Skill Training: ಉದ್ಯೋಗ ತರಬೇತಿಯ ಬಂಪರ್ ಆಫರ್! ಈ ಚಾನ್ಸ್ ಮಿಸ್ ಮಾಡ್ಬೇಡಿ

ಈ ಎಲ್ಲ ತರಬೇತಿಯನ್ನೂ ಸರಿಯಾಗಿ ಬಳಸಿಕೊಂಡು ಕೌಶಲ ಭರಿತರಾಗಿ ಉತ್ತಮ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕಾರವಾರ: ಡಿಗ್ರೀ ಮುಗೀತು ಕೆಲ್ಸ ಇಲ್ಲ, ಎಸ್.ಎಸ್.ಎಲ್.ಸಿ, ಪಿಯುಸಿ ಮುಗಿತು ಮಾಡೋದೇನು ಗೊತ್ತಿಲ್ಲ. ಜೊತೆಗೆ ಯಾವ್ದೇ ಸ್ಕಿಲ್ಲೂ ಇಲ್ಲ ಅಂದ್ರೆ ಅಲ್ಲಿಗೆ ಮನೆಯಲ್ಲಿ ಎಷ್ಟೋ ದಿನ ಕುತ್ಕೊಂಡು ಇದ್ದ ಬಿದ್ದ ಎಲ್ಲಾ ಕಂಪೆನಿಗೆ ಬಯೋಡೇಟಾ ಮೇಲ್ ಮಾಡ್ಬೇಕಾಗುತ್ತೆ, ಅದಕ್ಕಿಂತ ಮೇಲಾಗಿ ಮನೆಯವರ ಟಾರ್ಚರ್ ಬೇರೆ! ಆದ್ರೆ ಉತ್ತರ ಕನ್ನಡದ (Uttara Kannada) ಯುವಕರು ಈ ಬಗ್ಗೆ ಯೋಚ್ನೆ ಮಾಡ್ಬೇಕಾಗಿಲ್ಲ ಯಾಕಂದ್ರೆ ಒಂದು ಸೂಪರ್ ಸುವರ್ಣಾವಕಾಶವನ್ನು ಸರ್ಕಾರ ಹಾಗೂ ಖಾಸಗಿ ಸಂಸ್ಥೆ ಎರಡೂ ಮಾಡುತ್ತಿದೆ. ಹಾಗಂತ ಉದ್ಯೋಗ ಕೊಡ್ತಿಲ್ಲ, ಯಾವ್ದೇ ಬಿಲ್ ಕೊಡದೇ ಸ್ಕಿಲ್  (Skill Development)ಕೊಡ್ತಿದಾರೆ. ಹಾಗಾದ್ರೆ ಎಲ್ಲಿ ಸಿಗುತ್ತೆ ಈ ತರಬೇತಿ? (Skills For Jobs) ಎಲ್ಲ ವಿವರ ಇಲ್ಲಿದೆ ನೋಡಿ

    ಅದು ಯಾವ್ ಯಾವ್ದು ಯಾರ್ಯಾರ್ದು ಯಾರೆಲ್ಲ ಈ ಯೋಜನೆಗೆ ಅರ್ಹರು ಅನ್ನೋ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ ಓದಿ.



























    ಸಂಸ್ಥೆಯ ಹೆಸರುದೇಶಪಾಂಡೆ ರುಡ್ ಸೆಟ್
    ತರಬೇತಿಯ ವಿಷಯಗಳುತಾಂತ್ರಿಕ ದುರಸ್ತಿ, ಕೃಷಿ ತರಬೇತಿ ಮತ್ತು ತರಕಾರಿ,ತೋಟಗಾರಿಕೆ/ನರ್ಸರಿ ತರಬೇತಿ
    ಅವಧಿತಾಂತ್ರಿಕ ದುರಸ್ತಿ 30 ದಿನ, ಕೃಷಿ ತರಬೇತಿ ಮತ್ತು ತರಕಾರಿ,ತೋಟಗಾರಿಕೆ/ನರ್ಸರಿ ತರಬೇತಿ 10 ದಿನ
    ವಯೋಮಿತಿ18-45 ವರ್ಷ
    ನೋಂದಣಿಗೆ ಕೊನೆಯ ದಿನಾಂಕಸೆಪ್ಟೆಂಬರ್ 5
    ಸಂಪರ್ಕ ಸಂಖ್ಯೆ9482188780 ಅಥವಾ 9483485489 ಅಥವಾ 8197022501

    ದೇಶಪಾಂಡೆ ರುಡ್ ಸೆಟ್​ನಲ್ಲಿ ವಿಧವಿಧದ ತರಬೇತಿ
    1. ಕೆನರಾ ದೇಶಪಾಂಡೆ ರುಡ್ ಸೆಟ್ ನವರು ಹಳಿಯಾಳದಲ್ಲಿ 30 ದಿನಗಳ ಕಾಲ ತಾಂತ್ರಿಕ ದುರಸ್ತಿ ತರಬೇತಿಯನ್ನು ಹಮ್ಮಿಕೊಂಡಿದೆ.
    2. ಹತ್ತು ದಿನಗಳ ಕೃಷಿ ತರಬೇತಿ
    3. ತರಕಾರಿ,ತೋಟಗಾರಿಕೆ/ನರ್ಸರಿ ತರಬೇತಿ

    ಈ ತರಬೇತಿಗಳು ಸಂಪೂರ್ಣ ಉಚಿತವಾಗಿದ್ದು, ಊಟ-ವಸತಿಯನ್ನೂ ಉಚಿತವಾಗಿ ಕೊಡಲಾಗುತ್ತದೆ.  18-45 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ದಿನಾಂಕ ಸೆಪ್ಟೆಂಬರ್-5 ರ ಒಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
    ನೋಂದಾಯಿಸಿಕೊಳ್ಳಲು 9482188780 ಅಥವಾ 9483485489 ಅಥವಾ 8197022501 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ಕೆನರಾ ದೇಶಪಾಂಡೆ ರುಡ್ ಸೆಟ್ ‌ಸಂಸ್ಥೆ ತಿಳಿಸಿದೆ.

    ಇದನ್ನೂ ಓದಿ: Dodda Ganapathi Temple: ಮದುವೆ, ಕಳ್ಳತನ ಎಲ್ಲ ಸಮಸ್ಯೆಗೂ ಪರಿಹಾರ! ಶಿರಸಿ ದೊಡ್ಡ ಗಣಪತಿಯ ಮಹಿಮೆಯೂ ದೊಡ್ಡದು

    ಪಶು ಸಂಗೋಪನಾ ಇಲಾಖೆಯಿಂದಲೂ ಈ ತರಬೇತಿ ಪಡೆಯಬಹುದು
    ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಧಾರವಾಡದ ಪಶುಪಾಲನಾ ಹಾಗೂ ಪಶು ವೈದ್ಯಕೀಯ ಕೇಂದ್ರದಿಂದ ಎರಡು ದಿನಗಳ ಹೈನುಗಾರಿಕಾ ತರಬೇತಿಯನ್ನು ಹಮ್ಮಿಕೊಂಡಿದೆ. ಆಸಕ್ತರು ತಮ್ಮ ಹೆಸರನ್ನು ಎಸ್.ಎಂ‌‌.ಎಸ್ ಮೂಲಕ ನೋಂದಾಯಿಸಿಕೊಳ್ಳಬಹುದು ಎಂದು ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಹೆಚ್ಚಿನ ಮಾಹಿತಿಗಾಗಿ 9591024429 ಗೆ ಕರೆ ಮಾಡಬೇಕಾಗಿ ಪಶು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: Uttara Kannada Chakli Kambala: ಜನರ ಒಗ್ಗಟ್ಟು ಬೆಸೆಯುತ್ತೆ ಚಕ್ಕುಲಿ! ಇದು ಉತ್ತರ ಕನ್ನಡದ ಚಕ್ಕುಲಿ ಕಂಬಳದ ಸ್ಪೆಷಲ್

    ಒಟ್ಟಾರೆ ಕೆಲಸಕ್ಕಿಂತ ಕೆಲಸ ಕಲಿಯುವ ಅವಕಾಶ ಉತ್ತರ ಕನ್ನಡ ಜಿಲ್ಲೆಯ ಉದ್ಯೋಗ ಹುಡುಕುತ್ತಿರುವ ಯುವಕ ಯುವತಿಯರಿಗೆ ದೊರೆತಿದೆ. ಈ ಎಲ್ಲ ತರಬೇತಿಯನ್ನೂ ಸರಿಯಾಗಿ ಬಳಸಿಕೊಂಡು ಕೌಶಲ ಭರಿತರಾಗಿ ಉತ್ತಮ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ.
    Published by:guruganesh bhat
    First published: