• Home
  • »
  • News
  • »
  • uttara-kannada
  • »
  • Uttara Kannada: ಗ್ರಹಣದ ನಂತರದ ಆಕಾಶ ಹೀಗಿರುತ್ತೆ! ಶಿರಸಿಯ ಆಗಸ 360 ತಂಡದಿಂದ ಹೊಸ ಪ್ರಯತ್ನ!

Uttara Kannada: ಗ್ರಹಣದ ನಂತರದ ಆಕಾಶ ಹೀಗಿರುತ್ತೆ! ಶಿರಸಿಯ ಆಗಸ 360 ತಂಡದಿಂದ ಹೊಸ ಪ್ರಯತ್ನ!

ಇಲ್ಲಿ ನೋಡಿ ಆಕಾಶ!

"ಇಲ್ಲಿ ನೋಡಿ ಆಕಾಶ!"

ಚಂದ್ರಗ್ರಹಣ ನಂತರ ಆಕಾಶದಲ್ಲಿನ ಶನಿಗ್ರಹ, ಸುತ್ತಲಿನ ಉಂಗುರಗಳು ಹಾಗೂ ಗುರುಗ್ರಹ ಅದರ ಉಪಗ್ರಹಗಳು, ಚಂದ್ರನ ಮೇಲ್ಮೈ ಹಾಗೂ ಅದರ ಮೇಲಿನ ಖನಿಜಗಳ ಬಗ್ಗೆ ಟೆಲಿಸ್ಕೋಪ್​ನಲ್ಲಿ ವೀಕ್ಷಿಸಿ ಚರ್ಚಿಸಲಾಯ್ತು.

  • News18 Kannada
  • Last Updated :
  • Uttara Kannada, India
  • Share this:

    ಶಿರಸಿ: ಸುತ್ತಲೂ ಕತ್ತಲು, ಹತ್ತಾರು ವಿದ್ಯಾರ್ಥಿಗಳು, ಶಿಕ್ಷಕರು, ಅರೇ! ಇದೇನು? ಇಲ್ಲೇನು ರಾತ್ರಿಶಾಲೆ ನಡೆಯುತ್ತಿದೆ ಅಂದ್ಕೊಂಡ್ರಾ? ಅಲ್ಲ ಕಣ್ರೀ.. ಬಾಹ್ಯಾಕಾಶ ವಿಸ್ಮಯಗಳನ್ನ ಕಣ್ತುಂಬಿಸಿಕೊಳ್ಳೋಕೆ ಕುತೂಹಲದಿಂದ ನೆರೆದಿದವರಿವರು! ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ (Sirsi) ಭೈರುಂಬೆ ಶಾರದಾಂಬಾ ಪ್ರೌಢಶಾಲೆ ಆವರಣದಲ್ಲಿ (Sharadamba High School Bhairumbe) ಮಂಗಳವಾರ ಚಂದ್ರಗ್ರಹಣದ ಸಿದ್ಧತೆ ಭರದಿಂದ ನಡೆದಿತ್ತು. ದೊಡ್ಡದಾದ ಟೆಲಿಸ್ಕೋಪ್ ಶಾಲಾ ಆವರಣದಲ್ಲಿರಿಸಿ ಮಕ್ಕಳು, ಶಿಕ್ಷಕರು, ಸಾರ್ವಜನಿಕರು ಚಂದ್ರಗ್ರಹಣ ವೀಕ್ಷಿಸಿದ್ರು, ಅಷ್ಟೇ ಅಲ್ಲ, ಚಂದ್ರಗ್ರಹಣದ ನಂತ್ರ ಆಕಾಶ ಹೇಗಿರುತ್ತೆ ಅನ್ನೋ ಪ್ರಶ್ನೆಗೆ ಟೆಲಿಸ್ಕೋಪ್ ಉತ್ತರ ಕೊಟ್ತು!


    ಶಾರದಾಂಬಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ವಸಂತ್ ಹೆಗ್ಡೆಯವರು ಆಗಸ 360 ನೇತೃತ್ವದ ವಹಿಸಿಕೊಂಡಿದ್ರು. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ನಿಟ್ಟಿನಲ್ಲಿ ಆಕಾಶ ವೀಕ್ಷಣೆ ಹಮ್ಮಿಕೊಳ್ತಿದೆ ಈ ಟೀಮ್.


    ಇದನ್ನೂ ಓದಿ: Manjuguni Temple: ಕರ್ನಾಟಕದ ತಿರುಪತಿಯಲ್ಲಿ ವನಭೋಜನ! ಇಲ್ಲಿ ವೆಂಕಟೇಶ್ವರ ನೆಲೆಸಿದ್ದೇ ರೋಚಕ ಕಥೆ


    ಆಕಾಶ ವೀಕ್ಷಣೆಯಲ್ಲಿ ಕಂಡಿದ್ದಿಷ್ಟು!
    ಚಂದ್ರಗ್ರಹಣ ನಂತರ ಆಕಾಶದಲ್ಲಿನ ಶನಿಗ್ರಹ, ಸುತ್ತಲಿನ ಉಂಗುರಗಳು ಹಾಗೂ ಗುರುಗ್ರಹ ಅದರ ಉಪಗ್ರಹಗಳು, ಚಂದ್ರನ ಮೇಲ್ಮೈ ಹಾಗೂ ಅದರ ಮೇಲಿನ ಖನಿಜಗಳ ಬಗ್ಗೆ ಟೆಲಿಸ್ಕೋಪ್​ನಲ್ಲಿ ವೀಕ್ಷಿಸಿ ಚರ್ಚಿಸಲಾಯ್ತು.


    ಇದನ್ನೂ ಓದಿ: Uttara Kannada: ಸ್ವತಃ ಕರೆಂಟ್ ತಯಾರಿಸೋ ಶಿರಸಿಯ ಗ್ರಾಮಸ್ಥರು! ಇವರಿಗೆ ಸರ್ಕಾರಿ ವಿದ್ಯುತ್ ಬೇಕಂತಿಲ್ಲ!


    ಸಾರ್ವಜನಿಕರ ಮೆಚ್ಚುಗೆ
    ಗ್ರಾಮೀಣ ಭಾಗದಲ್ಲಿ ಆಗಸ 360 ಟೀಮ್​ನ ಈ ಪ್ರಯತ್ನಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ರು. ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶದ ಬಗ್ಗೆ ಆಸಕ್ತಿ ಮೂಡಿಸ್ಬೇಕು, ಹೊಸ ವಿಚಾರಧಾರೆಯನ್ನು ಮಕ್ಕಳಲ್ಲಿ ಮೂಡಿಸ್ಬೇಕು ಅನ್ನೋ ಉದ್ದೇಶಕ್ಕೆ ಸಾಥ್ ನೀಡಿದ್ರು.

    Published by:ಗುರುಗಣೇಶ ಡಬ್ಗುಳಿ
    First published: