Uttara Kannada: ಅಬ್ಬಬ್ಬಾ! ಆಕಾಶಕ್ಕೇ ಸ್ಪರ್ಧೆ ನೀಡುವ ಆಲದಮರ! ನೋಡಿದ್ರೆ ಅಚ್ಚರಿ ಪಡೋದು ಗ್ಯಾರಂಟಿ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಜನಸಾಮಾನ್ಯರು ಅಚ್ಚರಿ ಪಡುವಂತಹ ಆಲದ ಮರವೊಂದಿದೆ. ಸುಮಾರು 3 ಎಕ್ರೆ ಜಾಗದಲ್ಲಿ ಹರಡಿಕೊಂಡಿರುವ ಈ ಆಲದ ಮರ ದೈವೀ ಶಕ್ತಿಯನ್ನು ಪಡೆದಿದೆ. ನೀವೇ ವಿಡಿಯೋ ನೋಡಿ.

ಆಕಾಶದಗಲದ ಆಲದಮರ

"ಆಕಾಶದಗಲದ ಆಲದಮರ"

 • Share this:
  ಉತ್ತರ ಕನ್ನಡ: ಮರ ಕಡಿಮೆ ಹೊಲ ಮಾಡುವವರನ್ನು ನೋಡಿದ್ದೀವಿ. ಆದರೆ, ಇಲ್ಲೊಬ್ರು ಹೊಲವನ್ನೇ ಮರ ಬೆಳೆಯೋದಕ್ಕಾಗಿ ತ್ಯಾಗ ಮಾಡಿದ್ದಾರೆ. ಹೌದು, ಉತ್ತರಕನ್ನಡ ಜಿಲ್ಲೆಯ (Uttara Kannada) ಮುಂಡಗೋಡ (Mundgod) ತಾಲೂಕಿನ ಚೌಡಳ್ಳಿ ಗ್ರಾಮದಲ್ಲಿ ಒಂದೂವರೆ ಎಕರೆ ಹೊಲ ಪೂರ್ತಿ ಆಲದ ಮರನೇ (Banyan Tree) ಇದೆ. ಅದು ಕೂಡ 120 ವರ್ಷ ಹಳೇದು.. ಇಲ್ಲಿ ಬಂದಾಗ್ಲೂ ಅದೇ ರೀತಿ ಮೈಯೆಲ್ಲ ರೋಮಾಂಚನವಾಗುತ್ತೆ..ಆಲದ ಮರದ ಕೆಳಗೆ ಒಂದು ಗುಡಿಯೂ ಇದೆ. ಅಂತಹ ಬೃಹತ್ ಆಲದಮರ ಎಲ್ಲಿದೆ? ಹೇಗಿದೆ? ಎಷ್ಟು ವಿಶಾಲವಾಗಿದೆ?  ಗುಡಿಯ ವಿಶೇಷವೇನು?ಎಲ್ಲ ವಿವರ ಇಲ್ಲಿದೆ..ನೀವೇ ವಿಡಿಯೋ ನೋಡಿ

  ಅದೊಮ್ಮೆ ತಿಪ್ಪಣ್ಣಜ್ಜ ಕೋಣನಕೇರಿಯವರು ಬ್ಯಾಡಗಿಯ ಒಬ್ಬ ಸಾಧುವಾದ ಶಿವಪ್ಪನವರ ಸಖ್ಯ ಬೆಳೆಸಿ ಈ ಊರಿಗೆ ಬಂದರು ಅವರಿಗೊಂದು ಗದ್ದುಗೆಯೂ ಆಯ್ತು, ಗದ್ದುಗೆಯಿಂದ ಪವಾಡಗಳೂ ನಡೆಯಲು ಶುರುವಾದವು, ಅವರೊಮ್ಮೆ ನೆಟ್ಟ ಆಲ ಇಂದು ಗುಡಿಯ ಹಾಗೆ ಬೆಳೆದು ನಿಂತಿದೆ ಕೆಳಗಡೆ ಅವರದೇ ಸಮಾಧಿ ಇದೆ, ಜೊತೆಗೆ ಮೈಲಾರಲಿಂಗನ ಗುಡಿಯೂ ಇದೆ.

  ಕಾರ ಹುಣ್ಣಿಮೆ ವಿಶೇಷ
  ಇಲ್ಲಿ ಮಾರ್ತಾಂಡಭೈರವ ಮೈಲಾರಲಿಂಗ ಪರಿವಾರ ಸಮೇತ ನೆಲೆಸಿದ್ದಾನೆ. ಅವನಿಗೆ ತಿಪ್ಪಜ್ಜ ಕೋಣನಕೇರಿಯ ಈಗಿನ ವಂಶಸ್ಥರಾದ ಪಾರ್ವತಮ್ಮ, ನಿಂಗಪ್ಪ, ಮೈಲಾರಿ ಎಲ್ಲರೂ ಶ್ರದ್ಧಾ ಭಕ್ತಿಯಿಂದ ಸೇವೆ ಮಾಡುತ್ತಾರೆ. ಇಲ್ಲಿ ಕಾರ ಹುಣ್ಣಿಮೆಗೆ ಜಂಗಿಕುಸ್ತಿ, ದಾಸೋಹ ನಡೆಯುತ್ತದೆ‌. ಸರಪಳಿ ಪವಾಡ ನಡೆಯುತ್ತದೆ. ದಪ್ಪ ದಪ್ಪ ಕಬ್ಬಿಣದ ಸರಪಳಿಯನ್ನ ಬರೀ ಕೈಯಿಂದ ಗೊರವಪ್ಪನವರು ಹರಿಯುತ್ತಾರೆ ನಂತರ ಕಾರಣಿಕವೂ ನಡೆಯುತ್ತದೆ.

  ವರ್ಣನೆಗೆ ನಿಲುಕದ ಮರ
  ಇವರಿಗೆ ಸಾಥ್ ನೀಡಲು ಶಿವಪ್ಪನವರ ಮದ್ಲಿ ಕುಟುಂಬವೂ ಇದೆ. ನವರಾತ್ರಿಯ ದಿನಗಳಲ್ಲಿ ಮಾಲ್ಹಸಾ ಮಾರ್ತಾಂಡ ಪುರಾಣ ಪಠಣೆ ಮಾಡುತ್ತಾರೆ. ಇನ್ನು ಈ ಮರಕ್ಕೆ ಸಿಡಿಲು ಬಿದ್ದರೂ ಹಾನಿಯಾಗಿಲ್ಲ ಗೋಪುರದಂತಹ ಆಕೃತಿ ಕಳಚಿದ್ದು ಬಿಟ್ಟರೆ ಮರ ಹಾಗೆಯೇ ಮಿಸುಕಾಡದೇ ಇದೆ‌. ಮರ ಇನ್ನೂ ಹಬ್ಬುತ್ತಲೇ ಇದೆ ಇದೊಂದು ತರಹ "ತೇಲುವ ಗೋವರ್ಧನ, ಶಿವನಿಗೆ ಹೆಡೆ ಬಿಚ್ಚಿದ ನಾಗ, ಹಸಿರು ಕೈಲಾಸ\" ಹೀಗೆ ವರ್ಣಿಸುತ್ತಾ ಸಾಗಬಹುದು.

  Mundgod Banyan Tree
  ಆಲದಮರ ನೋಡಲು ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

  ಇದನ್ನೂ ಓದಿ: Sri Ramalingeshwara Temple: ಶಿವನ ಎದುರೇ ಶ್ರೀಮನ್ನಾರಾಯಣ! ನೀವೂ ದರ್ಶನ ಪಡೆಯಿರಿ

  ಹೀಗೆ ಬನ್ನಿ
  ಈ ಕಾಲದಲ್ಲಿ ರಸ್ತೆ ಅಗಲೀಕರಣ, ಕೃಷಿ ಭೂಮಿಗಾಗಿ ಮರ ಕಡೆಯುವವರ ನಡುವೆ ಮರವನ್ನು ಗುಡಿಯಂತೆ ಬೆಳೆಸಿ ಮಾದರಿಯಾದ ಕುಟುಂಬಕ್ಕೂ ಕೊಂಚ ಕಾಲ ನೆರಳಾದ ಈ ಮರಕ್ಕೂ ನಮನಗಳು!

  ಇದನ್ನೂ ಓದಿ: Droupadi Murmu: ವಿಡಿಯೋ ನೋಡಿ; ಯಕ್ಷಗಾನ ಶೈಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಅಭಿನಂದನೆ

  ಈ ಊರಿಗೆ ಬರಬೇಕಂದರೆ ಬೆಂಗಳೂರಿಂದ ಮುಂಡಗೋಡಕ್ಕೆ ಬಂದು ಮುಂಡಗೋಡ-ಹನುಮಾಪುರ ಬಸ್ಸನ್ನು ಹತ್ತಿದರೆ ಒಂದು ನಾಲ್ಕು ಕಿಲೋ ಮೀಟರ್ ನಂತರ ಈ ವಿಸ್ಮಯದ ದರ್ಶನ ನಿಮಗಾಗಲಿದೆ‌. ಇನ್ಯಾಕೆ ತಡ ಬನ್ನಿ! ನೋಡಿ! ನಮಿಸಿ!
  Published by:guruganesh bhat
  First published: