ಉತ್ತರ ಕನ್ನಡ: ವಿಶಾಲ ಬಯಲಲ್ಲಿರೋ ಬಂಡೆಕಲ್ಲು. ಅದ್ರ ಸುತ್ತಲೂ ಪ್ರದಕ್ಷಿಣೆ ಹಾಕ್ತಿರೋ ಭಕ್ತರು. ನಂಬಿದವರ ಪಾಲಿಗೆ ಎಂದಿಗೂ ಕೈ ಬಿಡದ ಆರಾಧ್ಯ ದೈವ. ದೂರ ದೂರದ ಊರುಗಳಿಂದಲೂ ಭಕ್ತರನ್ನು (Shigehalli Ganapati Temple) ಸೆಳೆಯುತ್ತಿರುವ ಪ್ರಥಮ ಪೂಜಿತ ( (Ganapati Temple), ವಿಘ್ನ ವಿನಾಯಕನೀತ.
ಪ್ರಕೃತಿ ಗಣಪ
ಉತ್ತರ ಕನ್ನಡದ ಶಿರಸಿ ತಾಲೂಕಿನ ಶೀಗೆಹಳ್ಳಿಯಲ್ಲಿ ದೇವರು ಈ ಪರಿಯಾಗಿ ನೆಲೆಯಾಗಿದ್ದಾನೆ. ಯಾವೊಂದು ಮೇಲ್ಛಾವಣಿಯಾಗಲೀ, ಅರ್ಚಕರಾಗಲೀ ಇಲ್ಲದೇ, ಕೇವಲ ಭಕ್ತರ ಜೊತೆಗಷ್ಟೇ ಇಲ್ಲಿ ದೇವರು ಮಾತನಾಡುತ್ತಾನೆ. ಭಕ್ತರ ಇಷ್ಟಾರ್ಥ, ಸಂಕಷ್ಟಗಳನ್ನ ಕೇಳುವ ಈ ಬಯಲು ಗಣಪನನ್ನು ಕಾಣಲು ಪ್ರತಿದಿನ ನೂರಾರು ಜನ ಬರ್ತಾರೆ.
ಬಯಲನ್ನೇ ಇಷ್ಟಪಟ್ಟ ವಿನಾಯಕ
ಇದನ್ನು ನೋಡಿದರೆ ಮೂರ್ತಿಯ ಲಕ್ಷಣಗಳು ಸಿದ್ಧಿವಿನಾಯಕನ ಉದ್ಭವ ಮೂರ್ತಿಯ ರೂಪ ತೋರುತ್ತದೆ. ಕಲ್ಲಿನಲ್ಲೇ ಮೂಡಿದ ದೇವರಿಗೆ ಈ ಹಿಂದೆ ಒಮ್ಮೆ ಶ್ರೀಧರ ಸ್ವಾಮಿಗಳು ಬಂದು “ನಿನಗೆ ದೇವಾಲಯ ಕಟ್ಟಿಕೊಡುತ್ತೇನೆ. ಗಣೇಶ ತಂದೆ ದಯಮಾಡಿ ಅಪ್ಪಣೆ ನೀಡು,” ಎಂದಾಗ, “ನನಗೆ ಹೀಗಿರುವುದೇ ಇಷ್ಟ ಹೀಗೆ ಇರಲು ಬಿಡು” ಎಂದು ಸ್ವಪ್ನ ದೃಷ್ಟಾಂತವಾಯಿತಂತೆ. ಹಾಗಾಗಿ ಈ ದೇವಾಲಯಕ್ಕೆ ಇಲ್ಲಿ ತನಕ ಮೇಲ್ಛಾವಣಿಯಿಲ್ಲ, ಗುಡಿ ಇಲ್ಲ, ಅವರಿವರು ಅರ್ಚಕರೂ ಇಲ್ಲ.
ಇದನ್ನೂ ಓದಿ: Uttara Kannada: ಚಿಕ್ಕ ಹುಡುಗಿಯ ದೊಡ್ಡ ಸಾಧನೆ! ಗೋಕರ್ಣದ ಬಾಲಕಿಯಿಂದ ದುಬೈನಲ್ಲಿ ಯೋಗ
ಇಲ್ಲಿದೆ ಆಲಯ
ಈ ಗಣೇಶ ಬೇಡಿದ್ದನ್ನು ಕೊಡುವ ಕರುಣಾಮಯಿ, ಕಷ್ಟ ಕಳೆಯುವ ವಿಘ್ನ ನಿವಾರಕ! ಅದನ್ನು ಇಡೀ ಊರಿನವರೇ ಕಂಡಿದ್ದಾರೆ, ಕೊಂಡಾಡುತ್ತಾರೆ. ಶಿರಸಿಯಿಂದ ಇಪ್ಪತ್ನಾಲ್ಕು ಕಿಲೋಮೀಟರ್ ದೂರದಲ್ಲಿ ಶೀಗೆಹಳ್ಳಿಯಿದೆ. ಅಲ್ಲಿನ ಬಸ್ ನಿಲ್ದಾಣದಿಂದ ಕೆಳಗಡೆ ಹೋದರೆ ಮುನ್ನೂರು ಮೀಟರ್ ಅಂತ್ಯದಲ್ಲಿ ಪರಮಾತ್ಮ ಗಣಪತಿಯ ದರ್ಶನ ನಿಮಗಾಗುತ್ತದೆ.
ಇದನ್ನೂ ಓದಿ: Uttara Kannada: ಈ ದೇಗುಲಕ್ಕೆ ನಾಗರ ಕಲ್ಲುಗಳೇ ಗೋಡೆ!
ವಿಶೇಷ ಪೂಜೆ
ಮಂಗಳವಾರ, ಸಂಕಷ್ಟಿ ವಿಶೇಷ ದಿನಗಳು, ಇಲ್ಲಿ ಸತ್ಯನಾರಾಯಣ ಪೂಜೆ ಮಾಡುತ್ತಾರೆ. ಈ ದಾರಿಯಲ್ಲಿ ಸಾಗುವವರು ಗಣಪಯ್ಯನಿಗೆ ಒಂದು ನಮಸ್ಕಾರ ಹಾಕಿಯೇ ಸಾಗುತ್ತಾರೆ. ಇಂತಹ ಬಂಡೆಕಲ್ಲಿನ ನೈಸರ್ಗಿಕದತ್ತ ದೇವರಾಗಿ ಗಣಪತಿಯು ಇಲ್ಲಿ ನೆಲೆ ನಿಂತಿದ್ದಾನೆ.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ