Uttara Kannada: ಉತ್ತರ ಕನ್ನಡದ ಹುಡುಗಿ ಕಾಮನ್​ವೆಲ್ತ್​ನಲ್ಲಿ! ಇವರೇ ನೋಡಿ ಕರುನಾಡ ಸಾಧಕಿ

ಉತ್ತರ ಕನ್ನಡ ಜಿಲ್ಲೆಯ ಲಕ್ಕೊಳ್ಳಿ ಎಂಬ ಕುಗ್ರಾಮ, ಆ ಗ್ರಾಮದಲ್ಲಿ ದಿನಕ್ಕೆ 300-400 ದುಡಿಯೋ ಟ್ರ್ಯಾಕ್ಟರ್ ಡ್ರೈವರ್ ಒಬ್ಬ ಅವನ ಮತ್ತೆ ಜಗತ್ತು ಎಂದರೆ ಅವರ ಹೆಂಡತಿ ಮತ್ತೆ ಮೂರು ಮಕ್ಕಳು‌. ಇದ್ಯಾವ್ದೋ ಫಿಲ್ಮ್ ಕಥೆ ಹೇಳ್ತಿದಾರೆ ಅನ್ಕೋಬೇಡಿ, ರಿಯಲ್ ಕಥೆ

ಉತ್ತರ ಕನ್ನಡದ ಮಗಳು ಸಿಮಿ

"ಉತ್ತರ ಕನ್ನಡದ ಮಗಳು ಸಿಮಿ"

 • Share this:
  ಉತ್ತರ ಕನ್ನಡ: ಸಾಮಾನ್ಯರ ಪಾದಗಳು ಯಾವತ್ತೂ ಭೂಮಿನೇ ತಾಕೋದು, ಸಾಧಕರ ಪಾದಗಳಿಗೆ ಮಾತ್ರ ಆಕಾಶ ಮುಟ್ಟೋ ಯೋಗ್ಯತೆ ಇರೋದು..ನೀವು ಸಾಮಾನ್ಯರಾಗೇ ಉಳಿಬೇಕೋ ಅಥವಾ ಸಾಧಕರಾಗಿ ಬದುಕಬೇಕೋ ಅನ್ನೋದು ನಿಮ್ಮ ಶ್ರಮ ಮತ್ತು ಶೃದ್ಧೆ ನಿರ್ಧರಿಸುತ್ತೆ. ಅದು ಉತ್ತರ ಕನ್ನಡ ಜಿಲ್ಲೆಯ  (Uttara Kannada) ಲಕ್ಕೊಳ್ಳಿ ಎಂಬ ಕುಗ್ರಾಮ ಆ ಗ್ರಾಮದಲ್ಲಿ ದಿನಕ್ಕೆ 300-400 ದುಡಿಯೋ ಟ್ರ್ಯಾಕ್ಟರ್ ಡ್ರೈವರ್ ಒಬ್ಬ ಅವನ ಮತ್ತೆ ಜಗತ್ತು ಎಂದರೆ ಅವರ ಹೆಂಡತಿ ಮತ್ತೆ ಮೂರು ಮಕ್ಕಳು‌. ಇದ್ಯಾವ್ದೋ ಫಿಲ್ಮ್ ಕಥೆ ಹೇಳ್ತಿದಾರೆ ಅನ್ಕೋಬೇಡಿ, ರಿಯಲ್ ಕಥೆ.. ಯಶಸ್ವಿ ಹುಡುಗಿಯ ಹಿಂದೆ ಒಬ್ಬ ಗಂಡು ಇದ್ದೇ ಇರ್ತಾನೆ ಮತ್ತವನನ್ನ ಅಪ್ಪ ಅಂತ ಅಂತಾರೆ!  ಅಪ್ಪ ಎಂಬ ಆಲದಮರ
  ಎನ್.ಎಸ್.ಸ್ಯಾಮುವೆಲ್ ಅವರ ಈ ಕುಟುಂಬದಲ್ಲಿ ಮೂರು ಹೆಣ್ಣುಮಕ್ಕಳೇ! ಎಲ್ಲರೂ ಕೂಡ ಹೆಣ್ಣು ಹುಟ್ಟಿದರೆ ಸಾಕೋದು ಕಷ್ಟ ಎಂದು ಪೇಚಾಡುವಾಗ ಇವರು ಮೂರು ಮಕ್ಕಳನ್ನ ಬೇರೆಯವರು ನಾಚುವಂತೆ ಬೆಳೆಸಿ ತೋರಿಸಿದ್ದಾರೆ.

  ಸಿಮಿ ಎಂಬ ಸಾಧಕಿ
  ಎನ್.ಎಸ್.ಸ್ಯಾಮುವೆಲ್ ಮತ್ತು ಸುಜಾ ದಂಪತಿಯ ಮೊದಲನೇ ಮಗಳು ಓದೋದ್ರಲ್ಲಿ ಚುರುಕು, ಮೂರನೇ ಮಗಳು ಕೂಡ ಹಾಗೆಯೇ ಎರಡನೇ ಮಗಳೂ ಕೂಡ ಬುದ್ಧಿವಂತೆ. ಆದರೆ ಅವಳಿಗೆ "ಡೈಸರ್ಟಿಯಾ" ಥರಹದ ಮಾತನಾಡುವ ವೇಳೆ ತೊದಲುವ ವಿಚಿತ್ರ ಸಮಸ್ಯೆ ಇರುವುದರಿಂದ ಅವಳಿಗೆಜನರ ನಡುವೆ ಬೆರೆಯಲಿಕ್ಕೆನೋ ಮುಜುಗರ, ಆಕೆಯೇ ಸಿಮಿ.. ಇವಳೇ ನೊಡಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಹೆಮ್ಮೆಯ ಕರುನಾಡು ಕುವರಿ.  ಅಪ್ಪನೇ ಅಂದಾಜಿಸಿದ್ದ ಮಗಳ ಪ್ರತಿಭೆ
  ಹೌದು, ಅವಳು ಅವತ್ತೊಂದು ದಿನ ಅವಳ ಶಾಲೆಯ ಕ್ರೀಡಾಕೂಟದಲ್ಲಿ ಓಡಿದಳು, ಅವಳು ಓಡುವ ಗತಿ ನೋಡಿ ಮೊದಲೇ ಕ್ರೀಡಾಪಟುವಾಗಿದ್ದ ಅವಳ ತಂದೆ ಅವತ್ತು ಯೋಚಿಸಿದರು. ಇವಳು ಕ್ರೀಡೆಯಲ್ಲಿ ಏನಾದರೂ ಸಾಧಿಸಬಲ್ಲಳು ಎಂದು, ಅವತ್ತಿಂದ ಅವಳಿಗೆ ತರಬೇತಿ ಕೊಡಲು ಶುರು ಮಾಡಿದರು.

  ಆಳ್ವಾಸ್ ಸಂಸ್ಥೆಯ ಪ್ರೋತ್ಸಾಹ
  ಆಗ ಅವರಿಗೆ ಒಂದು ಚಿಮ್ಮು ಹಲಗೆಯಾಗಿದ್ದು ಆಳ್ವಾಸ್ ಸಂಸ್ಥೆ. ಅಲ್ಲಿ ವಿವಿಧ ಕ್ರೀಡಾಕೂಟದಲ್ಲಿ ನಾಲ್ಕು ವಿಭಾಗದಲ್ಲಿ (ಅಥ್ಲೆಟಿಕ್ಸ್ 100,200,400, ರಿಲೇ) ಕರ್ನಾಟಕ ರಾಜ್ಯಮಟ್ಟದ ವಿಜೇತೆಯಾಗುತ್ತಾಳೆ ಸಿಮಿ, ಅದಾದ ಮೇಲೆ ಹಿಂದೆ ನೋಡಿದ್ದೇ ಇಲ್ಲ ಕೇರಳದ ಪ್ರಸಿದ್ಧ ಆಲ್ಫಾನ್ಸೋ ಕಾಲೇಜಿಗೆ ಬಿ.ಎಗಾಗಿ ಸೇರಿಕೊಂಡ ಮೇಲೂ ಅಲ್ಲಿಯೂ ತನ್ನ ಚಿನ್ನದೋಟವನ್ನು ಮುಂದುವರೆಸುತ್ತಾಳೆ.  ಇದನ್ನೂ ಓದಿ: Shivamogga: ಶಿವಮೊಗ್ಗದ ಜೇನು ಗುರು! ಜೇನ್ನೊಣಗಳೇ ಇವರ ಫ್ರೆಂಡ್ಸ್!

  ಹಳ್ಳಿಯಿಂದ ಕಾಮನ್​ವೆಲ್ತ್​ವರೆಗೆ
  ನೋಡನೋಡುತ್ತಿದ್ದಂತೆ ಮುಂಡಗೋಡದ ಒಂದು ಸಣ್ಣ ಹಳ್ಳಿಯಲ್ಲಿ ಓಡಾಡುತ್ತಿದ್ದ ಪಾದಗಳು ಈಗ ವಿದೇಶದಲ್ಲಿ ದಾಪುಗಾಲು ಹಾಕಲು ಶುರು ಮಾಡುತ್ತವೆ, ಸಿಮಿ ಭಾರತದ ಕ್ರೀಡಾ ತೇರನ್ನು ತನ್ನ ಸ್ವಂತ ಶ್ರಮದಿಂದ ಎಳೆಯುತ್ತಾ ಸಾಗುತ್ತಾಳೆ.

  ಇದನ್ನೂ ಓದಿ: Gayatri Temple Tadas: ದಕ್ಷಿಣ ಭಾರತದ ಏಕೈಕ ಗಾಯತ್ರಿ ದೇಗುಲ! ತಡಸದಲ್ಲಿದೆ ತಪೋಭೂಮಿ!

  ರೈಲ್ವೇ ಇಲಾಖೆ ಗೌರವ
  ಇದೀಗ ಸ್ವಲ್ಪ ದಿನಗಳ ಮುಂಚೆ ಸರ್ಕಾರ ಸಿಮಿಯ ಸಾಧನೆ ಗೌರವಿಸಿ ಅವಳಿಗೆ ರೈಲ್ವೆ ಇಲಾಖೆಯಲ್ಲಿ ನೌಕರಿಯನ್ನು ಕೊಡುತ್ತದೆ. ಅದೇ ರೈಲ್ವೆ ಇಲಾಖೆಯ ಸಹಾಯದಿಂದ ಸಿಮಿ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ರಿಲೇ ವಿಭಾಗದಲ್ಲಿ ಭಾರತವನ್ನು ಪ್ರತಿನಿದರು. ಇದೀಗ ಈ ಕಾಲುಗಳು ಕಾಮನ್ವೆಲ್ತ್ ಇಂದ ಒಲಂಪಿಕ್ಸ್ ವರೆಗೂ ಸಾಗಲಿ ಎಂದು ಇಡೀ ನಾಡು ಹರಸುತ್ತಿದೆ.

  ವರದಿ: ಎ.ಬಿ.ನಿಖಿಲ್, ಮುಂಡಗೋಡ
  Published by:guruganesh bhat
  First published: