ಶಿರಸಿ: ಇಲ್ಲಿರೋ ಗೋಪುರವೇ ಅಲ್ಲಿ, ಅಲ್ಲಿರೋ ಗೋಪುರವೇ ಇಲ್ಲಿ! ಈ ದೇವಸ್ಥಾನದಂತೆಯೇ ಕಾಣೋ ಇನ್ನೆರಡು ದೇಗುಲ! ಅವಳಿ ಜವಳಿ ಮಕ್ಕಳನ್ನು ನೋಡಿರ್ತೀವಿ, ತ್ರಿವಳಿ ಮಕ್ಕಳು ಹುಟ್ಟಿರೋದನ್ನೂ ಕೇಳಿರ್ತೀವಿ. ಆದ್ರೆ ಇಲ್ಲಿರೋದು ಸೇಮ್ ಟೂ ಸೇಮ್ ಒಂದೇ ರೀತಿ ಇರೋ ತ್ರಿವಳಿ ಬಸದಿ! ಉತ್ತರಕನ್ನಡ ಜಿಲ್ಲೆಯ (Uttara Kannada) ಸಿದ್ದಾಪುರ ತಾಲೂಕಿನ ಬೀಳಗಿಯೇ (Bilagi Basadi) ಈ ರತ್ನತ್ರಯ ತ್ರಿವಳಿ ಬಸದಿಗಳನ್ನ ಹೊಂದಿರೋ ಗ್ರಾಮ. ಸರಿಸುಮಾರು 800 ವರ್ಷಗಳ ಹಿಂದೆ ಈ ಬಸದಿಗಳನ್ನು ಕಟ್ಟಲಾಗಿದೆ ಎಂಬ ಐತಿಹ್ಯವಿದೆ.
ಈ ಬಸದಿಗಳ ಒಳಗೆ ಪಾರ್ಶ್ವನಾಥ, ನೇಮಿನಾಥ, ಮಹಾವೀರ ತೀರ್ಥಂಕರರ ಮೂರ್ತಿಗಳಿದ್ಧು, ಧರಣೇಂದ್ರ ಹಾಗೂ ಪದ್ಮಾವತಿಯರ ಶಿಲ್ಪಗಳೂ ಇವೆ. ಮೂರು ಕಡೆಯಿಂದ ಒಂದೇ ರೀತಿಯ ವಿನ್ಯಾಸ ಹೊಂದಿರೋ ಈ ಬಸದಿಯ ತುಂಬಾ ಚಿತ್ತಾರದ ಕಂಬಗಳಿವೆ.
ಇದನ್ನೂ ಓದಿ: Uttara Kannada: ದಿಂಡಿಹಬ್ಬದಲ್ಲೂ ಕಾಂತಾರ ಸ್ಪೆಷಲ್! ಈ ಜಾತ್ರೆಯ ವಿಶೇಷವೇ ಸಖತ್
ಸಿಂಹ ಸೇರಿದಂತೆ ಹಲವು ಪ್ರಾಣಿಗಳ ಕೆತ್ತನೆ
ಬಸದಿಯ ಸುತ್ತಲೂ ಸಿಂಹ ಸೇರಿದಂತೆ ಹಲವು ಪ್ರಾಣಿಗಳ ಕೆತ್ತನೆಗಳಿವೆ. ಕೇಂದ್ರ ಸರ್ಕಾರದ ಸುಪರ್ದಿಯಲ್ಲಿರುವ ಈ ಬಸದಿ ಕರ್ನಾಟಕದ ಪ್ರಮುಖ ಚಾರಿತ್ರಿಕ ಶಿಲಾ ಸ್ಮಾರಕಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: Positive Story: ಕರ್ನಾಟಕಕ್ಕೇ ಫಸ್ಟ್ ಈ ಗ್ರಾಮ ಪಂಚಾಯತ್!
ಬಸದಿಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಬರೋ ಮಾರ್ಗ ಹೀಗಿದೆ
ಇಲ್ಲಿರೋ ಯಾವುದೇ ಮೂರ್ತಿಗಳಿಗೆ ದಿನಂಪ್ರತಿ ಪೂಜೆ ಪುನಸ್ಕಾರ ನಡೆಯೋದಿಲ್ಲ. ಇಲ್ಲಿ ಜನರ ಸಂಚಾರವೂ ವಿರಳ. ಸಿದ್ಧಾಪುರದಿಂದ ಕುಮಟಾ ಬಸ್ ಹತ್ತಿ ಬೀಳಗಿಯಲ್ಲಿ ಇಳಿದು ಆರೋಗ್ಯ ಕೇಂದ್ರದ ಕಡೆಗೆ ಬಂದ್ರೆ ಈ ಒಂದೇ ತೆರನಾದ ರತ್ನತ್ರಯ ಬಸದಿಗಳನ್ನ ಕಣ್ತುಂಬಿಕೊಳ್ಳಬಹುದಾಗಿದೆ.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ