಸಾಗುವ ಹಿಂದೂ- ಮುಸ್ಲಿಂ- ಕ್ರೈಸ್ತ ಎಲ್ಲ ಧರ್ಮದವರೂ ಈ ಕ್ಷೇತ್ರಪಾಲನ ದರ್ಶನ ಪಡೆದೇ ಮುಂದೆ ಸಾಗ್ತಾರೆ, ಇನ್ನು ಇಲ್ಲಿರುವ ವೀವ್ ಪಾಯಿಂಟ್ನಲ್ಲಿ ನಿಂತು ಘಟ್ಟದ ಸೌಂದರ್ಯವನ್ನ ಕಣ್ತುಂಬಿಕೊಳ್ಳಬಹುದು. ಮಳೆಗಾಲದ ತುಂತುರು ಹನಿಗಳ ನಡುವೆ ಫೋಟೋಶೂಟ್ಗೂ ಹೇಳಿಮಾಡಿಸಿದ ತಾಣವಿದು.
ಇದನ್ನೂ ಓದಿ: ಪಾಕಿಸ್ತಾನದ ವಿರುದ್ಧ ಹೋರಾಡಿ ಭಾರತವನ್ನು ಗೆಲ್ಲಿಸಿದ INS ಚಾಪೆಲ್ ಹೀಗಿದೆ ನೋಡಿ
ದೇವಿಯ ದರ್ಶನ ಮಾಡಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ನೀವು ಕುಮಟಾ-ಶಿರಸಿ ರೂಟಲ್ಲಿ ಪ್ರಯಾಣ ಮಾಡಿದ್ರೆ ಕೊಂಚ ನಿಧಾನವಾಗಿ ಪ್ರಯಾಣಿಸಿ, ಜೊತೆಗೆ ಈ ಕ್ಷೇತ್ರಪಾಲನ ದರ್ಶನ ಮಾಡೋದನ್ನೂ ಮರೀಬೇಡಿ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ