ಕಾರವಾರ: ಕಣ್ಣಿಗೆ ಕಾಣುವಷ್ಟೂ ದೂರ ಸಮುದ್ರ, ಪಕ್ಕದಲ್ಲೇ ಪುರಾತನ ಕೋಟೆ, ಫಿರಂಗಿಯ ಅವಶೇಷ. ಜೊತೆಗೆ ಅತ್ಯಂತ ಅಪರೂಪದ ಭವಾನಿಯ ದೇಗುಲ! ಛತ್ರಪತಿ ಶಿವಾಜಿ (Chhatrapati Shivaji) ಪ್ರತಿಷ್ಠಾಪಿಸಿದ ಭವಾನಿ ದೇವಿ (Bhavani Mata) ನಡೆಯತ್ತೆ ಇಲ್ಲಿ ನಿತ್ಯಪೂಜೆ. ಇಂತಹದ್ದೊಂದು ವಿಶೇಷ ತಾಣ ಇರೋದು ನಮ್ಮ ಕಾರವಾರದಲ್ಲೇ! (Karwar Durga Temple)
17ನೇ ಶತಮಾನದಲ್ಲಿ ನೆರೆಯ ಮಹಾರಾಷ್ಟ್ರದ ರಾಜನಾಗಿದ್ದ ಶಿವಾಜಿ ಕರ್ನಾಟಕದ ಕರಾವಳಿಗೂ ತಮ್ಮ ಸಾಮ್ರಾಜ್ಯ ವಿಸ್ತರಣೆಗೆ ಭೇಟಿ ನೀಡಿದ್ದರು. ಸದಾಶಿವರಾಯ ನಿರ್ಮಿಸಿದ್ದ ಕೋಟೆಯಲ್ಲಿ ಶಿವಾಜಿ ಸ್ಥಾಪಿಸಿದ ದುರ್ಗಾದೇವಿಗೆ ಇಂದಿಗೂ ಜನತೆ ಪೂಜಿಸುತ್ತಾ ಬಂದಿದ್ದಾರೆ.
ಇದೇ ಕೋಟೆಯಲ್ಲಿದೆ ಶಿವಾಜಿಯ ಆರಾಧ್ಯದೈವ
ಸೋದೆಯ ಸದಾಶಿವರಾಯರ ಆಳ್ವಿಕೆಯಲ್ಲಿದ್ದ ಕಾರವಾರದಲ್ಲಿ ಕೋಟೆಯೊಂದನ್ನು ನಿರ್ಮಿಸಿ ಸುತ್ತಮುತ್ತಲಿನ ಚಟುವಟಿಕೆಗಳನ್ನ ಗಮನಿಸಲಾಗ್ತಿತ್ತು. ಹೀಗಾಗಿ ಈ ಕೋಟೆಗೆ ಸದಾಶಿವಗಡ ಎಂದೇ ಹೆಸರೂ ಬಂದಿದೆ. ಈ ಕೋಟೆಯ ಪಳೆಯುಳಿಕೆಗಳು ಇಂದಿಗೂ ಇಲ್ಲಿ ಕಾಣಬಹುದಾಗಿದೆ. ಇದೇ ಕೋಟೆಯಲ್ಲಿ ಶಿವಾಜಿ ತನ್ನ ಆರಾಧ್ಯದೇವಿ ಭವಾನಿಯನ್ನು ಪ್ರತಿಷ್ಠಾಪಿಸಿದ್ದರು.
ಇದನ್ನೂ ಓದಿ: House Lifting Technology: ಕಟ್ಟಿದ ಮನೆಯೇ ನೆಲದಿಂದ 6 ಅಡಿ ಎತ್ತರಕ್ಕೆ ಲಿಫ್ಟ್!
ಕನಸಿನಲ್ಲಿ ಬಂದು ಆಜ್ಞೆ
ಶಿವಾಜಿ 1665, 1673 ರಲ್ಲಿ ಎರಡು ಬಾರಿ ಕಾರವಾರಕ್ಕೆ ಭೇಟಿ ನೀಡಿ ಸದಾಶಿವರಾಯ ಕಟ್ಟಿಸಿದ್ದ ಕೋಟೆಯ ಮೇಲೆ ದಾಳಿ ಮಾಡಿ ವಶಪಡಿಸಿಕೊಂಡ ಎನ್ನುತ್ತದೆ ಇತಿಹಾಸ. ಶಿವಾಜಿಯ ಆರಾಧ್ಯದೇವಿಯಾದ ಭವಾನಿ ಅಂದು ಶಿವಾಜಿಯ ಕನಸಿನಲ್ಲಿ ಬಂದು ಈ ಸ್ಥಳದಲ್ಲಿ ಪ್ರತಿಷ್ಠಾಪಿಸಲು ಆಜ್ಞೆ ನೀಡಿದ್ದಳಂತೆ.
ಇದನ್ನೂ ಓದಿ: Uttara Kannada: ಜೇನು ಮೇಣದಿಂದ ಪೇಪರ್ ತಯಾರಿ! ಯಲ್ಲಾಪುರದ ಕೃಷಿಕರ ವಿಶಿಷ್ಟ ಬ್ಯುಸಿನೆಸ್
ಈ ದೇಗುಲಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ದೇವಿಯ ಅಣತಿಯಂತೆ ಭವಾನಿಯನ್ನ ಶಿವಾಜಿ ಸದಾಶಿವಗಡ ಕೋಟೆಯ ಮೇಲೆ ಸ್ಥಾಪಿಸಿದ್ದ ಎನ್ನುತ್ತದೆ ಇತಿಹಾಸ. ಅದೇ ಭವಾನಿಯನ್ನ ದುರ್ಗಾದೇವಿಯನ್ನಾಗಿ ಕೋಟೆಯ ಕೆಳಭಾಗದಲ್ಲಿ ಪುನರ್ ಪ್ರತಿಷ್ಠಾಪಿಸಲಾಗಿದ್ದು, ಇಂದಿಗೂ ಇಲ್ಲಿ ಪೂಜೆ ನಡೆಯುತ್ತದೆ.
ವರದಿ: ದೇವರಾಜ್ ನಾಯ್ಕ್, ಕಾರವಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ