• Home
  • »
  • News
  • »
  • uttara-kannada
  • »
  • Positive Story: ಬ್ರಿಟೀಷರ ವಿರುದ್ಧ ಹೋರಾಡಿ ದೇವರಾದ ಹಿಂದೂ-ಮುಸ್ಲಿಂ ಗೆಳೆಯರು, ಅಕ್ಕಪಕ್ಕದಲ್ಲೇ ಇದೆ ದೇವಸ್ಥಾನ

Positive Story: ಬ್ರಿಟೀಷರ ವಿರುದ್ಧ ಹೋರಾಡಿ ದೇವರಾದ ಹಿಂದೂ-ಮುಸ್ಲಿಂ ಗೆಳೆಯರು, ಅಕ್ಕಪಕ್ಕದಲ್ಲೇ ಇದೆ ದೇವಸ್ಥಾನ

ಈ ಗೆಳೆಯರು ದೇವರಾದರು!

"ಈ ಗೆಳೆಯರು ದೇವರಾದರು!"

ರವಳನಾಥ ಮತ್ತು ಗುಮ್ ಶಹೀದ್ ಸೋದೆ ಅರಸರ ಸೈನ್ಯದಲ್ಲಿ ಇಬ್ಬರು ಪ್ರಾಣಸ್ನೇಹಿತರು. ಹದಿನೇಳನೆ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಮಡಿದ ಇವರಿಬ್ಬರೂ ಈಗ ದೈವತ್ವಕ್ಕೇರಿದ್ದಾರೆ.

  • News18 Kannada
  • Last Updated :
  • Uttara Kannada, India
  • Share this:

    ಶಿರಸಿ: ಇಲ್ಲೇನಾದ್ರೂ ನೀವು ದೇವಸ್ಥಾನಕ್ಕೆ ಹೋಗ್ತೀವಿ ಅಂದ್ರೆ ಈ ದರ್ಗಾಕ್ಕೂ ಹೋಗ್ಲೇಬೇಕು. ಇನ್ನು ದರ್ಗಾಕ್ಕೆ ಹೋಗ್ತೀನಿ ಅಂದ್ರೆ ಈ ದೇವಸ್ಥಾನಕ್ಕೂ ಬರ್ಲೇಬೇಕು! ಇಲ್ಲ, ನಾನು ಒಂದು ಕಡೆ ಮಾತ್ರ ಹೋಗ್ತೀನಿ ಅಂದ್ರೆ ದೇವರು ಮೆಚ್ಚೋದಿಲ್ಲ! ನಿಮ್ಮ ಹರಕೆ ಫಲಿಸೋದೇ ಇಲ್ಲ! ಇಂಥದ್ದೊಂದು ವಿಶೇಷ ದೇಗುಲ ಮತ್ತು ದರ್ಗಾ ಇರೋದು ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲೇ! (Uttara Kannada) ರವಳನಾಥ ಹಾಗೂ ಗುಮ್ ಶಹೀದ್ ಪುಣ್ಯಕ್ಷೇತ್ರ ಈ ಕೋಮು ಭಾವೈಕ್ಯತೆಯ (Communal Harmony) ಸನ್ನಿಧಾನ. ಇಬ್ಬರು ಹಿಂದೂ-ಮುಸ್ಲಿಂ ಸ್ನೇಹಿತರ (Hindu Muslim Friends) ಭಾವೈಕ್ಯತೆಯ ಆರಾಧನಾ ತಾಣ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ತಾಟವಾಳ.


    ರವಳನಾಥ ಮತ್ತು ಗುಮ್ ಶಹೀದ್ ಸೋದೆ ಅರಸರ ಸೈನ್ಯದಲ್ಲಿ ಇಬ್ಬರು ಪ್ರಾಣಸ್ನೇಹಿತರು. ಹದಿನೇಳನೆ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಮಡಿದ ಇವರಿಬ್ಬರೂ ಈಗ ದೈವತ್ವಕ್ಕೇರಿದ್ದಾರೆ.


    ಬ್ರಿಟೀಷರ ವಿರುದ್ಧ ಪ್ರಬಲ ಹೋರಾಟ
    17ನೇ ಶತಮಾನದ ಮಧ್ಯಭಾಗದಲ್ಲಿ ಬ್ರಿಟಿಷರ ಆಸೆಗಣ್ಣಿಗೆ ಬಲಿಯಾದ ಸೋಂದಾ ಸಂಸ್ಥಾನ ಅಕ್ಷರಶಃ ನಲುಗಿತ್ತು. ಆಗಿನ ರಾಜ ತಮ್ಮ ಸಂಸ್ಥಾನಕ್ಕೆ ಸೇರಿದ ಅತಿ ಮುಖ್ಯ ದಾಖಲೆಗಳನ್ನು ಈ ಇಬ್ಬರು ಸೇನಾನಿಗಳಿಗೆ ಒದಗಿಸಿ ಇವುಗಳನ್ನು ಕಾಪಾಡುವಂತೆ ಹೇಳಿದ್ದನಂತೆ. ಬ್ರಿಟಿಷ್ ಸೇನೆ ತಾಟವಾಳವನ್ನು ಮುತ್ತಿಕೊಂಡಾಗ ಈ ಇಬ್ಬರು ಗೆಳೆಯರು ಬ್ರಿಟಿಷರನ್ನು ಹೊಡೆದೋಡಿಸಿದರು.


    ಪ್ರತಿರೋಧ ಒಡ್ಡಿ ಅರಣ್ಯವಾಸ!
    ಆದರೆ ಬ್ರಿಟೀಷರು ಮತ್ತೊಮ್ಮೆ ಪ್ರಬಲ ದಾಳಿ ಮಾಡಿದಾಗ ಸೋಲೋಪ್ಪಿಕೊಳ್ಳದೇ ಕಾಗದ ಪತ್ರಗಳೊಂದಿಗೆ ಅರಣ್ಯವಾಸಕ್ಕೆ ಹೊರಟರು. ಬ್ರಿಟೀಷರು ಎಷ್ಟೇ ಹುಡುಕಿದ್ರೂ ಕಾಡಿನಲ್ಲಿ ರವಳನಾಥ ಮತ್ತು ಗುಮ್ ಶಹೀದ್ರನ್ನು ಪತ್ತೆಹಚ್ಚಲು ಆಗ್ಲೇಇಲ್ಲ.


    ಇದನ್ನೂ ಓದಿ: Rani Mahal: ಇದು ಕರುನಾಡಿನ ಮೊಟ್ಟ ಮೊದಲ ರಾಜಮನೆತನದ ರಾಣಿ ನಿವಾಸ


    ವೀರಸ್ವರ್ಗ ಸೇರಿ ದೈವತ್ವಕ್ಕೇರಿದ ಗೆಳೆಯರು
    ಇತ್ತ ಬ್ರಿಟೀಷರ ಕೈಸೇರದಂತೆ ದಾಖಲೆಗಳನ್ನು ಸುಟ್ಟು ಹಾಕಿದ್ಧ ಇಬ್ಬರು ಗೆಳೆಯರು ಅನ್ನ ನೀರಿಲ್ಲದೇ ಒಟ್ಟಿಗೆ ವೀರಸ್ವರ್ಗ ಸೇರಿದರು. ಇವರು ಸ್ವರ್ಗಸ್ಥರಾದ ಸ್ವಲ್ಪ ಸಮಯದಲ್ಲಿ ಪಂಚಕಲ್ಲಿನ ವಿಗ್ರಹ ಹಾಗೂ ದರ್ಗಾ ಆಕೃತಿಯಲ್ಲಿ ಅಕ್ಕಪಕ್ಕದಲ್ಲಿ ಒಡಮೂಡಿದರು ಎಂಬ ನಂಬಿಕೆಯಿದೆ. ಅಲ್ಲಿಂದ ಇಲ್ಲಿ ತನಕ ರವಳನಾಥ ಮತ್ತು ಗುಮ್ ಶಹೀದ್ ಸ್ನೇಹಿತರಿಗೆ ಹಿಂದೂ ಮುಸ್ಲಿಂ ಭೇದ ಮರೆತು ಪೂಜೆ ಪುನಸ್ಕಾರ ನಡೆಯುತ್ತಿದೆ. ದರ್ಗಾಕ್ಕೆ ಬಂದ ಮುಸ್ಲಿಂರು ದೇವಸ್ಥಾನಕ್ಕೆ , ದೇವಸ್ಥಾನಕ್ಕೆ ಬಂದ ಹಿಂದೂಗಳು ದರ್ಗಾಕ್ಕೆ ಹೋಗಲೇಬೇಕು ಎಂಬ ಅಘೋಷಿತ ಕಟ್ಟಳೆ ಜಾರಿಯಲ್ಲಿದೆ.


    ಇದನ್ನೂ ಓದಿ: Freedom Fighter: 117 ವರ್ಷದ ಈ ಸ್ವಾತಂತ್ರ್ಯ ಹೋರಾಟಗಾರ ಕೇವಲ‌ ಗಡ್ಡೆಗೆಣಸು ತಿಂದು ಬದುಕುತ್ತಿದ್ದಾರೆ!


    Tatval
    ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ಇವತ್ತಿಗೂ ಈ ರವಳನಾಥ ಗುಮ್ ಶಹೀದ್ ಸನ್ನಿಧಾನವು ಭಾವೈಕ್ಯತೆಯ ತಾಣವಾಗಿದೆ. ದೇಗುಲ ದರ್ಗಾ ಎರಡೂ ಒಂದಕ್ಕೊಂದು ಬೆಸೆದುಕೊಂಡು ಹಿಂದೂ ಮುಸ್ಲಿಂ ಐಕ್ಯತೆಯ ಸಂದೇಶ ಸಾರುತ್ತಿದೆ.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: