• Home
  • »
  • News
  • »
  • uttara-kannada
  • »
  • Uttara Kannada: ಕೇರಂ ಹಬ್ ಆಗ್ತಿದೆ ಶಿರಸಿ! ಕಾರಣ ಮಾತ್ರ ಇವರೇ

Uttara Kannada: ಕೇರಂ ಹಬ್ ಆಗ್ತಿದೆ ಶಿರಸಿ! ಕಾರಣ ಮಾತ್ರ ಇವರೇ

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಈ ಇಡೀ ಕುಟುಂಬ ಕೇರಂನಲ್ಲಿ ಸ್ಟೇಟ್ ಚಾಂಪಿಯನ್.  ಕೇರಂ ಚಂದ್ರು ಹಾಗೂ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಕೂಡ ಕೇರಂನಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದವರು.

  • News18 Kannada
  • Last Updated :
  • Uttara Kannada, India
  • Share this:

    ಶಿರಸಿಗೆ ಹೋಗಿ ನಿಂತು "ಇಲ್ಲಿ ಚಂದ್ರು ಭಟ್ ಎಲ್ಲಿರ್ತಾರೆ?" ಅಂತ ಕೇಳಿದ್ರೆ ಬಹುಶಃ ಜನ ತಲೆ ಅಲ್ಲಾಡಿಸಿ ಗೊತ್ತಿಲ್ಲ ಎನ್ನಬಹುದು. ಆದರೆ ಕೇರಂ ಚಂದ್ರು  (Carrom  Chandru In Sirsi) ಎಲ್ಲಿರ್ತಾರೆ ಅಂತ ಕೇಳಿ ಸಾಕು, ಸೀದಾ ದೇವಿಕೆರೆಯ ಸ್ಫೂರ್ತಿ ಕೇರಂ ಅಸೋಸಿಯೇಶನ್ ದಾರಿ ತೋರಿಸುತ್ತಾರೆ. ಯಾಕೆಂದರೆ ಉತ್ತರ ಕನ್ನಡ ಜಿಲ್ಲೆಯ (Uttara Kannada Carrom Training) ಕೇರಂಪಟುಗಳಿಗೆ ಬೆಳಕಿನ ದಾರಿ ತೋರಿಸುತ್ತಿರುವುದು ಇದೇ ಕೇರಂ ಚಂದ್ರು ಹಾಗೂ ಅವರ ಪತ್ನಿ. ವಿಶೇಷ ಏನು ಗೊತ್ತಾ? ಈ ಇಡೀ ಕುಟುಂಬ ಕೇರಂನಲ್ಲಿ ಸ್ಟೇಟ್ ಚಾಂಪಿಯನ್.  ಕೇರಂ ಚಂದ್ರು ಹಾಗೂ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಕೂಡ ಕೇರಂನಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದವರು.


    ಇದೇನು ಅವರಿಗೆ ಸುಲಭದ ದಾರಿಯಾಗಿರಲಿಲ್ಲ. ಕೇರಂನಲ್ಲಿ ಇಷ್ಟು ದೊಡ್ಡ ಮಟ್ಟದ ಸಾಧನೆ ಮಾಡಲು ಅವರ 40 ವರ್ಷದ ಪರಿಶ್ರಮವಿದೆ. ಕಾಲೇಜಿನಲ್ಲಿ ಮನರಂಜನೆಗೆ ಆಡಲು ಶುರು ಮಾಡಿ ಸುತ್ತಮುತ್ತಲಿನ ಜಿಲ್ಲೆಗಳನ್ನು ಗೆದ್ದರು. ನಂತರ ರಾಜ್ಯಮಟ್ಟದಲ್ಲಿ ಗೆದ್ದರು, ರಾಷ್ಟ್ರಮಟ್ಟದ ಪಂದ್ಯಾವಳಿಗಳಲ್ಲೂ ಮಿಂಚಿ ಈಗ ಭಾರತದ ಕೇರಂ ಅಂಪೈರ್​ಗಳಲ್ಲಿ ಇವರೂ ಒಬ್ಬರಾಗಿ ಹೊರಹೊಮ್ಮಿದ್ದಾರೆ‌. ಅಂತಾರಾಷ್ಟ್ರೀಯ ಪಂದ್ಯಗಳನ್ನು ಜಡ್ಜ್ ಮಾಡಿದ್ದಾರೆ.


    ಇದನ್ನೂ ಓದಿ:Uttara Kannada: ಮಹಿಳೆಯರಿಂದ ರುದ್ರ ಪಠಣ! ಮಂತ್ರಘೋಷದ ಝೇಂಕಾರ


    ಸ್ಫೂರ್ತಿ ಕೇರಂ ಅಸೋಸಿಯೇಶನ್ ಅಲ್ಲಿ ಯಾವುದೇ ವಯಸ್ಸಿನ ಭೇದವೇ ಇಲ್ಲ ಚಿಕ್ಕ ಮಕ್ಕಳಿಂದ ಹಿಡಿದು ರಿಟೈರ್ಡ್ ಇದುವರೆಗೂ ಕೂಡ ಇವರ ಸ್ಟೂಡೆಂಟ್​ಗಳು ಒಬ್ಬ ಗಾರೆ ಕೆಲಸದ ಹುಡುಗನನ್ನು ರಾಷ್ಟ್ರಮಟ್ಟದ ಕೇರಂ ಆಟಗಾರನನ್ನಾಗಿ ಕೇರಂ ಚಂದ್ರು ಅವರು ಮಾಡಿದ್ದಾರೆ ಹೀಗೆ ನಿರಂತರವಾಗಿರುವ ಅವರ ಕ್ರೀಡಾ ಸೇವೆಯಲ್ಲಿ ಅವರ ಎಂಟು ವಿದ್ಯಾರ್ಥಿಗಳು ರಾಜ್ಯ ಮಟ್ಟ ಮೂರು ವಿದ್ಯಾರ್ಥಿ ರಾಷ್ಟ್ರಮಟ್ಟದ ಕೇರಂಪಟುಗಳು.


    ಇದನ್ನೂ ಓದಿ: Kamakshi Temple: ಕುದಿಯುವ ಎಣ್ಣೆಯಿಂದ ವಡೆ ತೆಗೆಯೋ ಉತ್ತರ ಕನ್ನಡದ ಭಕ್ತರು!


    ಒಂದೇ ಸ್ಟ್ರೋಕ್ ನಲ್ಲಿ ಐದಾರು ಕಾಯಿನ್ ಒಳಗೆ ಹಾಕುವ ಇವರ ಆಟ ಗಮನಿಸಿದಾಗ ಎಲ್ಲರ ಹುಬ್ಬು ಮೇಲೇರುವುದು ಸಹಜ ಇವರ ಬಳಿ ನೀವು ತರಬೇತಿ ಪಡೆಯಬೇಕೆಂದರೆ 94837 77600ಗೆ ಕರೆಮಾಡಬಹುದು ಅಂತ ಕೇರಂ ಚಂದ್ರು ತಿಳಿಸಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: