• Home
 • »
 • News
 • »
 • uttara-kannada
 • »
 • Best Travel Plan: ದೋಣಿ ಪ್ರಯಾಣ ಮಾಡಿದ್ರೆ ಸಿಗುತ್ತೆ ಕಾಳಿ ದರ್ಶನ!

Best Travel Plan: ದೋಣಿ ಪ್ರಯಾಣ ಮಾಡಿದ್ರೆ ಸಿಗುತ್ತೆ ಕಾಳಿ ದರ್ಶನ!

X
ಕಾಳಿ ದರ್ಶನ ಮಾಡಿ

"ಕಾಳಿ ದರ್ಶನ ಮಾಡಿ"

ದೋಣಿಯಲ್ಲಿ ಸಾಗಿ ಕಾಳಿಯ ದರ್ಶನ ಮಾಡಿ ಬರೋದಷ್ಟೇ ಅಲ್ಲ, ದೇಗುಲದ ಸುತ್ತ ಹಚ್ಚ ಹಸಿರಾಗಿ ಬೆಳೆದಿರುವ ಕಾಂಡ್ಲಾ ಸಸ್ಯವನಗಳ ನಡುವೆ ನಡೆಯಬಹುದು.

 • News18 Kannada
 • Last Updated :
 • Karwar, India
 • Share this:

  ಝುಳು ಝುಳು ಹರಿವ ಕಾಳಿ ನದಿ (Kali River), ನೀರ ನಡುವೆ ನಡುಗಡ್ಡೆ, ಮಧ್ಯದಲ್ಲಿ ಕಾಳಿಮಾತೆ, ಸಾಮಾನ್ಯವಾಗಿ ದೇವಸ್ಥಾನ ಅಂದ್ರೆ ಗುಡಿ, ದೇವರು, ಕೈಮುಗಿದು ತೀರ್ಥ ಪ್ರಸಾದ ಪಡೆದು ವಾಪಸ್ ಆಗೋದು ಅನ್ನೋ ಥರ ಇರತ್ತೆ. ಆದ್ರೆ ಕಾರವಾರದ ಈ ಕಾಳಿಮಾತಾ ದೇವಸ್ಥಾನ (Kali Temple) ಹಾಗಲ್ವೇ ಅಲ್ಲ! ಏನಿದು ನದಿ ಮಧ್ಯದಲ್ಲಿರೋ ದೇವಿ, ದೇವಸ್ಥಾನ ಅಂದ್ರಾ? ಕಾರವಾರದಲ್ಲಿರೋ (Karwar) ಮಸ್ಟ್ ವಿಸಿಟ್ ಪ್ಲೇಸ್​ಗೆ ಒಂದ್ ರೌಂಡ್ ಹಾಕ್ಬರೋಣ (Best Travel Plan)ಬನ್ನಿ.


  ಹೀಗೆ ತುಂಬಿ ಹರಿಯುತ್ತಿರುವ ನದಿಯಲ್ಲಿ ದೋಣಿಯಲ್ಲಿ ಜನರು ತೆರಳುತ್ತಿರೋದು ಕಾರವಾರದ ಕಾಳಿ ನಡುಗಡ್ಡೆಯಲ್ಲಿರೋ ಈ ಕಾಳಿಮಾತೆಯ ದರ್ಶನಕ್ಕೆ. ಕಾಳಿ ನದಿಯ ನಡುವಿನ ನಡುಗಡ್ಡೆಯಲ್ಲಿರೋ ಈ ಕಾಳಿಮಾತಾ ದೇವಸ್ಥಾನಕ್ಕೆ ದೋಣಿಯಲ್ಲಿ ಸಾಗಬೇಕು.


  ಹೊಸ ಅನುಭವ ಸಿಗೋದು ಪಕ್ಕಾ!
  ದೋಣಿಯಲ್ಲಿ ಸಾಗಿ ಕಾಳಿಯ ದರ್ಶನ ಮಾಡಿ ಬರೋದಷ್ಟೇ ಅಲ್ಲ, ದೇಗುಲದ ಸುತ್ತ ಹಚ್ಚ ಹಸಿರಾಗಿ ಬೆಳೆದಿರುವ ಕಾಂಡ್ಲಾ ಸಸ್ಯವನಗಳ ನಡುವೆ ನಡೆಯಬಹುದು. ಅರಣ್ಯ ಇಲಾಖೆಯಿಂದ ವಾಕ್ ಪಾಥ್ ನಿರ್ಮಿಸಿ ಮ್ಯಾಂಗ್ರೋ ಬೋರ್ಡ್ ವಾಕ್ ಸ್ಥಾಪಿಸಲಾಗಿದೆ. ಈ ಪಾತ್ ವೇನಲ್ಲಿ ವಿಹರಿಸುತ್ತಿದ್ರೆ ಹೊಸ ಅನುಭವ ಸಿಗುತ್ತೆ. ಆಸಕ್ತರಿಗೆ ಅನುಕೂಲಕ್ಕೆಂದು ಕ್ಯೂಆರ್ ಕೋಡ್ ಬೋರ್ಡ್ ಅಳವಡಿಸಲಾಗಿದೆ. ಈ ಕೋಡ್ ಸ್ಕ್ಯಾನ್ ಮಾಡಿದ್ರೆ ಸಾಕು ಕಾಂಡ್ಲಾ ವೈವಿಧ್ಯತೆಯ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.


  ಇದನ್ನೂ ಓದಿ: Ghante Ganapati: ಈ ಗಣಪತಿಗೆ ಘಂಟೆ ಅಂದ್ರೆ ಇಷ್ಟ! ಹಸಿರು ಕಾಡಿನ ನಡುವೆ ಸಿದ್ಧಿ ವಿನಾಯಕನ ತಾಣ


  ಮ್ಯಾಂಗ್ರೋ ಬೋರ್ಡ್ ವಾಕ್ ಆಕರ್ಷಣೆ
  ಇನ್ನು ಇಲ್ಲಿ ಬಂದವರಿಗೆ ಕಾಳಿ ಮಾತೆಯ ದರ್ಶನದ ಜೊತೆಗೆ ಮ್ಯಾಂಗ್ರೋ ಬೋರ್ಡ್ ವಾಕ್ ಆಕರ್ಷಣೀಯ ತಾಣವಾಗಿದೆ. ಕಾಳಿಯ ಗುಡಿಗೇ ಈ ಬೋರ್ಡ್ ವಾಕ್ ಒಂದು ರೀತಿಯ ಮೆರುಗು ತಂದಿದೆ. ಸಕಲ ಜೀವಿಗಳನ್ನ ರಕ್ಷಿಸೋ ಕಾಳಿಯ ದರ್ಶನ ಒಂದ್ಕಡೆಯಾದ್ರೆ, ಮಣ್ಣನ್ನ ರಕ್ಷಿಸೋ ಮ್ಯಾಂಗ್ರೋ ಗಿಡಗಳು, ಮತ್ತದರ ನಡುವಿನ ಜೀವಿ ಪ್ರಪಂಚವನ್ನೂ ಇಲ್ಲಿ ಕಾಣಬಹುದಾಗಿದೆ.


  ಇದನ್ನೂ ಓದಿ: Positive Story: ಉತ್ತರ ಕನ್ನಡಕ್ಕೆ ಮಲ್ಟಿ ನ್ಯಾಷನಲ್ ಕಂಪನಿಗಳು! ಸರ್ಕಾರಕ್ಕೇ ಮಾದರಿಯಾಗ್ತಿದೆ ಮನುವಿಕಾಸ


  Google Maps
  ಕಾಳಿ ದರ್ಶನಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


  ಒಟ್ಟಿನಲ್ಲಿ ದೇವರನ್ನೂ ನೋಡ್ಬೇಕು, ಪ್ರವಾಸ ಮಾಡಿದಂತೆಯೂ ಆಗ್ಬೇಕು ಅನ್ನೋರಿಗೆ ಈ ಪ್ಲೇಸ್ ಹೇಳಿ ಮಾಡಿಸಿದ ಜಾಗ. ಕಾರವಾರಕ್ಕೆ ಬಂದ್ರೆ ಈ ವಿಶಿಷ್ಟವಾಗಿರೋ ಕಾಳಿ ಮಾತಾ ನಡುಗಡ್ಡೆಗೆ ಭೇಟಿ ನೀಡೋದನ್ನ ಮಾತ್ರ ಮರಿಬೇಡಿ.


  ವರದಿ: ದೇವರಾಜ್ ನಾಯ್ಕ್, ಕಾರವಾರ

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು