Crocodile Park Dandeli: ಉತ್ತರ ಕನ್ನಡದ ಮೊಸಳೆಗಳ ತಾಣ ಈ ಜಾಗ!

X
ಮೊಸಳೆಗಳ ಆರ್ಭಟ ನೋಡಿ

"ಮೊಸಳೆಗಳ ಆರ್ಭಟ ನೋಡಿ"

ಇಲ್ಲಿ ಮಗ್ಗರ್ ಎಂಬ ತಳಿಯ ಅಪ್ಪಟ ಭಾರತೀಯ ಮೊಸಳೆಗಳಿದ್ದು, ಆಕ್ರಮಣಕಾರಿ ಗುಣವನ್ನೂ ಹೊಂದಿದೆ. ನೋಡುಗರಿಗೆ ವೀಕ್ಷಣಾ ಗ್ಯಾಲರಿಗಳನ್ನೂ ಅಳವಡಿಸಲಾಗಿದ್ದು ಭಯಪಡದೇ ಸುರಕ್ಷಿತವಾಗಿ ಮೊಸಳೆ ವೀಕ್ಷಣೆ ಮಾಡಬಹುದಾಗಿದೆ.

  • Share this:

    ಕಾರವಾರ: ಶಾಂತವಾಗಿ ಹರಿಯುತ್ತಿರೋ ನದಿ. ಅಲ್ಲಿ ರಣ ಭಯಂಕರ ಮೊಸಳೆಗಳು ಇವೆ ಅಂದ್ರೆ ನಂಬೋಕೂ ಆಗಲ್ಲ! ನೀರಿನ ಒಳಗಡೇನೆ ಮೊಸಳೆಗಳ ಕಸರತ್ತು ಅಂತಿಂತದ್ದಲ್ಲ. ನೀರಿಂದ ಒಮ್ಮೆಲೆ ಪುಟಿದು ಬರೋ ಈ ಮೊಸಳೆಗಳ ತಾಕತ್ತು (Crocodile Video) ನೋಡ್ಲೇಬೇಕು. ಸದ್ಯ, ಏನಿದ್ರೂ ಇಲ್ಲಿ ಮೊಸಳೆಗಳು ನಂದೇ ಹವಾ ಅಂತಾ ಮೆರೆದಾಡುತ್ತಿವೆ. ಉತ್ತರ ಕನ್ನಡ ಜಿಲ್ಲೆಯ(Uttara Kannada) ಕಾಳಿ ನದಿಯ ತಟದಲ್ಲಿ (Kali River) ಇಂತಹದ್ದೊಂದು (Dandeli Crocodile Park) ಮೊಸಳೆಗಳ ತಾಣವಿದೆ. ಇಲ್ಲಿ ಮರಿ ಮೊಸಳೆಗಳಿಂದ ಹಿಡಿದು ಗಜಗಾತ್ರದ ಮೊಸಳೆಗಳಿವೆ. ಒಂದಲ್ಲ, ಎರಡಲ್ಲ ಇನ್ನೂರಷ್ಟು ಮೊಸಳೆಗಳು ಇಲ್ಲಿವೆ.


    ಹಾಗಾಗಿ ಹಾಲಮಡ್ಡಿಯ ಎರಡು ಎಕರೆಯಲ್ಲಿ ನೈಸರ್ಗಿಕ ಮೊಸಳೆ ಪಾರ್ಕ್ ನಿರ್ಮಾಣವಾಗಿದೆ. ನೀರಿನ ನಡು ನಡುವೆ ನಡುಗಡ್ಡೆಗಳಿರೋದ್ರಿಂದಲೇ ಇಲ್ಲಿ ಮೊಸಳೆಗಳು ಅಧಿಕವಾಗಿ ನೆಲೆಸಿವೆ.


    ಇದನ್ನೂ ಓದಿ: Dandelappa: ಪರಮಾರ ದಾಂಡೇಲಪ್ಪ ಆದ ಕಥೆ! ಇದು ಕರ್ನಾಟಕ-ಗೋವಾ ಬೆಸೆಯೋ ದೇವರು!


    ದೂರದಿಂದ ನೋಡೋಕೆ ಎದೆ ಝಲ್ ಅನ್ನುತ್ತೆ!
    ನಡುಗಡ್ಡೆಯಲ್ಲಿ ವಿರಾಜಮಾನವಾಗಿ ಪವಡಿಸುತ್ತವೆ ಈ ಮೊಸಳೆಗಳನ್ನ ದೂರದಿಂದ ನೋಡೋಕೂ ಎದೆ ಝಲ್ ಎನ್ನುತ್ತೆ!


    ಮಗ್ಗರ್ ತಳಿಯ ಮೊಸಳೆಗಳ ತಾಣ
    ಇಲ್ಲಿ ಮಗ್ಗರ್ ಎಂಬ ತಳಿಯ ಅಪ್ಪಟ ಭಾರತೀಯ ಮೊಸಳೆಗಳಿದ್ದು, ಆಕ್ರಮಣಕಾರಿ ಗುಣವನ್ನೂ ಹೊಂದಿದೆ. ಈ ಪಾರ್ಕ್ ನೋಡ್ಬೇಕಂದ್ರೆ ದಾಂಡೇಲಿಯಿಂದ ಕೆರವಾಡಕ್ಕೆ ಬಂದು ಅಲ್ಲಿಂದ ಒಂದು ಕಿಲೋ ಮೀಟರ್ ನಡೆದು ಸಾಗ್ಬೇಕು.


    ಇದನ್ನೂ ಓದಿ: ಕನ್ನಡ ತಾಯಿಗೆ ಕೈಮುಗಿಯಲು ಇಲ್ಲಿ ಬನ್ನಿ! ಏಕೈಕ ಕನ್ನಡಮ್ಮನ ದೇಗುಲ ಇದು


    Crocodile Park Dandeli
    ಮೊಸಳೆಗಳನ್ನು ನೋಡಲು ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ನೋಡುಗರಿಗೆ ವೀಕ್ಷಣಾ ಗ್ಯಾಲರಿಗಳನ್ನೂ ಅಳವಡಿಸಲಾಗಿದ್ದು ಭಯಪಡದೇ ಸುರಕ್ಷಿತವಾಗಿ ಮೊಸಳೆ ವೀಕ್ಷಣೆ ಮಾಡಬಹುದಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು