• Home
  • »
  • News
  • »
  • uttara-kannada
  • »
  • Uttara Kannada: ಕಸದಿಂದ ಅರಳಿದ ವಿಧವಿಧದ ಅಲಂಕಾರ! ಲಕಲಕ ಹೊಳೆಯುತ್ತಿದೆ ಕಾರವಾರ ನಗರಸಭೆ!

Uttara Kannada: ಕಸದಿಂದ ಅರಳಿದ ವಿಧವಿಧದ ಅಲಂಕಾರ! ಲಕಲಕ ಹೊಳೆಯುತ್ತಿದೆ ಕಾರವಾರ ನಗರಸಭೆ!

X
ಕಸದಿಂದ ರಸ!

"ಕಸದಿಂದ ರಸ!"

ಪ್ಲಾಸ್ಟಿಕ್ ತ್ಯಾಜ್ಯಗಳನ್ನೇ ಬಳಸಿಕೊಂಡು ಕಚೇರಿ ಸೌಂದರ್ಯವನ್ನೂ ಹೆಚ್ಚಿಸಿಕೊಳ್ಳಬಹುದು ಎಂಬುದನ್ನ ಕಾರವಾರ ನಗರಸಭೆ ತೋರಿಸಿಕೊಟ್ಟಿದೆ.

  • Share this:

    ಕಾರವಾರ: ಚಾಕೊಲೇಟ್ ಸಿಪ್ಪೆ, ಐಸ್ಕ್ರೀಮ್ ಸ್ಪೂನ್, ಪ್ಲಾಸ್ಟಿಕ್ ಲೋಟ, ಹಾಳಾದ ಬಲ್ಬ್.ಚಂದ ಚಂದವಾಗಿ ಜೋಡಿಸಿಟ್ಟಿರುವ ಕಸ (Craft From Waste) ಎಂದು ಎಸೆದಿದ್ದ ವಸ್ತುಗಳು. ಕಸದ ಬುಟ್ಟಿ ಸೇರಿದ್ದ ವಸ್ತುಗಳೆಲ್ಲ ಈಗ ಲಕಲಕ ಹೊಳೆಯುತ್ತಿವೆ! ಇವನ್ನೆಲ್ಲ ಮನೆಲಿಟ್ರೆ ಖಂಡಿತ ಮನೆಗೊಂದು ಕಳೆ ಬರೋದು ಗ್ಯಾರಂಟಿ. ಹೀಗೆ ಕಸಗಳನ್ನೆಲ್ಲ ಆಯ್ದು ಅದ್ಭುತ ವಸ್ತುಗಳನ್ನು ತಯಾರಿಸಿದ್ದು ಮತ್ಯಾರೂ ಅಲ್ಲ, ಕಾರವಾರ (Karwar) ನಗರಸಭೆ!


    ಪ್ಲಾಸ್ಟಿಕ್ ತ್ಯಾಜ್ಯಗಳನ್ನೇ ಬಳಸಿಕೊಂಡು ಕಚೇರಿ ಸೌಂದರ್ಯವನ್ನೂ ಹೆಚ್ಚಿಸಿಕೊಳ್ಳಬಹುದು ಎಂಬುದನ್ನ ಕಾರವಾರ ನಗರಸಭೆ ತೋರಿಸಿಕೊಟ್ಟಿದೆ. ಸ್ವಚ್ಛ ಭಾರತದ ಜಾಗೃತಿ ಮೂಡಿಸಲು ನಗರಸಭೆ ಕಚೇರಿಯನ್ನೇ ಪ್ಲಾಸ್ಟಿಕ್ ವಸ್ತುಗಳಿಂದ ಅಲಂಕರಿಸಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯಗಳಿಂದ ತಯಾರಿಸಿದ ಕಲಾಕೃತಿಗಳನ್ನ ನಗರಸಭೆ ಆವರಣದಲ್ಲಿ ಇರಿಸಲಾಗಿದ್ದು, ಇದೀಗ ಸಾರ್ವಜನಿಕರ ಗಮನ ಸೆಳೆಯುತ್ತಿವೆ.


    ಇದನ್ನೂ ಓದಿ: Uttara Kannada: ಅಯ್ಯಪ್ಪನ ದರ್ಶನಕ್ಕೆ ಹೊರಟ ನಾಯಿ! ಪಾದಯಾತ್ರಿಗಳ ಜೊತೆ ಶಬರಿಮಲೆಗೆ ಪಯಣ


    ಕಸ ಎಂದು ಎಸೆದಿದ್ದ ಈ ವಸ್ತುಗಳಿಂದ ಕ್ರಾಫ್ಟ್
    ಪ್ಲಾಸ್ಟಿಕ್ ತ್ಯಾಜ್ಯಗಳಾದ ಬಾಟಲ್, ಮುಚ್ಚಳ, ಚಮಚ, ಪೈಪ್, ಟಯರ್, ಆಯಿಲ್ ಕ್ಯಾನ್, ರಟ್ಟು, ಪ್ಲಾಸ್ಟಿಕ್ ಲೋಟ ಹಾಗೂ ದಾರಗಳಲ್ಲಿ ವಿವಿಧ ಈ ಅಲಂಕಾರಿಕ ವಸ್ತುಗಳು ತಯಾರಾಗಿವೆ. ಹೂವಿನ ಕುಂಡ, ಕುರ್ಚಿ, ಹ್ಯಾಂಗಿಂಗ್ ಪಾಟ್, ಕಸದ ತೊಟ್ಟಿ ಸೇರಿದಂತೆ ಅನೇಕ ಗೃಹ ಅಲಂಕಾರಿಕ ವಸ್ತುಗಳು ಅರಳಿ ನಗುತ್ತಿವೆ.


    ತ್ಯಾಜ್ಯಗಳ ಮರುಬಳಕೆ ಬಗ್ಗೆ ಜಾಗೃತಿ
    ಇನ್ನು ಸಾರ್ವಜನಿಕರಿಗಷ್ಟೇ ಅಲ್ದೇ, ಶಾಲಾ ಮಕ್ಕಳಲ್ಲೂ ತ್ಯಾಜ್ಯಗಳ ಮರುಬಳಕೆಯ ಬಗ್ಗೆ ಜಾಗೃತಿ ಮೂಡಿಸಲಾಗ್ತಿದೆ. ನಗರಸಭೆಗೆ ಆಗಮಿಸಿದ ಸಾರ್ವನಿಕರು ಮೂಗಿನ ಮೇಲೆ ಬೆರಳಿಡುವಂತೆ ಮಾಡ್ತಿವೆ ಈ ಕಲಾಕೃತಿಗಳು! ಕಸದಿಂದ ರಸ ತೆಗೆಯೋ ಪಾಲಿಕೆ ಪ್ರಯತ್ನಕ್ಕೆ ಭೇಷ್ ಅಂತಿದ್ದಾರೆ.


    ಇದನ್ನೂ ಓದಿ: Volleyball Tournament: 10 ಜಿಲ್ಲೆಗಳ 150 ಪುರುಷ, 40 ಮಹಿಳಾ ವಾಲಿಬಾಲ್ ಆಟಗಾರರ ಜಿದ್ದಾಜಿದ್ದಿ!


    ಒಟ್ಟಾರೆ ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯದೇ ಹೀಗೆ ಅಲಂಕಾರಿಕ ವಸ್ತುಗಳನ್ನ ತಯಾರಿಸಬಹುದು ಅನ್ನೋದಕ್ಕೆ ಕಾರವಾರ ನಗರಸಭೆ ಮಾದರಿಯಾಗಿದೆ.


    ವರದಿ: ದೇವರಾಜ್ ನಾಯ್ಕ್: ಕಾರವಾರ

    Published by:ಗುರುಗಣೇಶ ಡಬ್ಗುಳಿ
    First published: