Keladi: ತೇರನ್ನೇರಿದ ದಲಿತರು! ರಾಜ್ಯಕ್ಕಾಗಿ ಜೀವವನ್ನೇ ಬಿಟ್ಟ ವೀರ ಪುರುಷರು!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ದಲಿತರಿಬ್ಬರು ರಾಮೇಶ್ವರನ ಸಮನಾಗಿ ತೇರಲ್ಲಿ ಕುಳಿತು ರಾಜ ಮರ್ಯಾದೆ ಪಡೆಯುತ್ತಾರೆ‌‌. ಅಲ್ಲದೇ, ಬ್ರಾಹ್ಮಣರಿಂದ ಹಿಡಿದು ಎಲ್ಲಾ ಜಾತಿಯವರೂ ಇವರ ಮುಂದೆ ಕೈ ಜೋಡಿಸಿ ನಿಂತು ಪ್ರಾರ್ಥನೆ ಮಾಡುತ್ತಾರೆ.

  • News18 Kannada
  • 3-MIN READ
  • Last Updated :
  • Uttara Kannada, India
  • Share this:

    ಉತ್ತರ ಕನ್ನಡ: ಅರ್ಧ ರಾತ್ರಿಯ ಸಮಯ, ಜೈಕಾರದ ಜೊತೆಗೆ ರಥ ಎಳೆಯುತ್ತಿರುವ ಭಕ್ತರು. ಬ್ಯಾಂಡ್, ಪಟಾಕಿ ಸದ್ದಿಗೆ ಮೈ ಮರೆತು ನೋಡ್ತಿರೋ ಜನ. ಹೀಗೆ ರಥದ ಮೇಲೆ ವಿರಾಜಮಾನರಾಗಿ ನಿಂತಿರೋ ಇಬ್ಬರು ಆಜಾನುಬಾಹುಗಳ ಮೂರ್ತಿ.‌ ಹಾಗಿದ್ರೆ ಅಂತಹ ಇತಿಹಾಸದ (Keladi History) ಕಥೆ ಏನು? ಆ ಇಬ್ಬರು ಧೀರರು ಯಾರು? ಈ ಎಲ್ಲ ಕುತೂಹಲಕ್ಕೆ ಉತ್ತರ ಇಲ್ಲಿದೆ ನೋಡಿ.


    ಯೆಸ್, ನೋಡೋದಕ್ಕೆ ಉಗ್ರರೂಪ ಹೊಂದಿರೋ ಇವರು ಕೆಳದಿ ನಾಯಕ ಕಾಲದ ವೀರ ಪುರುಷರು. ಅಂದಹಾಗೆ ಈ ಇಬ್ಬರು ಅಜಾನುಬಾಹು ಪುರುಷರು ದಲಿತ ಸಮುದಾಯಕ್ಕೆ ಸೇರಿದವರು. 1499ರ ಸಮಯ ಕೆಳದಿ ನಾಯಕವಂಶದ ಅರಸ ಚೌಡಪ್ಪ ನಾಯಕ ಯಾದವ ಮತ್ತು ಮುರಾರಿ ಎಂಬ ಈ ಇಬ್ಬರು ಯುವಕರನ್ನ ತನ್ನ ಸೇನಾನಿಗಳಾಗಿ ನೇಮಿಸಿಕೊಂಡಿದ್ದರು.


    ನರಬಲಿಗೆ ಅರ್ಪಣೆ!
    ಈ ಇಬ್ಬರು ಯುವಕರು ಹಾಗೆಯೇ ಎಲ್ಲೇ ದಂಡೆತ್ತಿ ಹೋದರೂ ದಿಗ್ವಿಜಯ ಸಾಧಿಸಿಯೇ ಹಿಂತಿರುಗುತ್ತಿದ್ದರು. ಆದರೆ ಈ ಸಮಯಕ್ಕೆ ಎದುರಾದ ಆರ್ಥಿಕ ಸಂಕಷ್ಟ ರಾಜ್ಯವನ್ನ ನಲುಗಿಸಿಬಿಟ್ಟಿತ್ತು. ಆ ಸಮಯದಲ್ಲೇ ದೈವ ಭಕ್ತ ಚೌಡಪ್ಪ ನಾಯಕನಿಗೆ ಏಳು ಕೊಪ್ಪರಿಗೆ ನಿಧಿಯೇನೋ ಸಿಕ್ಕಿತು. ಅನಿವಾರ್ಯವಾಗಿ ನರಬಲಿ ಪಡೆಯಬೇಕೆಂದಾಗಿ ಯಾದವ ಮತ್ತು ಮುರಾರಿಯೇ ನಿಧಿ ದೇವತೆಗೆ ಬಲಿ ಅರ್ಪಿಸಿಕೊಂಡರು ಅನ್ನೋ ನಂಬಿಕೆಯಿದೆ‌.


    ಇವರಿಗೆ ಸಿಕ್ಕಿದೆ ದೈವೀ ಸ್ಥಾನ
    ಅಂದಿನಿಂದ ರಾಮೇಶ್ವರನನ್ನು ಕರೆದೊಯ್ಯುವ ತೇರಲ್ಲಿ ಸ್ಥಾನ ಕಲ್ಪಿಸಿಕೊಟ್ಟ ಅರಸ ಆ ಇಬ್ಬರು ದಲಿತ ಯುವಕರಿಗೆ ದೇವರ ಸ್ಥಾನ‌‌ ಕಲ್ಪಿಸಿದನಂತೆ. ಹೀಗೆ ದಲಿತರಿಬ್ಬರು ರಾಮೇಶ್ವರನ ಸಮನಾಗಿ ತೇರಲ್ಲಿ ಕುಳಿತು ರಾಜ ಮರ್ಯಾದೆ ಪಡೆಯುತ್ತಾರೆ‌‌. ಅಲ್ಲದೇ, ಬ್ರಾಹ್ಮಣರಿಂದ ಹಿಡಿದು ಎಲ್ಲಾ ಜಾತಿಯವರೂ ಇವರ ಮುಂದೆ ಕೈ ಜೋಡಿಸಿ ನಿಂತು ಪ್ರಾರ್ಥನೆ ಮಾಡುತ್ತಾರೆ. ಇಂದಿಗೂ ಆ ಸಂಪ್ರದಾಯ ಶಿವಮೊಗ್ಗದ ಸಾಗರದ ಈ ರಾಮೇಶ್ವರ ಜಾತ್ರೆಯಲ್ಲಿ ನಡೆಯುತ್ತಾ ಬಂದಿವೆ.


    ಇದನ್ನೂ ಓದಿ: Uttara Kannada: ಹೂಗಳಲ್ಲಿ ಅರಳಿದ ಮಾರಿಕಾಂಬೆ! 25,000ಕ್ಕೂ ಹೆಚ್ಚು ಬಗೆಯ ಪುಷ್ಪಗಳ ಪ್ರದರ್ಶನ


    ಧೂತ ರಥದ ವಿಶೇಷ
    ಜಾತ್ರೆಯ ಎರಡನೇ ದಿನ ರಾತ್ರಿ 12 ರ ಸುಮಾರಿಗೆ ಈ ರಥದ ಯಾತ್ರೆ ಶುರುವಾಗುತ್ತೆ. ಇದನ್ನ ಧೂತ ರಥ ಎಂದೇ ಕರೆಯಲಾಗುತ್ತೆ. ಆ ರಾತ್ರಿಯಿಡೀ ರಾಮೇಶ್ವರ ಜೊತೆ ಯಾದವ ಮತ್ತು ಮುರಾರಿ ರಥದಲ್ಲಿ ಸ್ಥಾನ ಅಲಂಕರಿಸುತ್ತಾರೆ. ಜಯಘೋಷಗಳೊಂದಿಗೆ ರಥೋತ್ಸವ ನಡೆಯುತ್ತದೆ.


    ಇದನ್ನೂ ಓದಿ: Uttara Kannada: ಮಲೆನಾಡ ರೈತರ ಮೊಗದಲ್ಲಿ ನಗು ತಂದ ಬಿಸಿಲನಾಡಿನ ಚೆಲುವೆ!


    ಒಟ್ಟಿನಲ್ಲಿ ಕೆಳದಿ ಅರಸರ ನಿರ್ಧಾರವೊಂದು ದಲಿತ ಸಮುದಾಯಕ್ಕೆ ಸೇರಿದ ಯುವಕರಿಬ್ಬರಿಗೆ ಇಂದಿಗೂ ದೈವೀ ಸ್ಥಾನವನ್ನ ನೀಡಿ ಜನರ ಮನಸ್ಸಲ್ಲಿ ಅವರ ತ್ಯಾಗ ಉಳಿಯುವಂತೆ ಮಾಡಿರುವುದು ವಿಶೇಷವೇ ಸರಿ.


    ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ

    Published by:ಗುರುಗಣೇಶ ಡಬ್ಗುಳಿ
    First published: