• Home
 • »
 • News
 • »
 • uttara-kannada
 • »
 • Dandelappa: ಪರಮಾರ ದಾಂಡೇಲಪ್ಪ ಆದ ಕಥೆ! ಇದು ಕರ್ನಾಟಕ-ಗೋವಾ ಬೆಸೆಯೋ ದೇವರು!

Dandelappa: ಪರಮಾರ ದಾಂಡೇಲಪ್ಪ ಆದ ಕಥೆ! ಇದು ಕರ್ನಾಟಕ-ಗೋವಾ ಬೆಸೆಯೋ ದೇವರು!

ದಾಂಡೇಲಪ್ಪನ ದರ್ಶನ ಪಡೆಯಿರಿ

"ದಾಂಡೇಲಪ್ಪನ ದರ್ಶನ ಪಡೆಯಿರಿ"

ಕಂಡು ಕೇಳರಿಯದ ಊರಲ್ಲಿ ಜೀವನ ಕಟ್ಟಿಕೊಟ್ಟದ್ದಕ್ಕೆ ತನ್ನ ನಾಯಕ ಪರಮಾರನಿಗೆ ದೈವದ ಸ್ಥಾನವನ್ನೇ ನೀಡಿದ್ರು ಜನ. ಮುಂದೆ ಪರಮಾರ ದಾಂಡೇಲಪ್ಪ ಅನ್ನೋ ದೇವಸ್ಥಾನವೂ ನಿರ್ಮಾಣವಾಯಿತು.

 • Share this:

  ಕಾರವಾರ: ದಾಂಡೇಲಿ ಅಂದಾಕ್ಷಣ ನೆನಪಿಗೆ ಬರೋದೇ ದಟ್ಟ ಕಾಡು. ನದಿ, ಅಭಯಾರಣ್ಯ. ಈ ಎಲ್ಲರನ್ನ ಕಾಪಾಡ್ತಿರೋ ಶಕ್ತಿ ದಾಂಡೇಲಪ್ಪ! ಹೀಗೆ ನೀವು ನೋಡ್ತಿರೋ ಜನಸಾಗರದ ಹಿಂದಿರೋದೂ ಇದೇ ದಾಂಡೇಲಪ್ಪ! ಈಗ ಈ ದಾಂಡೇಲಪ್ಪ ದೇವರಿಗೆ (Dandelappa Fair) ಜಾತ್ರಾ ಸಂಭ್ರಮ. ಹಾಗಾಗಿ ನೋಡಿ ಕಾರಣಿಕ ದೇವರ ಜಾತ್ರೆ ಕಣ್ತುಂಬಿಕೊಳ್ಳಲು ಜನ ಕಿಕ್ಕಿರಿದು ಸೇರಿದ್ದಾರೆ. ಸಾಲು ಗಟ್ಟಿ ನಿಂತು ದೇವರ ಆಶೀರ್ವಾದ ಬೇಡುತ್ತಿದ್ದಾರೆ. ಪರಮಾರ ದಾಂಡೇಲಪ್ಪ (Dandelappa Temple) ಬಗ್ಗೆ ಐತಿಹಾಸಿಕ ಕಥೆಯೊಂದಿದೆ. ಈ ಕಥೆಯೇ ಈತನಿಗೆ ದೈವದ ಸ್ಥಾನ ಕಲ್ಪಿಸಿದೆ. ಪೋರ್ಚುಗೀಸರು ಗೋವಾದಲ್ಲಿ (Goa) ಆಡಳಿತ ನಡೆಸುವಾಗ ಸ್ಥಳೀಯರನ್ನು ಗುಳೆ ಎಬ್ಬಿಸಿದ್ರಂತೆ. ಆಗ ಅವರೆಲ್ಲ ಪರಮಾರ ಎಂಬ ನಾಯಕನ ನೇತೃತ್ವದಲ್ಲಿ ದಾಂಡೇಲಿಗೆ (Dandeli) ಬಂತು ನೆಲೆ ನಿಂತರಂತೆ.


  ಕಂಡು ಕೇಳರಿಯದ ಊರಲ್ಲಿ ಜೀವನ ಕಟ್ಟಿಕೊಟ್ಟದ್ದಕ್ಕೆ ತನ್ನ ನಾಯಕ ಪರಮಾರನಿಗೆ ದೈವದ ಸ್ಥಾನವನ್ನೇ ನೀಡಿದ್ರು ಜನ. ಮುಂದೆ ಪರಮಾರ ದಾಂಡೇಲಪ್ಪ ಅನ್ನೋ ದೇವಸ್ಥಾನವೂ ನಿರ್ಮಾಣವಾಯಿತು. ಹೀಗೆ ಅಂದಿನಿಂದ ಪರಮಾರ ದಾಂಡೇಲಪ್ಪ ಗೋವಾ-ಕರ್ನಾಟಕ ಬೆಸೆಯುವ ದೇವರಾಗಿಯೂ ಹರಸುತ್ತಿದ್ದಾನೆ.


  ಇದನ್ನೂ ಓದಿ: Uttara Kannada: 70 ವರ್ಷದ ಈ ತಾತ ಈಗ ಡಿಪ್ಲೋಮಾ ಸ್ಟೂಡೆಂಟ್!


  ಪ್ರತಿ ದಸರಾಕ್ಕೂ ಇಲ್ಲಿ ಜಾತ್ರೆ ನಡೆಯುವುದು ವಾಡಿಕೆ. ಈ ಸಮಯದಲ್ಲಂತೂ ದಾಂಡೇಲಪ್ಪನನ್ನು ಕಾಣಲು ಬರುವವರ ಸಂಖ್ಯೆ ಕಡಿಮೆಯದ್ದಲ್ಲ. ಜಾತ್ರಾ ಸಂದರ್ಭ ಪಲ್ಲಕ್ಕಿಯಲ್ಲಿ ದಾಂಡೇಲಪ್ಪನ ಮೂರ್ತಿಯನ್ನು ತಂದು ದರ್ಶನಕ್ಕೆ ಇಡಲಾಗುತ್ತದೆ.


  ಇದನ್ನೂ ಓದಿ: ಕನ್ನಡ ತಾಯಿಗೆ ಕೈಮುಗಿಯಲು ಇಲ್ಲಿ ಬನ್ನಿ! ಏಕೈಕ ಕನ್ನಡಮ್ಮನ ದೇಗುಲ ಇದು


  Dandelappa Temple
  ದಾಂಡೇಲಪ್ಪನ ದರ್ಶನ ಪಡೆಯಿರಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


  ಮೂರ್ತಿಯು ಗೋಪಾಲಕನ ವೇಷದಲ್ಲಿ ಕೈಯಲ್ಲಿ ಬೆತ್ತ ಹಾಗೂ ಕಂಬಳಿ ಹೊತ್ತ ರೂಪದಲ್ಲಿದ್ದು, ಇದಕ್ಕೆ ಕುರಿ-ಕೋಳಿಗಳನ್ನ ಬಲಿ ಅರ್ಪಿಸುವ ಸಂಪ್ರದಾಯವೂ ಇದೆ. ಹೀಗೆ ಪರಮಾರ ದಾಂಡೇಲಪ್ಪ ಜಾತ್ರೆ ವೈಭವದಿಂದ ಸಂಪನ್ನಗೊಳ್ಳುತ್ತದೆ. ದಾಂಡೇಲಪ್ಪನನ್ನು ಕಂಡು ಭಕ್ತರೂ ಪುನೀತರಾಗುತ್ತಾರೆ.


  ವರದಿ: ಎ.ಬಿ.ನಿಖಿಲ್, ಮುಂಡಗೋಡು

  Published by:ಗುರುಗಣೇಶ ಡಬ್ಗುಳಿ
  First published: