ಉತ್ತರ ಕನ್ನಡ: ವಾಹ್! ಸಖತ್ತಾಗಿರೋ ಜಲರಾಶಿಯ ನೋಟ, ಸುತ್ತಲೂ ಹಚ್ಚ ಹಸಿರ ಬೆಟ್ಟದ ಮೈಮಾಟ. ಕೆರೆಗೆ ಸುತ್ತಲೂ ಉದ್ಯಾನವನ, ವಾಕಿಂಗ್ ಪಾಥ್ ಗಳ ಮೆರುಗು. ಕಣ್ಮನ ಸೆಳೆಯುವ ವಿವಿಧ ಬಗೆಯ ಸಸ್ಯ ವೈವಿಧ್ಯಗಳ ವೈಯ್ಯಾರ. ಯೆಸ್, ಒಂದು ಕಾಲಕ್ಕೆ ಯಾರಿಗೂ ಬೇಡವಾಗಿದ್ದ ತಾಣ, ಈಗ ಆಯ್ತು ನೋಡಿ (Bhmkol Lake Karwar) ಪ್ರವಾಸಿಗರ ಹಾಟ್ ಫೇವರಿಟ್ (Best Travel Plan) ಸ್ಪಾಟ್.
ಭೀಮಕೋಲ್ ಡ್ಯಾಂ
ಇದು ಕಾರವಾರ ತಾಲೂಕಿನ ಹಣಕೋಣ ಸಮೀಪದ ಭೀಮಕೋಲ್ ಕೆರೆಯ ವೈಭವದ ನೋಟ. ಎಂತಹ ಪ್ರವಾಸಿಗರನ್ನು ಕೈ ಬೀಸಿ ಸೆಳೆಯೋ ಚಿತ್ತವನ್ನ ಈ ಭೀಮಕೋಲ್ ಡ್ಯಾಂ ಹೊಂದಿದೆ. ಅಷ್ಟೇ ಅಲ್ಲ, ಎಷ್ಟೇ ಪ್ರವಾಸಿಗರು ಬಂದ್ರೂ ಇಲ್ಲಿನ ಡ್ಯಾಂ ಬಳಿ ನಿಂತ್ರೆ ತನ್ನನ್ನ ತಾನೇ ಮೈ ಮರೆಯೋದ್ರಲ್ಲಿ ಡೌಟಿಲ್ಲ.
ಯಾರಿಗೂ ಬೇಡವಾಗಿದ್ದ ಜಾಗ
ಸಖತ್ ಬ್ಯೂಟಿಫುಲ್ ಆಗಿರೋ ಈ ಲೊಕೇಶನ್ ಒಂದು ಕಾಲದಲ್ಲಿ ಯಾರಿಗೂ ಬೇಡವಾಗಿತ್ತು. ಆದರೆ, ಅರಣ್ಯ ಇಲಾಖೆಯ ಆಸಕ್ತಿಯಿಂದ ಇದೀಗ ಸುಂದರ ವನ ರೂಪುಗೊಂಡಿದೆ. ಇಲ್ಲಿ ನಿರ್ಮಿಸಲಾಗಿರುವ ಪಂಚವಟಿ ವನ ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿದೆ.
ಪಂಚವಟಿ ಉದ್ಯಾನವನ
ರಾಮಾಯಣದಲ್ಲಿ ಬರುವ ಪಂಚವಟಿ ವನದಂತೆ ಇಲ್ಲಿಯೂ ಆಲ, ಅರಳಿ, ನೆಲ್ಲಿ, ಅತ್ತಿ ಮತ್ತು ಬಿಲ್ವಪತ್ರೆ ಮರಗಳ ಪಂಚ ಗಿಡಗಳನ್ನ ನೆಟ್ಟು ವನ ನಿರ್ಮಿಸಲಾಗಿದೆ. ಇದರೊಂದಿಗೆ ರಾಶಿ ವನ, ಚಿಟ್ಟೆ ಉದ್ಯಾನವನ್ನ ಕೂಡ ನಿರ್ಮಿಸಲಾಗಿದೆ. ಜೊತೆಗೆ ಎರಡು ಕುಟೀರಗಳನ್ನ ನಿರ್ಮಿಸಿ, ಇಲ್ಲಿಗೆ ಬರುವಂತಹ ಪ್ರವಾಸಿಗರು ಇಲ್ಲಿಯೇ ಕುಳಿತು ನಿಸರ್ಗದ ಸೌಂದರ್ಯವನ್ನ ಸವಿಯಬಹುದಾಗಿದೆ.
ಇದನ್ನೂ ಓದಿ: Red Ant Chutney: ಕೆಂಪು ಇರುವೆಯ ರುಚಿ ರುಚಿ ಚಟ್ನಿ, ಸಿದ್ದಿ ಸಮುದಾಯದ ಸಖತ್ ರೆಸಿಪಿ ಇದು
ವಾಕಿಂಗ್ ಪಾಥ್ ಸಹ ಇದೆ!
ಇನ್ನು ಈ ಹಿಂದಿನ ಜಿಲ್ಲಾ ಪಂಚಾಯತ್ ಸಿಇಓ ಆಗಿದ್ದ ಎಂ.ಪ್ರಿಯಾಂಗಾ ಅವರ ಮುತುವರ್ಜಿಯಿಂದಾಗಿ ಭೀಮಕೋಲ್ ಕೆರೆಯ ಒಂದು ಬದಿಗೆ ವಾಕಿಂಗ್ ಪಾಥ್ ನಿರ್ಮಿಸಲಾಗಿತ್ತು. ಇದರಿಂದಾಗಿ ಪಾಳುಬಿದ್ದಿದ್ದ ಜಾಗ ಪ್ರವಾಸಿರನ್ನ ಸೆಳೆಯುವ ತಾಣವಾಗಿ ಮಾರ್ಪಾಟಾಗಿತ್ತು.
ಇದನ್ನೂ ಓದಿ: Uttara Kannada: ಹುಲಿ ಅಲ್ಲ, ಇದು ಸಿಂಹ ವೇಷ! 40 ವರ್ಷದಿಂದ ಕುಣಿಯುತ್ತಿರುವ ಕಲಾವಿದ ಇವರು!
ಭೀಮಕೋಲ್ಗೆ ಹೀಗೆ ಬನ್ನಿ (ಚಿತ್ರಕೃಪೆ:ಗೂಗಲ್ ಮ್ಯಾಪ್ಸ್)
ಒಟ್ಟಿನಲ್ಲಿ ಕಾರವಾರ ಅಂತಂದ್ರೆ ಕೇವಲ ಕಡಲತೀರ ಮಾತ್ರ ಅಂದುಕೊಂಡಿದ್ದವರಿಗೆ ಭೀಮಕೋಲ್ ತನ್ನ ನೈಸರ್ಗಿಕ ಸೌಂದರ್ಯದಿಂದ ಇದೀಗ ತನ್ನತ್ತ ಕೈ ಬೀಸಿ ಕರೆಯುತ್ತಿದೆ.
ವರದಿ: ದೇವರಾಜ್ ನಾಯ್ಕ್, ಕಾರವಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ