ಉತ್ತರ ಕನ್ನಡ: ಒದ್ದಾಟ, ಚೀರಾಟ, ಇನ್ನೇನು ಆಗುತ್ತೋ ಎಂಬ ಆತಂಕ. ಹೌದು, ಈ ಜಿಂಕೆ ಮರಿಯ (Deer) ಇಂತಹ ಭಯಕ್ಕೆ ಕೊನೆಗೂ ಸಿಕ್ತು ಮುಕ್ತಿ! ಕಾಡು ಕಾಣುತ್ತಿದ್ದಂತೆ ಪುಟಿದೇಳುತ್ತಾ "ಬದುಕಿದೆಯಾ ಬಡಜೀವವೇ" ಅಂತ ಓಡೇಬಿಡ್ತು ಚಿಗರೆ. ಅಷ್ಟಕ್ಕೂ ಈ ಜಿಂಕೆ ಮರಿಗೆ ಏನಾಗಿತ್ತು ಗೊತ್ತಾ? ಆ ಜಿಂಕೆ ಆಪರೇಷನ್ (Deer Rescue Operation) ಹೇಗಿತ್ತು ಅನ್ನೋದನ್ನ ತೋರಿಸ್ತೀವಿ ನೋಡಿ
ದಾರಿ ತಪ್ಪಿ ಬಂದು ಬಾವಿಗೆ ಬಿತ್ತು!
ಹೌದು, ಧಾರವಾಡದ ಸತ್ತೂರಿನ ಶ್ರೇಯಾ ಕಾಲೇಜಿನ ಬಳಿ ಇರುವ ತೆರೆದ ಬಾವಿಯೊಂದಕ್ಕೆ ದಾರಿ ತಪ್ಪಿ ಬಂದಿದ್ದ ಜಿಂಕೆ ಮರಿಯೊಂದು ಬಿದ್ದಿತ್ತು. ಹೀಗೆ ಬಾವಿಗೆ ಬಿದ್ದ ಈ ಜಿಂಕೆ ಒಂದು ರಾತ್ರಿ ಬಾವಿಯಲ್ಲಿ ಕಳೆದಿದೆ. ಕೊನೆಗೂ ಕಾಲೇಜಿಗೆ ಬಂದವರು ಇದನ್ನ ನೋಡಿ ಸ್ಥಳೀಯ ಪ್ರಾಣಿಪ್ರಿಯರಾದ ಸೋಮಶೇಖರ್ ಚೆನ್ನಶೆಟ್ಟಿ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅರಣ್ಯ ಇಲಾಖೆಯವ್ರಿಗೆ ಮಾಹಿತಿ ನೀಡಿದ್ರಿಂದ, ಇಲಾಖಾಧಿಕಾರಿಗಳೆಲ್ಲರೂ ಶ್ರೇಯಾ ಕಾಲೇಜಿನ ಬಾವಿ ಬಳಿಗೆ ಬಂದಿದ್ದಾರೆ. ಬಲೆಯನ್ನ ಬಳಸಿ ಜಿಂಕೆಮರಿಯನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಶಿರಸಿಯಲ್ಲಿ IT ಕಂಪನಿ ಸ್ಥಾಪನೆ! ಮಲೆನಾಡು, ಕರಾವಳಿಯ ಪ್ರತಿಭೆಗಳಿಗೆ ಹೊಸ ಅವಕಾಶ
ಕೊನೆಗೂ ಕಾಡು ಸೇರಿಕೊಂಡ ಚಿಗರೆ
ಐದು ವರ್ಷದ ಈ ಜಿಂಕೆ ಮರಿಯನ್ನ ಕೊನೆಗೂ ಯಾವುದೇ ಗಾಯಗಳಿಲ್ಲದೇ ಮೇಲಕ್ಕೆತ್ತಲಾಯ್ತು. ನಂತರ ಜಿಂಕೆ ಮರಿಯನ್ನು ಇಲಾಖೆಯ ಅಧಿಕಾರಿಗಳು ದಾಂಡೇಲಿ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ. ಕಾಡು ಸೇರುತ್ತಲೇ ಜಿಂಕೆ ನೆಗೆಯುತ್ತಾ ಕಣ್ಮರೆಯಾಯಿತು.
ಇದನ್ನೂ ಓದಿ: Uttara Kannada: ಹೊಸ ಪ್ರಬೇಧದ ಏಡಿಗೆ ಪುಟ್ಟ ಬಾಲಕಿಯ ಹೆಸರು!
ಹೀಗೆ ಸತ್ತೂರಿನ ಶ್ರೇಯಾ ಕಾಲೇಜ್ ಕ್ಯಾಂಪಸ್ನಲ್ಲಿ ನಡೆದ ಹರಿಣ ಆಪರೇಷನ್ ಸಕ್ಸಸ್ ಆಗಿ, ಜಿಂಕೆ ಬದುಕುಳಿಯುವಂತಾಯಿತು.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ