Bhatkal Marikamba Fair: ಭಟ್ಕಳದ ಮಾರಿಜಾತ್ರೆಯ ವೈಭವ ನೋಡಿ; ದರ್ಶನ ಪಡೆದು ದೇವಿಗೆ ಕೈಮುಗಿಯಿರಿ!

ಭಟ್ಕಳದ ಮಾರಿಕಾಂಬೆ ಕಣ್ಣುಬೇನೆ, ಸಿಡುಬಿನಂತಹ ಸಾಂಕ್ರಾಮಿಕ ರೋಗ ಬರದಂತೆ ತಡೆಯುತ್ತಾಳೆ ಅಂತ ನಂಬಿಕೆಯಿದೆ. ಪೂಜೆ, ಹರಕೆ ಸಲ್ಲಿಸಿ ಪುನೀತರಾಗಲು ನಾಮುಂದು ತಾಮುಂದು ಅಂತ ಭಕ್ತರು ಸಾಲುಗಟ್ಟಿ ನಿಲ್ತಾರೆ.

ದೇವಿಗೆ ಉಘೇ ಎನ್ನಿರಿ

"ದೇವಿಗೆ ಉಘೇ ಎನ್ನಿರಿ"

 • Share this:
  ಭಟ್ಕಳದಲ್ಲಿ ಈಗ ಹಬ್ಬದ ವಾತಾವರಣ. ಊರ ಹಬ್ಬದ ಸಂಭ್ರಮ ಸಡಗರ. ಬೀದಿ ಬೀದಿಯಲ್ಲೂ ಅಂಗಡಿಗಳ ಸಾಲು. ಜಾತ್ರಾ ಗದ್ದುಗೆಯಲ್ಲಿ ಭಕ್ತರ ನೆಚ್ಚಿನ ಮಾರಿಯಮ್ಮನ ದರ್ಶನ ಭಾಗ್ಯ ಸಿಗೋ ಕ್ಷಣವಿದು. ಕೊವಿಡ್​ನಿಂದ ನಿಂತಿದ್ದ ಮಾರಿಕಾಂಬಾ ಜಾತ್ರೆ (Marikamba Fair) ನಡೆಯುತ್ತಿರೋದೇ ಭಟ್ಕಳದಲ್ಲಿ (Bhatkal) ಸಂಭ್ರಮ ಹೆಚ್ಚಿಸಿದೆ. ಜಾತ್ರೆ ಅಂದ್ರೆ ಸಾಕು ಎಲ್ಲರ ಕಣ್ಣು ಕಿವಿ ಅರಳುತ್ತೆ! ಯಾವ ಜಾತ್ರೆ ಯಾವೂರಲ್ಲಿ? ಏನ್ ವಿಶೇಷ? ಅಂದಹಾಗೆ ಈಗ ನಾವು ಹೇಳ್ತಿರೋದು ಉತ್ತರ ಕನ್ನಡದ (Uttara Kannada) ಭಟ್ಕಳದ ಪ್ರಸಿದ್ಧ ಮಾರಿಕಾಂಬಾ ಜಾತ್ರೆ.  ಬನ್ನಿ ಈ ಜಾತ್ರೆಗೆ ನಾವೂ ಒಮ್ಮೆ ಹೋಗ್ಬರೋಣ.

  ಭಟ್ಕಳದ ಮಾರಿಕಾಂಬೆ ಕಣ್ಣುಬೇನೆ, ಸಿಡುಬಿನಂತಹ ಸಾಂಕ್ರಾಮಿಕ ರೋಗ ಬರದಂತೆ ತಡೆಯುತ್ತಾಳೆ ಅಂತ ನಂಬಿಕೆಯಿದೆ. ಪೂಜೆ, ಹರಕೆ ಸಲ್ಲಿಸಿ ಪುನೀತರಾಗಲು ನಾಮುಂದು ತಾಮುಂದು ಅಂತ ಭಕ್ತರು ಸಾಲುಗಟ್ಟಿ ನಿಲ್ತಾರೆ. ಅಬ್ಬಬ್ಬಾ ಈ ನಂಬಿ ಬಂದವರಿಗೆ ಇಷ್ಟಾರ್ಥ ಕರುಣಿಸೋ ದೇವಿಯ ದರ್ಶನಕ್ಕೆ ಭಕ್ತಸಾಗರವೇ ನೆರೆಯುತ್ತೆ.

  Marikatte Temple
  ದೇವಸ್ಥಾನಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

  ಇದನ್ನೂ ಓದಿ: Tibetan Camp: ಉತ್ತರ ಕನ್ನಡದ ಮಿನಿ ಟಿಬೆಟ್! ಒಳಗೆ ಏನೇನಿದೆ? ವೀಡಿಯೋ ನೋಡಿ

  ಎರಡು ದಿನಗಳ ಈ ಜಾತ್ರೆಯ ವೈಭವ ಭಾರೀ ಕಳೆಗಟ್ಟಿದೆ. ಭಕ್ತರು ತಮ್ಮ ಇಷ್ಟಾರ್ಥಗಳನ್ನು ಕೇಳಿಕೊಳ್ತಾರೆ. ಗದ್ದುಗೆ ಮೇಲಿನ ಮಾರಿಕಾಂಬೆಗೆ ಕೈಮುಗಿದು ಎಲ್ಲಾ ಸಂಕಟಗಳನ್ನೂ ದೂರಮಾಡು ತಾಯೇ ಅಂತ ಬೇಡಿಕೊಳ್ತಾರೆ. ಆ ತಾಯಿ ಸಹ ಆಶೀರ್ವಾದ ಮಾಡ್ತಾಳೆ.

  ಇದನ್ನೂ ಓದಿ: Sri Ramalingeshwara Temple: ಶಿವನ ಎದುರೇ ಶ್ರೀಮನ್ನಾರಾಯಣ! ನೀವೂ ದರ್ಶನ ಪಡೆಯಿರಿ

  ದೇವಿ ಎರಡು ದಿನ ಗದ್ದುಗೆ ಮೇಲಿಂದ ಭಕ್ತರಿಗೆ ಆಶೀರ್ವಾದ ಮಾಡಿ ಜಾಲಿಕೋಡಿ ಸಮುದ್ರ ತೀರಕ್ಕೆ ಮೆರವಣಿಗೆಲಿ ತೆರಳುತ್ತಾಳೆ. ವಿಸರ್ಜನಾ ಪೂಜೆ ಭಕ್ತಿಭಾವದಿಂದ ನಡೆಯುತ್ತೆ. ಸಮುದ್ರದಲ್ಲಿ ಮಾರಿಕಾಂಬೆಯನ್ನು ವಿಸರ್ಜಿಸಿ ಭಕ್ತರ ಜಯಘೋಷ ಹಾಕಿ ಧನ್ಯತೆ ಅನುಭವಿಸ್ತಾರೆ.
  Published by:guruganesh bhat
  First published: