• Home
  • »
  • News
  • »
  • uttara-kannada
  • »
  • Uttara Kannada: ಜಬರ್ದಸ್ತ್ ಹೋರಿ ಬೆದರಿಸೋ ಸ್ಪರ್ಧೆ! ನೋಡೋರ ಎದೆಯಲ್ಲೂ ಗಢಗಢ!

Uttara Kannada: ಜಬರ್ದಸ್ತ್ ಹೋರಿ ಬೆದರಿಸೋ ಸ್ಪರ್ಧೆ! ನೋಡೋರ ಎದೆಯಲ್ಲೂ ಗಢಗಢ!

ಮೈ ಝುಮ್ ಅನ್ನುತ್ತೆ!

"ಮೈ ಝುಮ್ ಅನ್ನುತ್ತೆ!"

ಸಿದ್ದಾಪುರದಲ್ಲಿ ಬರೀ ಆಕಳುಗಳನ್ನ ಓಡಿಸಿದರೆ ಮುಂಡಗೋಡಿನಲ್ಲಿ ಹೋರಿಗಳನ್ನೇ ಫೀಲ್ಡಿಗಿಳಿಸಲಾಗುತ್ತದೆ. ಹೀಗೆ ಹೋರಿಗಳು ಓಡ್ತಿದ್ರೆ ಅದನ್ನ ಹಿಡಿಯೋಕೆ ಮುಂದಾಗೋ ಈ ಯುವಕರದ್ದು ನಿಜಕ್ಕೂ ಜೀವ ಬಾಯಿಗೆ ತರಿಸೋ ಆಟ.

  • News18 Kannada
  • Last Updated :
  • Uttara Kannada, India
  • Share this:

    ಕಾರವಾರ: ತೋಳ್ಬಲ ಪ್ರದರ್ಶಿಸುತ್ತಾ ನಿಂತ ಯುವಕರು, ಅವರ ಎದುರು ಮುನ್ನುಗ್ಗಿ ಬರ್ತಿರೋ ಹೋರಿಗಳು. ಅಬ್ಬಬ್ಬಾ! ಇದೆಂಥಾ ಅದ್ಭುತ ಮ್ಯಾಚ್ ಅನ್ನುತ್ತಾ ಕಣ್ಣುಬಾಯಿಬಿಟ್ಟು ನೋಡೋ ಪ್ರೇಕ್ಷಕರು. ಇದು ಅಂತಿಥಾ ಆಟವಲ್ಲ, (Bull Bully Competition) ರಣ ಭಯಂಕರ ಆಟ. ಹಟ್ಟಿ ಹಬ್ಬ ಅಂತಾ (Hatti Habba) ಕರೆಯೋ ಈ ಕೂಟದಲ್ಲಿ ಹೋರಿಗಳನ್ನು ಬೆದೆರಿಸೋಕೆ ಇಷ್ಟೆಲ್ಲ ಪ್ರಯತ್ನ ನಡೆಯುತ್ತೆ. ಉತ್ತರ ಕನ್ನಡ ಜಿಲ್ಲೆಯ (Uttara Kannada News) ಸಿದ್ದಾಪುರದಲ್ಲಿ ಬರೀ ಆಕಳುಗಳನ್ನ ಓಡಿಸಿದರೆ ಮುಂಡಗೋಡಿನಲ್ಲಿ ಹೋರಿಗಳನ್ನೇ ಫೀಲ್ಡಿಗಿಳಿಸಲಾಗುತ್ತದೆ. ಹೀಗೆ ಹೋರಿಗಳು ಓಡ್ತಿದ್ರೆ ಅದನ್ನ ಹಿಡಿಯೋಕೆ ಮುಂದಾಗೋ ಈ ಯುವಕರದ್ದು ನಿಜಕ್ಕೂ ಜೀವ ಬಾಯಿಗೆ ತರಿಸೋ ಆಟ. ಆದ್ರೂ ಉತ್ತರ ಕನ್ನಡದ ಮಂದಿ ಹೋರಿ ಬೆದರಿಸೋ ಈ ಆಟದ ಮೇಲೆ ಉತ್ಸಾಹ ಹೆಚ್ಚಿಸಿಕೊಳ್ತಾನೇ ಇದ್ದಾರೆ.


    ಸ್ಪೇನ್ ದೇಶದ ಗೂಳಿ ಕಾಳಗ, ತಮಿಳುನಾಡಿನ ಜಲ್ಲಿಕಟ್ಟು ಇವರೆಡರಿಗಿಂತ ಮಿಗಿಲಾಗಿ ಮೈಝುಮ್ಮೆನ್ನುಸುವ ಏಕೈಕ ಆಟವೆಂದ್ರೆ ಅದು ಈ ಹೋರಿ ಬೆದರಿಸೋ ಆಟ.


    ಇದನ್ನೂ ಓದಿ: Bamboo Cracker: ಬಿದಿರಿನಿಂದ ತಯಾರಾಯ್ತು ಪಟಾಕಿ! ಉತ್ತರ ಕನ್ನಡ ಕೃಷಿಕನ ಸಂಶೋಧನೆ


    ಹೋರಿಗಳನ್ನು ಹಿಡಿಯೋದು ಸುಲಭ ಅಲ್ಲ ಕಣ್ರೀ!
    ವೇಗದ ಮಿತಿಯೇ ಇಲ್ಲದೇ ಓಡೋ ಗೂಳಿಗಳನ್ನ ಬೆದರಿಸ್ತೀವಿ ಅಂತಾ ಹೋಗೋರಿಗೆ ಯಾವುದೇ ರಕ್ಷಣಾ ಕವಚವೂ ಇರಲ್ಲ. ತಮ್ಮ ತಮ್ಮ ಜಾನುವಾರುಗಳನ್ನು ಬಿಟ್ಟು ಜನರು ಪರಸ್ಪರ ಪೈಪೋಟಿಗೆ ಬೀಳ್ತಾರೆ. ವೇಗದೂತ ಹೋರಿಗಳನ್ನು ಹಿಡಿದು ಅವುಗಳಿಗೆ ಬಾಸಿಂಗದ ಜೊತೆ ಕಟ್ಟಿದ ಕೊಬ್ಬರಿಯನ್ನು ಕೀಳಲು ಮುಗಿಬೀಳುತ್ತಾರೆ.


    ಇದನ್ನೂ ಓದಿ: Uttara Kannada: ಶಿವನಿಗೂ ಗಂಗೆಗೂ ಅದ್ದೂರಿ ಕಲ್ಯಾಣ! ಮದುವೆ ಆಲ್ಬಂ ನೋಡಿ!


    ಯಾಮಾರಿದ್ರೆ ಅಪಾಯ ಕಟ್ಟಿಟ್ಟ ಬುತ್ತೀನೇ
    ಸಾಹಸ ಅಂದ್ರೆ ಮಿಂಚಿನ ವೇಗದ ಈ ಹೋರಿಯನ್ನು ತಡೆಯಬೇಕು. ಅದಕ್ಕೆ ಬಾಸಿಂಗದ ಜೊತೆ ಕಟ್ಟಿದ ಕೊಬ್ಬರಿ ಕೆಳಕ್ಕೆ ಉರುಳಿಸಬೇಕು. ಇದಕ್ಕಾಗಿಯೇ ಹತ್ತು ಜನರ ಹತ್ತು ತಂಡ ಹೋರಿ ಸಾಗುವ ಟ್ರ್ಯಾಕ್​ನಲ್ಲಿ ನಿಲ್ಲುತ್ತೆ. ಆದ್ರೆ ಈ ಹೋರಿಯನ್ನ ತಡೆದು ನಿಲ್ಸೋದು ಸುಲಭ ಮಾತಲ್ಲ. ಸ್ವಲ್ಪ ಯಾಮಾರಿದ್ರೆ ಅಪಾಯ ಕಟ್ಟಿಟ್ಟ ಬುತ್ತೀನೇ.


    ವರದಿ: ಎ.ಬಿ.ನಿಖಿಲ್, ಮುಂಡಗೋಡು

    Published by:ಗುರುಗಣೇಶ ಡಬ್ಗುಳಿ
    First published: