ಕೋಡು ಬಳೆಯಂತಹ ಬಿಸಿ ಬಿಸಿ ಕಜ್ಜಾಯ. ನೆಚ್ಚಿಕೊಳ್ಳೋದಕ್ಕೆ ರುಚಿ ರುಚಿಯಾದ ಕೋಳಿ ಸಾರು. ಈ ಚಳಿ ಚಳಿ ಹವೆಯಲ್ಲಿ (Winter Food) ತಿಳಿ ಸಾರಿಗೆ ಈ ಕಜ್ಜಾಯ ಸಿಕ್ಕರಂತೂ ಕೇಳೋದೆ ಬೇಡ. ಇಷ್ಟೊಂದು ಶುಚಿ ರುಚಿಯಾದ ಈ ಕಜ್ಜಾಯ ಕೋಳಿ ಸಾರು (Chicken Sambar) ಕಾಂಬಿನೇಷನ್ ಮಲೆನಾಡಿನಲ್ಲೂ ತೆರೆ ಮರೆಗೆ ಸರಿಯುತ್ತಿದೆ. ಆದ್ರೆ ಇಲ್ಲೊಂದು ಹೋಟೆಲ್ನ ಕೋಳಿ ಸಾರು (KOli Saaru) ಮತ್ತು ಕಜ್ಜಾಯ ಸಖತ್ ಪ್ರಚಾರ ಗಿಟ್ಟಿಸಿಕೊಳ್ತಿದೆ.
ಹೌದು, ಬಾಯಿ ಚಪ್ಪರಿಸಿದಾಗಲೆಲ್ಲ ಹಳ್ಳಿ ಮಂದಿ ಕೋಳಿ ಸಾರು, ಕಜ್ಜಾಯ ತಿನ್ನೋಕೆ ಹೋಗೋ ಹಾಟ್ ಫೆವರಿಟ್ ಹೊಟೇಲ್ ಯಾವುದಂದ್ರೆ ಅದುವೇ ಮಾವಿನಗುಂಡಿಯ ಹಳ್ಳಿ ಮನೆ. ಸದಾ ಕಾಲ ಕೋಳಿ ಸಾರು, ಬಿಸಿ ಬಿಸಿ ಕಜ್ಜಾಯ ಸವಿಯೋದಕ್ಕೆ ರೆಡಿಯಾಗಿರುತ್ತೆ. ಒಳಗಡೆ ಕಿಚನ್ನಲ್ಲಿ ತಯಾರಾಗೋ ರೆಸಿಪಿ ಘಾಟಿಗೆ ಜನ ಹೊಟೇಲ್ ಒಳಹೊಕ್ಕು ಟೇಬಲ್ ಮುಂದೆ ಹಾಜರಾಗ್ತಾರೆ.
ಇಲ್ಲಿದೆ ನೋಡಿ ರೆಸಿಪಿ!
ಹಾಗಿದ್ರೆ ಇಷ್ಟೊಂದು ಟೇಸ್ಟಿ ಹಾಗೂ ಸ್ಪೈಸಿ ಆಗಿರೋ ಈ ಕೋಳಿ ಸಾರು ಮತ್ತು ಕಜ್ಜಾಯ ಮಾಡೋ ಬಗೆ ಹೇಗೆ ಅಂತಾ ನ್ಯೂಸ್ 18 ಕನ್ನಡ ಡಿಜಿಟಲ್ ವೀಕ್ಷಕರಿಗಾಗಿ ಹಳ್ಳಿಮನೆ ಹೊಟೇಲ್ನ ವಸಂತ್ ನಾಯ್ಕ್ ಅವರ ಬಾಣಸಿಗರ ತಂಡ ನಮ್ಮ ಮುಂದಿಟ್ಟಿದೆ.
ಮೊದಲು ಇಷ್ಟು ಮಾಡಿ ಸಾಕು
ಮೊದಲು ಬಿಸಿ ಬಿಸಿ ಕಜ್ಜಾಯ ಮಾಡೋದು ಹೇಗೆ ಅನ್ನೋದನ್ನ ತಿಳಿದುಕೊಳ್ಳೋಣ. ಮೊದಲಿಗೆ ಉಗುರು ಬೆಚ್ಚಗೆ ಕಾದ ನೀರಿಗೆ ಉಪ್ಪು, ನೀರುಳ್ಳಿ ಹಾಕಬೇಕು. ನಂತರ ಅದಕ್ಕೆ ಅಕ್ಕಿ ಹಿಟ್ಟನ್ನು ಹಾಕಿ ಹೆಚ್ಚಿನ ಉರಿಯಲ್ಲಿ ರುಬ್ಬಿಕೊಳ್ಳಬೇಕು. ನಂತರ ಮಣೆಯ ಮೇಲೆ ಉದ್ದಕ್ಕೆ ಹೊಸೆದು ಅದು ತಣಿಯುವ ಮುನ್ನವೇ ಗೋಲ ರೂಪದಲ್ಲಿ, ಇಲ್ಲಿ ನೀವು ನೋಡುತ್ತಿರುವ ಹಾಗೆ ಕೋಡುಬಳೆ ಆಕಾರದ ಆಕೃತಿ ಮಾಡಿ ನಂತರ ಅದನ್ನು ಎಣ್ಣೆಯಲ್ಲಿ ಚೂರು ಕೆಂದಾಗುವವರೆಗೆ ಕರಿದು ತೆಗೆಯಬೇಕು. ಆಗ್ಲೆ ತಯಾರಾಗುತ್ತೇ ನೋಡಿ ಬಿಸಿ ಬಿಸಿ ಕಜ್ಜಾಯ.
ಇದನ್ನೂ ಓದಿ: ಸಾರು ಮಾಡೋದು ಹೀಗೆ
ಇನ್ನು ವೆರಿ ನೆಕ್ಸ್ಟ್ ಅದಕ್ಕೆ ನೆಚ್ಚಿಕೊಳ್ಳೋಕೆ ಸೂಟ್ ಆಗೋ ಕೋಳಿ ಸಾರಿನತ್ತ ಬರೋಣ. ಇಲ್ಲಿ ಮೊದಲಿಗೆ ಕೋಳಿ ಮಾಂಸಕ್ಕೆ ಎಣ್ಣೆ ಹಾಗೂ ಅರಿಶಿನ ಬೆರಸಿಟ್ಟಿರಬೇಕು. ಅದನ್ನು ಒಗ್ಗರಣೆ ಮಾಡಿಕೊಂಡು ಅದಕ್ಕೆ ಶುಂಠಿ ಪೇಸ್ಟನ್ನು ಸೇರಿಸಿ ಚಿಕನ್ ಪೀಸ್ಗಳನ್ನೆಲ್ಲ ಬೇಯಿಸಿಕೊಳ್ಳಬೇಕು. ನಂತರದಲ್ಲಿ ಅದನ್ನ ಚಿಕನ್ ಸುಕ್ಕಾ ರೀತಿಯಲ್ಲಿ ಹದಕ್ಕೆ ಬರುತ್ತದೆ. ಅದಕ್ಕೆ ಈ ಮುಂಚೆ ತಯಾರಿಸಿದ ಕೋಳಿ ಸಾರಿನ ಮಸಾಲೆಯನ್ನು ಹಾಕಿ ಮತ್ತೊಮ್ಮೆ ಕರಿದರೆ ಈ ಡಿಶ್ ರೆಡಿ.
ಇದನ್ನೂ ಓದಿ: Positive Story: ಜಗತ್ತಿನಲ್ಲಿ ಶಾಂತಿ ನೆಲೆಸೋಕೆ 8ನೇ ಕ್ಲಾಸ್ ಬಾಲಕಿಯ ಯಕ್ಷ ಪ್ರಯತ್ನ!
ಮಾವಿನಗುಂಡಿಗೆ ಹೋದ್ರೆ ಈ ಹಳ್ಳಿ ಮನೆ ಮರೀಬೇಡಿ. ಇನ್ನೇನಾದ್ರೂ ಮನೇಲಿ ಇದ್ರೆ ಕೋಳಿ ಸಾರು, ಕಜ್ಜಾಯವನ್ನ ನೀವೇ ರೆಡಿ ಮಾಡ್ಕೊಂಡು ಚಳಿಗಾಲದಲ್ಲಿ ಡಿಫರೆಂಟ್ ರುಚಿ ಪಡೆಯಬಹುದು.
ಇದನ್ನೂ ಓದಿ: Scuba Diving: ಸ್ಕೂಬಾ ಡೈವಿಂಗ್ ಅನುಭವ ಹೀಗಿರುತ್ತೆ! ನೇತ್ರಾಣಿ ದ್ವೀಪದ ಗಮ್ಮತ್ತು ನೋಡಿ
ವಿಳಾಸ: ಹೋಟೆಲ್ ಹಳ್ಳಿಮನೆ ಮಾವಿನಗುಂಡಿ ಸರ್ಕಲ್, ಮಾವಿನಗುಂಡಿ
ಫೋನ್ ನಂಬರ್:+91 84314 71979
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ