ಶಿವಮೊಗ್ಗ: ಬೆಟ್ಟಕ್ಕೆ ಚಾಚಿಕೊಂಡಂತಿರುವ ಮೆಟ್ಟಿಲುಗಳ ಸಾಲು. ಬೆಟ್ಟದ ಮೇಲ್ಗಡೆ ಸುಂದರ ವಿಹಂಗಮ ನೋಟ. ಮೇಲೆ ರೇಣುಕಾ ದೇವಿಯ (Renuka Devi Temple Chandragutti) ದರ್ಶನ. ಪುಟ್ಟದಾದ ಬಂಡೆಗಳ ಮೇಲೆ ನಡೆಯುವುದೇ ಚೆಂದ. ಯೆಸ್, ಚಾರಣಕ್ಕೆ ಹೇಳಿಟ್ಟ ಮುದವೆನಿಸೋ (Chandragutti) ಈ ಜಾಗವೇ ಶಿವಮೊಗ್ಗದ (Shivamogga News) ಚಂದ್ರಗುತ್ತಿ.
ನೈಸರ್ಗಿಕ ಗುಹಾಲಯ ದೇವಾಲಯ
ಸೊರಬ ತಾಲೂಕಿನ ಚಂದ್ರಗುತ್ತಿ ಅಂದ್ರೇನೆ ಚಾರಣಿಗರ ಸ್ವರ್ಗ ಅನ್ನೋ ಪ್ರಸಿದ್ಧಿ ಪಡೆದಿದೆ. ಸುಮಾರು 50 ಅಡಿ ಎತ್ತರದ ಬೆಟ್ಟ ಬಂಡೆಗಳಿಂದಲೇ ನಿರ್ಮಾಣವಾಗಿದ್ದು ಕೆಳಗಡೆ ನೈಸರ್ಗಿಕ ಗುಹಾಂತರ ದೇವಾಲಯವಿದೆ. ಅದರ ಮೇಲೆ ದೇವರ ಕಳಸವಿದೆ. ಆ ಕಳಸದ ಮೇಲಿನ ಬೆಟ್ಟದ ಮೇಲೆ ಏರಬೇಕೆಂದರೆ ಒಂದು ಕಿಲೋಮೀಟರ್ ಬಂಡೆಗಳನ್ನು ಏರುತ್ತಾ ಸಾಗಬೇಕು.
ಬಂಡೆಯಲ್ಲಿ ಕುಳಿಗಳ ಸೊಬಗು
ನೆಲಮಟ್ಟದಿಂದ ಸುಮಾರು ಸಾವಿರಾರು ಮೀಟರ್ ಎತ್ತರದ ಈ ಪ್ರದೇಶಕ್ಕೆ ರೇಣುಕಾ ದೇವಾಲಯದ ತನಕ ಮೆಟ್ಟಿಲಿವೆ.
ಇದನ್ನೂ ಓದಿ: Yakshagana In America: ಅಮೆರಿಕಾ ನೆಲದಲ್ಲಿ ಯಕ್ಷ ಕಲೆ ಉಣಬಡಿಸಿದ ಶಿರಸಿ ಮಹಿಳೆ!
ನಂತರ ಕಿರಿದಾದ ಬಂಡೆಗಳನ್ನು ಏರಿ ಬೆಟ್ಟ ಹತ್ತಬೇಕು. ಅಲ್ಲಿ ವಿಸ್ಮಯವೆಂಬಂತೆ ಯಾವುದೇ ಆಧಾರವಿಲ್ಲದೇ ನಿಂತ ಬಂಡೆಗಳನ್ನು ಕಾಣಬಹುದು. ಕನಿಷ್ಠ ನಾಲ್ಕು ಕಡೆ ಈ ರೀತಿ ಬಂಡೆಗಳಿವೆ. ಬೆಟ್ಟ ಇಳಿಯುತ್ತಾ ಸಾಗಿದಂತೆ ಕುಳಿಗಳ ಬಂಡೆ ಇದೆ ಸೋಜಿಗವೆನಿಸುತ್ತದೆ.
ಇದನ್ನೂ ಓದಿ: Sirsi News: ಬತ್ತಿ ಹೋಗಿದ್ದ ದೇವರ ಕಲ್ಯಾಣಿಗೆ ಮರುಜೀವ ನೀಡಿದ ಯುವ ಪಡೆ!
ಚಾರಣಕ್ಕೆ ಬೆಸ್ಟ್!
ಮಳೆಗಾಲದಲ್ಲಿ ಈ ನೈಸರ್ಗಿಕ ಕುಳಿಗಳಲ್ಲಿ ನೀರು ತುಂಬಿಕೊಂಡಿರುತ್ತದೆ ಆಗ ಇನ್ನೂ ಮನಮೋಹಕವಾಗಿ ಕಣ್ಮನ ಸೆಳೆಯುತ್ತೆ. ಹೀಗೆ ಚಂದ್ರಗುತ್ತಿಯ ಚಾರಣ ತಾಣ ನಿಜಕ್ಕೂ ಅತ್ಯಮೋಘವೆನಿಸುತ್ತೆ. ಇಲ್ಲಿಗೆ ಸುತ್ತಾಡುತ್ತಾ ಪ್ರಕೃತಿಯ ವಿಸ್ಮಯವನ್ನು ಕಣ್ತುಂಬಿಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ