ಕಾರವಾರ: ಚೆಂಡು ಚೆಂಡಾದ ಚೆಂದದ ಹೂ! ಊರೆಲ್ಲ ಸುವಾಸನೆ ಬೀರೋ ಮಲ್ಲಿಗೆ ಹೂ. ಹೀಗೆ ಅಟ್ಟಿ ಕಟ್ಟಿ ರೆಡಿ ಆಗಿರೋ ಈ ಮಲ್ಲಿಗೆಗೆ ಮಾರ್ಕೆಟ್ನಲ್ಲಿ ಭಾರೀ ಬೇಡಿಕೆ. ಆದರೆ, ಇದ್ರ ರೇಟ್ ಏನು ಕಡಿಮೆಯದ್ದಲ್ಲ, ಹಾಗಂತ ಜನ ಖರೀದಿಸೋದಕ್ಕೆ ಹಿಂದೆ ಮುಂದೆ ನೋಡೋದೂ ಇಲ್ಲ. ಹೌದು, ಅದುವೇ ಈ ಮಲ್ಲಿಗೆ ಸ್ಪೆಷಲ್. ಉಡುಪಿಯ ಶಂಕರಪುರ ಮಲ್ಲಿಗೆ (Shankarpura Jasmine) ಹೇಗೆ ಫೇಮಸ್ಸೋ ಅಷ್ಟೇ ಫೇಮಸ್ (Bhatkal Jasmine) ಈ ಭಟ್ಕಳ ಮಲ್ಲಿಗೆ.
ಉತ್ತರ ಕನ್ನಡದ ಮುರ್ಡೇಶ್ವರ ಭಾಗದಲ್ಲಿ ಅತ್ಯಧಿಕವಾಗಿ ಬೆಳೆಯುವ ಈ ಮಲ್ಲಿಗೆ ದರದ ರೇಟು ಸಖತ್ ಹೈ ಇರುತ್ತೆ. ಆದರೆ ಈಗ ಭಟ್ಕಳ ಮಲ್ಲಿಗೆ ರೇಟು ಚೆಂಡಿಗೆ 550 ರೂಪಾಯಿಗೆ ಇಳಿದಿದೆ. ಹೀಗಾಗಿ ಸಾಮಾನ್ಯ ಜನರು ಭಟ್ಕಳ ಮಲ್ಲಿಗೆ ಖರೀದಿಸುತ್ತಿದ್ದಾರೆ.
ಸೀಸನ್ನಲ್ಲಿ 2 ಸಾವಿರದವರೆಗೂ ದರ
ಮಲ್ಲಿಗೆ ಸೀಸನ್ನಲ್ಲಂತೂ ಭಟ್ಕಳ ಮಲ್ಲಿಗೆ ರೇಟು ಚೆಂಡಿಗೆ 2 ಸಾವಿರದ ಗಡಿ ದಾಟುತ್ತದೆ. ಭಟ್ಕಳ ಮಲ್ಲಿಗೆಗೆ ನೆರೆಯ ಜಿಲ್ಲೆಯಲ್ಲೂ ಬೇಡಿಕೆಯಿದ್ದು, ಅಲ್ಲಿಗೆ ಪೂರೈಸಲಾಗುತ್ತದೆ. ಮಲ್ಲಿಗೆ ಹೂಗಳಲ್ಲೇ ಭಟ್ಕಳ ಮಲ್ಲಿಗೆ ಹೂಗಳು ಅನಭಿಷಿಕ್ತ ರಾಣಿಯಂತೆ ಕಂಗೊಳಿಸುತ್ತದೆ.
ಇದನ್ನೂ ಓದಿ: Gumate Pang: ಗಣಪತಿ ದೇವರ ಇಷ್ಟದ ವಾದ್ಯ ಗುಮಟೆ ಪಾಂಗ್! ಇದು ಲೋಕಲ್ ಬ್ಯಾಂಡ್ ಸೆಟ್!
ಈ ಭಾಗದಲ್ಲಿ ಹೆಚ್ಚು ಬೆಳೆಯಲಾಗುತ್ತೆ
ಮುರ್ಡೇಶ್ವರ, ಹೊನ್ನಾವರ ಭಾಗದಲ್ಲಿ ಮನೆಗಳಲ್ಲಿ ಅತ್ಯಧಿಕವಾಗಿ ಈ ಮಲ್ಲಿಗೆಯನ್ನ ಬೆಳೆಯಲಾಗುತ್ತೆ. ನಂತರ ನೀಟಾಗಿ ಇಸ್ತ್ರಿ ಹಾಕಿದಂತೆ ಅಟ್ಟಿ ಕಟ್ಟಿ ಮಾರ್ಕೆಟ್ ಕೊಂಡೊಯ್ಯಲಾಗುತ್ತೆ.
ರೇಟ್ ಎಷ್ಟೇ ಇರ್ಲಿ, ಬೇಕಂದ್ರೆ ಬೇಕು!
ಉತ್ತರ ಕನ್ನಡ ಭಾಗದ ಮಂದಿಯಂತೂ ಭಟ್ಕಳ ಮಲ್ಲಿಗೆಯನ್ನ ತಮ್ಮ ಪ್ರತಿಷ್ಠೆ ಅನ್ನೋ ರೀತೀಲಿ ನೋಡುತ್ತಾರೆ. ಯಾವುದೇ ಶುಭ ಸಮಾರಂಭಕ್ಕೆ ಭಟ್ಕಳ ಮಲ್ಲಿಗೆ ಇಲ್ದೇ ಹೋದ್ರೆ ಅಪೂರ್ಣ ಎಂದು ಭಾವಿಸಿಕೊಳ್ಳುತ್ತಾರೆ. ಹಾಗಾಗಿ ರೇಟು ಹೇಗೇ ಇರ್ಲಿ, ಮನೆ ಕಾರ್ಯಕ್ರಮಕ್ಕೆ ಭಟ್ಕಳ ಮಲ್ಲಿಗೆ ಬೇಕೆ ಬೇಕು ಎಂದು ನಿರ್ಧರಿಸುತ್ತಾರೆ.
ಇದನ್ನೂ ಓದಿ: KSRTC ಡ್ರೈವರ್, ಕಂಡಕ್ಟರ್ರಿಂದ ವಾಪಸ್ ಸಿಕ್ತು ಲಕ್ಷ ಲಕ್ಷ ಬೆಲೆಯ ಬಂಗಾರ!
ಒಟ್ಟಿನಲ್ಲಿ ಭಟ್ಕಳ ಮಲ್ಲಿಗೆಯ ಘಮ ಘಮಕ್ಕೆ ಮನಸೋಲದವರಿಲ್ಲ. ದೇವರಿಗೂ, ಶುಭ ಕಾರ್ಯಕ್ರಮಗಳಿಗಂತೂ ಭಟ್ಕಳ ಮಲ್ಲಿಗೆ ಇದ್ರಂತೂ ಅದ್ರ ಚೆಂದವೇ ಬೇರೆ.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ