• Home
  • »
  • News
  • »
  • uttara-kannada
  • »
  • Uttara Kannada: ನಡೆದೇಹೋಯ್ತು ಭಯಂಕರ ದೈತ್ಯ ನರಕಾಸುರನ ವಧೆ!

Uttara Kannada: ನಡೆದೇಹೋಯ್ತು ಭಯಂಕರ ದೈತ್ಯ ನರಕಾಸುರನ ವಧೆ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ವಿಜಯದಶಮಿಯಂದು ರಾವಣನನ್ನು ದಹಿಸುವ ಪದ್ಧತಿ ಇದ್ರೆ, ಕೊಂಕಣ ಪ್ರದೇಶಗಳಲ್ಲಿ ನರಕಾಸುರನನ್ನು ದಹಿಸುವ ಪದ್ಧತಿ ಇದೆ.

  • News18 Kannada
  • Last Updated :
  • Uttara Kannada, India
  • Share this:

    ಉತ್ತರ ಕನ್ನಡ: ಒಂದು ಕಡೆ ಮಕ್ಕಳ ಆಟ, ಇನ್ನೊಂದೆಡೆ ತರಹೇವಾರಿ ತರಕಾರಿ ಪ್ರದರ್ಶನ. ಇದೆಲ್ಲರ ಮಧ್ಯೆ ನಡೆದೇ ಹೋಯ್ತು ಗಜಗಾತ್ರದ ನರಕಾಸುರ ದಹನ. ಹೌದು, ಇದು ಕುಮಟಾದಲ್ಲಿ ನಡೆದ ದೀಪಾವಳಿ ಮೇಳ ಸ್ಪೆಷಲ್. ದಿನವಿಡೀ ನಡೆದ ವಿಭಿನ್ನ ಕಾರ್ಯಕ್ರಮಕ್ಕೆ ಗ್ರಾಮಸ್ಥರೆಲ್ಲ ಸಾಕ್ಷಿಯಾದ್ರು. ಉತ್ತರ ಕನ್ನಡ ಜಿಲ್ಲೆಯ (Uttara Kannada) ಕುಮಟಾದಲ್ಲಿ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ನಡೆದ ದೀಪಾವಳಿ ಸಮಾರಂಭದಲ್ಲಿ (Deepavali Celebration) ನರಕಾಸುರನಿಗೆ ಅಗ್ನಿ ಸ್ಪರ್ಶಿಸಿ ದಹಿಸಲಾಯಿತು. ಇದಕ್ಕೂ ಮುನ್ನ ಹತ್ತು ಹಲವು ಕಾರ್ಯಕ್ರಮಗಳಿಗೆ ಅಲ್ಲಿನ ಮೈದಾನವು ಸಾಕ್ಷಿಯಾಯಿತು.


    ವಿಜಯದಶಮಿಯಂದು ರಾವಣನನ್ನು ದಹಿಸುವ ಪದ್ಧತಿ ಇದ್ರೆ, ಕೊಂಕಣ ಪ್ರದೇಶಗಳಲ್ಲಿ ನರಕಾಸುರನನ್ನು ದಹಿಸುವ ಪದ್ಧತಿ ಇದೆ. ಹಾಗಾಗಿ ಇಲ್ಲೂ ನರಕಾಸುರನ ದಹನ ನಡೆದು ಸೂರ್ಯಾಸ್ತವಾಗುತ್ತಲೇ ನರಕಾಸುರ ಸುಟ್ಟು ಬೂದಿಯಾಗಿಬಿಟ್ಟಿದ್ದ.


    ಇಷ್ಟೇ ಅಲ್ಲ, ತಿಂಡಿಗಳ ಲಿಸ್ಟ್ ನೋಡಿದ್ರೆ ಬಾಯಲ್ಲಿ ನೀರೂರುತ್ತೆ
    ದೀಪಾವಳಿ ಮೇಳ ಕೇವಲ ಇಷ್ಟಕ್ಕೆ ಸೀಮಿತವಾಗಿರಲಿಲ್ಲ. ಹತ್ತಾರು ವಿನೋದಾವಳಿಗಳಿಗೂ ವೇದಿಕೆಯಾಯಿತು. ಮಕ್ಕಳಿಗಂತೂ ವಿವಿಧ ಆಟ ಮನರಂಜನೆ ನೀಡಿದರೆ, ಮಹಿಳೆಯರ ನಳಪಾಕ ಮೇಳೈಸಿತು, ಯೋಧರನ್ನು ಸನ್ಮಾನಿಸಲಾಯಿತು. ರಂಗೋಲಿ ಹಾಗೂ ಹೋಮ್ ಮೇಡ್ ದೀಪಾವಳಿ ತಿಂಡಿ ತಿನಿಸುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಖರ್ಜೂರದ ಉಂಡೆ, ಬಾದಾಮಿ ಪುರಿ, ಹಲ್ವಾ, ಮಣ್ಣಿಗೆ, ಕೊಟ್ಟೆ ರೊಟ್ಟಿ, ಕಡಬು, ಶ್ರೀಖಂಡ, ಬರ್ಫಿ, ಹೋಳಿಗೆ, ಬೋಂಡಾ, ಬಜ್ಜಿ, ಗಿರ್ಮಿಟ್, ಪಲಾವ್.. ಆಹಾ! ಬಾಯಲ್ಲಿ ನೀರೂರಿಸುವ ಅನೇಕ ತಿಂಡಿಗಳೇ ದೀಪಾವಳಿ ಮೇಳದ ಎಲ್ಲಾ ಕಡೆ ರಾರಾಜಿಸಿತ್ತು.


    ಇದನ್ನೂ ಓದಿ: Uttara Kannada: ಘನತ್ಯಾಜ್ಯದಿಂದ ಗೊಬ್ಬರ! ಇದು ಅಡಿಕೆಗೂ ಭಾರೀ ಬೆಸ್ಟ್ ಅಂತೆ!


    ಇನ್ನೂ ಹಲವು ಕಾರ್ಯಕ್ರಮಗಳಿತ್ತು
    ತರಕಾರಿ ಹಾಗೂ ಹೂಗಳಿಂದ ಕ್ರಾಫ್ಟ್ ಹಾಗೂ ವಿವಿಧ ಅಲಂಕಾರಿಕ ಮಾದರಿಗಳನ್ನು ಪ್ರದರ್ಶಿಸಿ ಯುವತಿಯರು ತಮ್ಮ ಕೌಶಲ್ಯ ಮೆರೆದರು. ಹಾಗೆಯೇ ಕೃಷ್ಣ- ಸತ್ಯಭಾಮೆ, ವಾಮನ ರೂಪ ಧರಿಸಿದವರ ಮೆರವಣಿಗೆ ನೆರೆದವರ ಗಮನ ಸೆಳೆಯಿತು. ಹಾಗೆಯೇ ದಂಪತಿಗಳು ದೀಪಾವಳಿ ಅಡುಗೆಗಳ ಪ್ರದರ್ಶನದಲ್ಲಿ ಭಾಗವಹಿಸಿ ಸಂಭ್ರಮಪಟ್ಟರು.


    ಇದನ್ನೂ ಓದಿ: Kamakshi Temple: ಕುದಿಯುವ ಎಣ್ಣೆಯಿಂದ ವಡೆ ತೆಗೆಯೋ ಉತ್ತರ ಕನ್ನಡದ ಭಕ್ತರು!


    ಹೀಗೆ ದಿನವಿಡೀ ದೀಪಾವಳಿ ಮೇಳ ಅರ್ಥಪೂರ್ಣವಾಗಿ ನಡೆದು ಗ್ರಾಮಸ್ಥರೆಲ್ಲ ಕತ್ತಲಾಗುತ್ತಲೇ ನರಕಾಸುರ ದಹನ ಕಣ್ತುಂಬಿಕೊಂಡು ಮನೆ ಸೇರಿದರು.


    ವರದಿ: ಎ.ಬಿ.ನಿಖಿಲ್, ಮುಂಡಗೋಡು

    Published by:ಗುರುಗಣೇಶ ಡಬ್ಗುಳಿ
    First published: