Uttara Kannada: 'ಏ..ಬಿಡ್ಬೇಡ, ಎತ್ತಿ ಒಗಿಲೇ ಅವನ್ನ!' ಇದು ಪುಟ್ಟ ಮಕ್ಕಳ ಜಟ್ಟಿ ಕಾಳಗ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಅಜಾನುಬಾಹುಗಳಂತಿರೋ ಯುವಕರ ಜಟ್ಟಿಕಾಳಗ ನೋಡಿದ್ದೀವಿ ಅಲ್ವ? ಆದ್ರಿಲ್ಲಿ ಪುಟ್ಟ ಪುಟಾಣಿಗಳು ಕೂಡಾ ಕುಸ್ತಿ ಸ್ಪರ್ಧೆಯಲ್ಲಿ ಸೆಣಸಾಡಿದ್ದಾರೆ. ಒಮ್ಮೆ ನೀವೂ ಕಣ್ಣು ಹಾಯಿಸಿಬಿಡಿ!

  • News18 Kannada
  • 2-MIN READ
  • Last Updated :
  • Uttara Kannada, India
  • Share this:

    ಉತ್ತರ ಕನ್ನಡ: "ಏ ಎತ್ತಿ ಒಗಿಲೇ ಅವನ್ನ! ಬಿಡ್ಬೇಡ ಅವನ್ನ.." ಹೀಗೆ ನೆರೆದವರಿಂದ ಚಿಯರ್ಸ್. ಪುಟ್ಟ ಹುಡುಗರಿಂದ ಕಟ್ಟುಮಸ್ತಾದ ಯುವಕರವರೆಗೆ ನಡೆಯಿತು ನೋಡಿ ಜಂಗೀಕುಸ್ತಿ! ಮಣ್ಣಿನ ಮೈದಾನದಲ್ಲಿ ಧೂಳೆಬ್ಬಿಸುತ್ತಾ ಹೊರಳಾಡಿದರು ಪೈಲ್ವಾನನ್​ಗಳು. ಜಿದ್ದಾಜಿದ್ದಿನ ಕದನದಲ್ಲಿ (Wresting Match) ನಡೆದೇ ಹೋಯ್ತು ಗೆಲುವು ಸೋಲಿನ ಸ್ಪರ್ಧೆ.


    ಇದು ಪುಟ್ಟ ಮಕ್ಕಳ ಕುಸ್ತಿ
    ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಪಾಳಾದಲ್ಲಿ ಮಾರಿಕಾಂಬೆ ಜಾತ್ರೆ ಪ್ರಯುಕ್ತ ನಡೆದ ಬಯಲು ಕುಸ್ತಿಯ ದೃಶ್ಯಗಳು ರೋಮಾಂಚಕ ಅನುಭವ ನೀಡಿದವು. ಮೈದಾನ ಸುತ್ತಕ್ಕೂ ಕಿಕ್ಕಿರಿದು ನೆರೆದ ಜನ ಇಲ್ಲಿ ಪೈಲ್ವಾನ್​ಗಳ ಮೇಲೆ ಬಾಜಿ ಕಟ್ಟಿ ಹುರಿದುಂಬಿಸಿದರು.


    ಇದನ್ನೂ ಓದಿ: Uttara Kannada: ಬಡವರಿಗೆ ಬಂಗಾರ ನೀಡುವ ಗ್ರಾಮ ದೇವತೆ ಈಕೆ! ವರ್ಷಕ್ಕೆ 3 ತಿಂಗಳಷ್ಟೇ ದರ್ಶನ ಭಾಗ್ಯ!


    ಸಣ್ಣ ಮಕ್ಕಳಿಂದ ಹಿಡಿದು ಯುವಕರವರೆಗೂ ಜಟ್ಟಿ ಕಾಳಗವೇ ನಡೆಯಿತು. ಕುಸ್ತಿ ಪಂದ್ಯಾಟ ನೋಡಲು ನೆರೆದ ಜನರು ತಮ್ಮ ಇಷ್ಟದ ಆಟಗಾರರಿಗೆ ಹಣ ನೀಡಿ ಪ್ರೋತ್ಸಾಹಿಸಿದರು. ಒಬ್ಬೊಬ್ಬರ ಬಿಗಿಯಾದ ಹಿಡಿತ ನೋಡುಗರ ಉಸಿರ ಓಟ ಹೆಚ್ಚಿಸಿತ್ತು.




    ಬಾಜಿ ಗೆದ್ದವರೇ ಬಾಸ್
    ಒಟ್ಟಿನಲ್ಲಿ ಪಾಳಾದಲ್ಲಿ ನಡೆದ ಬಯಲು ಕುಸ್ತಿ ಪಂದ್ಯಾಟ ಜನರನ್ನ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತು. ಗೆದ್ದವರ ಪರ ಬಾಜಿ ಕಟ್ಟಿದವರು ಹಿರಿ ಹಿರಿ ಹಿಗ್ಗಿದ್ರೆ, ಗೆದ್ದ ಪೈಲ್ವಾನ್‌ ಗಳು ನಗದು ಬಹುಮಾನ ಪಡೆದುಕೊಂಡು ಸೈ ಎನಿಸಿಕೊಂಡರು.


    ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು