• Home
  • »
  • News
  • »
  • uttara-kannada
  • »
  • Uttara Kannada: ಹೊನ್ನಾವರದಲ್ಲಿ ಕಲರ್ ಕಲರ್ ಆಕಾಶ!

Uttara Kannada: ಹೊನ್ನಾವರದಲ್ಲಿ ಕಲರ್ ಕಲರ್ ಆಕಾಶ!

ವಿಡಿಯೋ ನೋಡಿ

"ವಿಡಿಯೋ ನೋಡಿ"

ವಿನಾಯಕ ದಾಮೋದರ ಸಾವರ್ಕರ್, ಎಪಿಜೆ ಅಬ್ದುಲ್ ಕಲಾಂ, ಲಾಲ್ ಬಹದ್ದೂರ್ ಶಾಸ್ತ್ರಿ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಅಟಲ್ ಬಿಹಾರಿ ವಾಜಪೇಯಿ, ಕಲ್ಪನಾ ಚಾವ್ಲಾ  ಹೀಗೆ ಹತ್ತು ಹಲವು ಖ್ಯಾತನಾಮರು ನಕ್ಷತ್ರಗೂಡಿನಲ್ಲಿ ಕೂತು ಇಡೀ ಜನರ ಗಮನಸೆಳೆದರು. 

  • Share this:

    ಕಾರವಾರ: ಕಲರ್ ಕಲರ್ ಆಕಾಶ ಬುಟ್ಟಿಗಳು. ಅವುಗಳಲ್ಲಿ ಕಂಗೊಳಿಸುತ್ತಿರೋ ನಾಡಿನ ಸಂಸ್ಕೃತಿ, ದೇಶ ಕಟ್ಟಿದ ನಾಯಕರು. ಝಗಮಗಿಸೋ ಲೈಟಿಂಗ್ ಮೂಲಕ ಇಡೀ ಆವರಣದಲ್ಲೇ ಮಿಂಚಿನ ಸಂಚಾರ. ಈ ಎಲ್ಲ ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ (Uttara Kannada, Honnavara) ಹೊನ್ನಾವರದಲ್ಲಿ. ಉತ್ತರ ಕನ್ನಡದ ಯುವಾ ಬ್ರಿಗೇಡ್ (Yuva Brigade) ಆಯೋಜಿಸಿದ್ದ "ಧರ್ಮ ದೀಪ" ಎಂಬ ಆಕಾಶಬುಟ್ಟಿಗಳನ್ನು (Sky Lanterns) ತಯಾರಿಸುವ ಸ್ಪರ್ಧೆಯಲ್ಲೇ ಬಗೆಬಗೆಯ ಆಕಾಶಬುಟ್ಟಿಗಳು ಹಾರಾಡಿದವು.


    ಇವರೆಲ್ಲರ ಆಕಾಶಬುಟ್ಟಿ ಹಾರಾಡಿತು
    ವಿನಾಯಕ ದಾಮೋದರ ಸಾವರ್ಕರ್, ಎಪಿಜೆ ಅಬ್ದುಲ್ ಕಲಾಂ, ಲಾಲ್ ಬಹದ್ದೂರ್ ಶಾಸ್ತ್ರಿ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಅಟಲ್ ಬಿಹಾರಿ ವಾಜಪೇಯಿ, ಕಲ್ಪನಾ ಚಾವ್ಲಾ  ಹೀಗೆ ಹತ್ತು ಹಲವು ಖ್ಯಾತನಾಮರು ನಕ್ಷತ್ರಗೂಡಿನಲ್ಲಿ ಕೂತು ಇಡೀ ಜನರ ಗಮನಸೆಳೆದರು. 


    ಇದನ್ನೂ ಓದಿ: Uttara Kannada: ಮಹಿಳೆಯರಿಂದ ರುದ್ರ ಪಠಣ! ಮಂತ್ರಘೋಷದ ಝೇಂಕಾರ


    ಅರಮನೆಯಂತೆ ಕಂಗೊಳಿಸಿದ ದೇವಸ್ಥಾನ
    ದೀಪದ ಗೂಡುಗಳಿಂದ ಹೊನ್ನಾವರದ ಶ್ರೀವೆಂಕಟರಮಣ ದೇವಾಲಯ ಕೂಡಾ ಅರಮನೆಯಂತೆ ಕಂಗೊಳಿಸಿತು. ರಂಗು ರಂಗಿನಲ್ಲಿ ಹಾರಿದ ಎಲ್ಲಾ ಆಕಾಶ ಬುಟ್ಟಿಗಳನ್ನು ಪರಿಸರಕ್ಕೆ ಹಾನಿ ಆಗದ ವಸ್ತುಗಳಿಂದಲೇ ತಯಾರಿಸಿದ್ರು. ಬಟ್ಟೆ, ಐಸ್ ಕ್ರೀಂ ಕಡ್ಡಿ, ಕಲರ್ ಕಾಗದದಂತಹ ನಿರುಪಯುಕ್ತ ವಸ್ತುಗಳಿಂದ ತಯಾರಿಸಿದ ಈ ಪರಿಸರ ಪ್ರೇಮಿ ಕಣ್ಮನ ಸೆಳೆಯುವಂತೆ ಹೊಳೆದವು.


    ಇದನ್ನೂ ಓದಿ: Bengaluru Deepavali: ಝಗಮಗಿಸುತ್ತಿದೆ ಬೆಂಗಳೂರು! ದೀಪಾವಳಿ ಹಬ್ಬದ ಸಂಭ್ರಮ


    ಹೀಗೆ ದೀಪಾವಳಿ ಸಂಭ್ರಮದ ಜೊತೆಗೆ ಆಕಾಶಬುಟ್ಟಿ ಸ್ಪರ್ಧೆಯು ಹೊನ್ನಾವರದಲ್ಲಿ ಹೊಸ ಬಗೆಯ ಅನುಭವ ನೀಡಿತು. ಎಲ್ಲರ ಬದುಕು ಸಹ ಕಲರ್ ಫುಲ್ ಆಗಿರಲಿ ಅಂತಾ ನೆರೆದವರೆಲ್ಲ ಹಾರೈಸಿದರು.


    ವರದಿ: ಎ.ಬಿ.ನಿಖಿಲ್, ಮುಂಡಗೋಡು

    Published by:ಗುರುಗಣೇಶ ಡಬ್ಗುಳಿ
    First published: