ಮಿಕ್ಕಿ ಮೌಸ್, ಛೋಟಾ ಭೀಮ್, ಮೋಟು ಪತ್ಲು ಹೀಗೆ ಹಸಿರು ಕಾನನ ಮಧ್ಯೆ ಕಾರ್ಟೂನು ಲೋಕ. ಮರದಡಿ ನಿಂತು ಇಣುಕುವ ಚಾರ್ಲಿ ಚಾಪ್ಲಿನ್, ಜೋಕಾಲಿ ಆಡುತ್ತಾ ಖುಷಿ ಪಡುತ್ತಿರೋ ಮಕ್ಕಳು ಹೀಗೆ ಎಲ್ಲಿ ನೋಡಿದ್ರಲ್ಲಿ ಮಕ್ಕಳದ್ದೇ ಕಲರವ. ಪ್ರಕೃತಿ ಮಡಿಲಲ್ಲಿ ಮಕ್ಕಳ ಖುಷಿ ನೋಡ್ತಿದ್ರೆ ಹಿರಿಯರು ಹಿರಿ ಹಿರಿಯಾಗಿ ಹಿಗ್ಗುತ್ತಾರೆ. ಅಷ್ಟಕ್ಕೂ ಈ ಮಕ್ಕಳ ಪ್ರಪಂಚ ಯಾವ ಕಾಡಿನಲ್ಲಿದೆ (Forest) ಗೊತ್ತಾ? ಹೇಳ್ತೀವಿ ನೋಡಿ. ಉತ್ತರ ಕನ್ನಡದ (Uttara Kannada) ದಾಂಡೇಲಿಯಲ್ಲೇ (Dandeli) ಇದೆ ಈ ದಂಡಕಾರಣ್ಯ ಇಕೋ ಪಾರ್ಕ್ (Dandakaranya Eco Park).
ಈ ದಂಡಕಾರಣ್ಯ ಪ್ರವೇಶಿಸುತ್ತಲೇ ವಿವಿಧ ಬಗೆಯ ಆಟಿಕೆ ವಸ್ತುಗಳು, ಪ್ರಾಣಿಗಳ ಪ್ರತಿರೂಪಗಳು, ದೊಡ್ಡದಾದ ಮರಗಳು, ಹುಲಿ ಹೆಜ್ಜೆಯುಳ್ಳ ಕಾರಿಡಾರ್, ವಿಶ್ರಾಂತಿ ಮಂದಿರ ಹೀಗೆ ಸುಂದರವಾದ ಪರಿಸರವಿದೆ. ಜೊತೆಗೆ ದೇಸೀಯ ಛೋಟಾ ಭೀಮ್ನಿಂದ ಹಿಡಿದು ವಿದೇಶಿ ಕ್ಯಾಪ್ಟನ್ ಅಮೇರಿಕಾವರೆಗೆ ಎಲ್ಲರೂ ಇದ್ದಾರೆ.
ಇದನ್ನೂ ಓದಿ: Positive Story: ಉತ್ತರ ಕನ್ನಡಕ್ಕೆ ಮಲ್ಟಿ ನ್ಯಾಷನಲ್ ಕಂಪನಿಗಳು! ಸರ್ಕಾರಕ್ಕೇ ಮಾದರಿಯಾಗ್ತಿದೆ ಮನುವಿಕಾಸ
ಇಲ್ಲಿಗೆ ಬರೋದು ಹೀಗೆ!
ಇಲ್ಲಿಗೆ ಬರಬೇಕೆಂದ್ರೆ ದಾಂಡೇಲಿ ಬಸ್ ಸ್ಟ್ಯಾಂಡ್ಗೆ ಬಂದ್ರೆ ಸಾಕು ಅಲ್ಲಿಂದ ಕೇವಲ 100 ಮೀಟರ್ ಅಂತರದಲ್ಲಿ ಈ ಪಾರ್ಕ್ ಇದೆ. ಬೆಳಿಗ್ಗೆ 9 ರಿಂದ ಸಾಯಂಕಾಲ 6 ಗಂಟೆವರೆಗೆ ಎಲ್ಲಾ ದಿನವೂ ಈ ಪಾರ್ಕ್ ತೆಗೆದಿರುತ್ತೆ.
ಇದನ್ನೂ ಓದಿ: Positive Story: ಈ ಸ್ಮಶಾನಕ್ಕೆ ಬಂದ್ರೆ ಸಿಗುತ್ತೆ ನೆಮ್ಮದಿ! ಶಿರಸಿಯಲ್ಲೊಂದು ಅಪರೂಪದ ರುದ್ರಭೂಮಿ
ಮಕ್ಕಳನ್ನು ಈ ಲೋಕಕ್ಕೆ ಕರೆದೊಯ್ಯಲು ಮರೆಯಬೇಡಿ
ಅಷ್ಟೇ ಅಲ್ಲದೇ ಪ್ರವೇಶ ದರ ಅಂತಾ ಹಿರಿಯರಿಗೆ 20 ರೂಪಾಯಿ, ಮಕ್ಕಳಿಗೆ 10 ರೂಪಾಯಿ. ಸೋ, ಕ್ರಿಸ್ಮಸ್ ರಜೆ ಸಿಕ್ರೆ ಮಕ್ಕಳನ್ನ ದಾಂಡೇಲಿಯ ಈ ಮಕ್ಕಳ ಲೋಕಕ್ಕೆ ಕರೆದೊಯ್ಯಲು ಮರೆಯದಿರಿ.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ