ಉತ್ತರ ಕನ್ನಡ: ಬಂಡೆ ಕಲ್ಲಿನ ಮಧ್ಯೆ ಧುಮ್ಮಿಕ್ಕೋ ಜಲಪಾತದ ಸೊಬಗು. ಹಾಲ್ನೊರೆಯಾಗಿ ಚಿಮ್ಮುತ್ತಾ ಕಣ್ಮನ ಸೆಳೆಯೋ ಜಲರಾಶಿಯ (Waterfalls Travel Plan) ಕಣ್ಣೋಟ. ಅಘನಾಶಿನಿ ಎಂಬ ಪಶ್ಚಿಮ ಘಟ್ಟದ ಸುಂದರಿ ಹುಟ್ಟುಹಾಕಿದ ಅದ್ಭುತವೇ ಈ ಫಾಲ್ಸ್. ಹಾಗಿದ್ರೆ ಯಾವುದಿದು ಜಲಪಾತ (Burude Falls) ಅಂತೀರ? ಅದೆಲ್ಲಕ್ಕೂ ಉತ್ತರ ಇಲ್ಲಿದೆ ನೋಡಿ.
ಯೆಸ್, ಅಘನಾಶಿನಿ ನದಿ ಉತ್ತರ ಕನ್ನಡದಲ್ಲಿ ಹಲವು ಬೆರಗುಗಳನ್ನೇ ಸೃಷ್ಟಿಸಿದೆ. ಪಶ್ಚಿಮ ಘಟ್ಟದ ಸುಂದರಿ, ಪವಿತ್ರ ಜಲಸಿರಿಯಾಗಿರುವ ಅಘನಾಶಿನಿ ಸಿದ್ದಾಪುರದ ಆಳ ಕಣಿವೆಯಲ್ಲಿ ಈ ಅದ್ಭುತ ಜಲಪಾತವನ್ನು ಸೃಷ್ಟಿಸಿದೆ. ಇದುವೇ ಬುರುಡೆ ಫಾಲ್ಸ್.
ವರ್ಷವಿಡೀ ಸುಮ್ಮನಿದ್ದು ಮಳೆಗಾಲದಲ್ಲಿ ಭೋರ್ಗರೆವ ಸುಂದರಿ!
ಬಂಡೆ ಕಲ್ಲುಗಳ ಮಧ್ಯೆ ಧುಮ್ಮುಕ್ಕಿ ಹರಿಯೋ ಈ ಫಾಲ್ಸ್ ವರ್ಷವಿಡೀ ಕಣ್ಮನ ಸೆಳೆಯುತ್ತೆ. ಬೇಸಿಗೆಯಲ್ಲಿ ಶಾಂತವಾಗಿ ಕಾಣೋ ಈ ಬುರುಡೆ ಜಲಪಾತ, ಮಳೆ ಬೀಳ್ತಿದ್ದಂತೆ ತನ್ನ ಉಗ್ರ ರೂಪ ತಾಳುತ್ತೆ. ಆದ್ರೆ ಸಾಮಾನ್ಯರಿಗೆ ಈ ಫಾಲ್ಸ್ ತಲುಪೋದು ಕಷ್ಟ.
ಸಾಹಸ ಪ್ರಿಯರಿಗೆ ಸಖತ್ ಪ್ಲೇಸ್
ಹಾಗಾಗಿ ಮಕ್ಕಳು, ಮಹಿಳೆಯರು, ಹಿರಿಯರು ಯಾರೇ ಇದ್ರು ದೂರದಿಂದಲೇ ವೀವ್ ಪಾಯಿಂಟ್ನಲ್ಲಿ ನಿಂತು ನೋಡ್ತಾ ಎಂಜಾಯ್ ಮಾಡಬಹುದಷ್ಟೇ. ಇನ್ನು ತುಸು ಗಟ್ಟಿಯಾಗಿದ್ದವರು, ಸಾಹಸ ಪ್ರಿಯರಷ್ಟೇ ಈ ಫಾಲ್ಸ್ ತಲುಪಿ ಸಂಭ್ರಮಿಸಬಹುದು.
ಎಲ್ಲಿದೆ ಈ ಫಾಲ್ಸ್?
ಈ ಬುರುಡೆ ಜಲಪಾತವಿರುವುದು ಸಿದ್ದಾಪುರ ಹಾಗೂ ಕುಮಟಾ ರಸ್ತೆಯ ಮಧ್ಯದಲ್ಲಿ. ಕ್ಯಾದಗಿ ಪಂಚಾಯತ್ನ ಅಳ್ಳಿಮಕ್ಕಿಯಿಂದ ಒಳಗೆ 3 ಕಿಲೋಮೀಟರ್ ಮಾರ್ಗವಾಗಿ ಸಾಗಿದರೆ, ಅಲ್ಲಲ್ಲಿ ಒಂಟಿ ಮನೆಗಳು, ಅಂಗಡಿಗಳು, ವಿಶಾಲ ಮರಗಳ ಉಬ್ಬುತಬ್ಬಿನ ರಸ್ತೆ.
ಇದನ್ನೂ ಓದಿ: Business Idea: ಬೇಸಿಗೆ ರಜೆ ಬ್ಯುಸಿನೆಸ್! ಮಾವಿನ ಹಣ್ಣು ಮಾರಿ ದಿನಕ್ಕೆ 5 ಸಾವಿರ ದುಡಿಯುವ ಮಕ್ಕಳು
ಆ ಗಾಢ ಶಾಂತ ಪರಿಸರದಲ್ಲಿ ಇನ್ನೂ ನಾಲ್ಕು ಕಿಲೋಮೀಟರ್ ಎಂದರೆ ಅಳ್ಳಿಮಕ್ಕಿಯಿಂದ ಸರಿಯಾಗಿ ಇಳಿಮನೆ ಮಾರ್ಗವಾಗಿ 7 ಕಿಲೋಮೀಟರ್ ಕ್ರಮಿಸಿದರೆ ಈ ಜಲಪಾತ ಸಿಗುತ್ತದೆ. ಸುಮಾರು 50 ಅಡಿ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತವು 2 ಭಾಗವಾಗಿ ಹರಿಯುತ್ತದೆ. ಮುಂದೆ ಇದೇ ಜಲಪಾತದ ನೀರು ಕುಮಟಾ ತಲುಪಿ ಸಮುದ್ರ ಸೇರುತ್ತದೆ.
ಸುಂದರ ನೋಟ
ಈ ಕಣಿವೆಗೆ 351 ಮೆಟ್ಟಿಲುಗಳಿದ್ದು, ಅದನ್ನ ಇಳಿದು ಈ ಕಣಿವೆ ಪ್ರವೇಶಿಸಬಹುದು. ಒಟ್ಟಾರೆ ಮೂರು ಕಿಲೋಮೀಟರ್ನಷ್ಟು ಆಳದ ಕಣಿವೆ ಇಳಿದರೆ ಜಲಪಾತದ ಸೊಬಗನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು.
ಇದನ್ನೂ ಓದಿ: Leaf Helmet: ನೇರಳೆ ಮರದ ಎಲೆಯಿಂದ ಹೆಲ್ಮೆಟ್! ಇದರಿಂದ ತಲೆ ಆಗುತ್ತೆ ಕೂಲ್
ಈ ವಿಷಯವನ್ನು ಮರೆಯಬೇಡಿ
ಇಲ್ಲಿ ಸುತ್ತಮುತ್ತಲು ಕಾಡುಗಳೇ ಇದ್ದು ಯಾವುದೇ ಹೋಟೆಲುಗಳು ಸಿಗದು. ಹೀಗಾಗಿ ಇಲ್ಲಿಗೆ ಹೋಗಬೇಕಿದ್ರೆ ಪೂರ್ತಿ ಸಿದ್ಧತೆ ಮಾಡಿಕೊಂಡೇ ತೆರಳಬೇಕಾಗುತ್ತದೆ. ಹಾಗೂ ಬೆಳಗ್ಗೆ 9 ಗಂಟೆಯಿಂದ 6 ಗಂಟೆಯರಿಗೆ ಮಾತ್ರ ಇಲ್ಲಿಗೆ ಪ್ರವೇಶ ನೀಡಲಾಗುತ್ತೆ. ಒಟ್ಟಿನಲ್ಲಿ ಬುರುಡೆ ಜಲಪಾತ ಅನ್ನೋದು ಸಾಹಸಪ್ರಿಯ ಯುವಕ, ಯುವತಿಯರಿಗಂತೂ ಖಂಡಿತಾ ಮಜಾ ನೀಡೋ ಫಾಲ್ಸ್ ಅನ್ನೋದನ್ನ ಮಾತ್ರ ಬಿಡಿಸಿ ಹೇಳಬೇಕಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ