• Home
  • »
  • News
  • »
  • uttara-kannada
  • »
  • Magod Falls: ಬೇಡ್ತಿ ಧುಮುಕಿದ್ದಕ್ಕೆ ಹುಟ್ಟಿದ ಸುಂದರಿ ಈಕೆ!

Magod Falls: ಬೇಡ್ತಿ ಧುಮುಕಿದ್ದಕ್ಕೆ ಹುಟ್ಟಿದ ಸುಂದರಿ ಈಕೆ!

X
ಮಾಗೊಡು ಜಲಪಾತ

"ಮಾಗೊಡು ಜಲಪಾತ"

ಸಂರಕ್ಷಿತ ಅರಣ್ಯ ವಲಯದಲ್ಲಿರೋ ಈ ಜಲಲ ಜಲಲ ಜಲಧಾರೆಯನ್ನ ದೂರದಿಂದ್ಲೇ ನಿಂತು ನೋಡ್ಬೇಕು. ಧುಮ್ಮಿಕ್ಕುನ ಬೆಳ್ನೊರೆಯ ಧಾರೆಗಳನ್ನ ದೂರದಿಂದಲೇ ಕಣ್ತುಂಬಿಕೊಳ್ಳಬೇಕು.

  • News18 Kannada
  • Last Updated :
  • Uttara Kannada, India
  • Share this:

    ಮಲೆನಾಡಿನ ಬೆಟ್ಟದ ನಡುವೆ ಸೀಳಿಕೊಂಡು ಬರೋ ಜಲಧಾರೆ.. ಹಾಲ್ನೊರೆಯಾಗಿ ಧುಮ್ಮಿಕ್ಕುತ್ತಾ ಕೈ ಬೀಸಿ ಕರೆಯೋ ಜಲಪಾತ. ಹಸಿರ ಬೆಟ್ಟದಲ್ಲಿ ಸೌಂದರ್ಯ ಹೆಚ್ಚಿಸಿದೆ ಈ ಫಾಲ್ಸ್. ಇದುವೇ ಮಲೆನಾಡ ಸೆರಗಿನ ಸುಂದರಿ ಮಾಗೋಡು ಫಾಲ್ಸ್. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ (Best Waterfalls In Yellapur) ಶಾಂತವಾಗಿ ಹರಿಯುತ್ತಿರುವ ಬೇಡ್ತಿ ನದಿ (Bedti River) ಮಾಗೋಡು ಜಲಪಾತ ಎಂಬ ಸುಂದರ ಜಲಪಾತ (Best Waterfalls In Uttara Kannada) ಸೃಷ್ಟಿಸಿದೆ. ಪ್ರಕೃತಿ ಸೊಬಗಿನ ನಡುವೆ ಬಳಕುತ್ತಾ ಹರಿಯುವ ಈಕೆಗೆ ಮೂರು ರೂಪಗಳಿವೆ. ರಮ್ಯ, ಸೌಮ್ಯ, ರೌದ್ರ ಎಂಬBest Travel Plan: ಗೋವಾಕ್ಕೆ ಪೈಪೋಟಿ ಕೊಡ್ತಿದೆ ಕರ್ನಾಟಕದ ಈ ಊರು! ಹೆಸರಿನಿಂದ ಮೂರು ಕವಲುಗಳಾಗಿ 650 ಅಡಿ ಎತ್ತರದಿಂದ ಧುಮ್ಮಿಕ್ಕುತ್ತಾ ನೋಡುಗರ (Best Travel Plan) ಚಿತ್ತ ಸೆಳೆಯುತ್ತೆ. 


    ಅಂದ್ಹಾಗೆ ಮಾಗೋಡು ಫಾಲ್ಸ್​ನ ಹತ್ತಿರದಿಂದ ನೋಡೋಕಾಗಲ್ಲ. ಸಂರಕ್ಷಿತ ಅರಣ್ಯ ವಲಯದಲ್ಲಿರೋ ಈ ಜಲಲ ಜಲಲ ಜಲಧಾರೆಯನ್ನ ದೂರದಿಂದ್ಲೇ ನಿಂತು ನೋಡ್ಬೇಕು. ಧುಮ್ಮಿಕ್ಕುನ ಬೆಳ್ನೊರೆಯ ಧಾರೆಗಳನ್ನ ದೂರದಿಂದಲೇ ಕಣ್ತುಂಬಿಕೊಳ್ಳಬೇಕು.


    ಇದನ್ನೂ ಓದಿ:


    ಪೇಟೆಯಿಂದ ಎಷ್ಟು ದೂರ?
    ಈ ಜಲಪಾತ ಹಲವು ವನ್ಯಜೀವಿಗಳಿಗೂ ಜೀವಜಲ. ಯಲ್ಲಾಪುರದಿಂದ 18 ಕಿಲೋ ಮೀಟರ್ ದೂರವಿರುವ ಮಾಗೋಡಿಗೆ ಬಸ್ ಇದ್ರೂ ಸ್ವಂತ ವಾಹನ ಇದ್ರೆ ಮಾತ್ರ ಸುಲಭವಾಗಿ ಹೋಗಿ ಬರಬಹುದು.


    ಇದನ್ನೂ ಓದಿ: Football League: ಕರ್ನಾಟಕದಲ್ಲಿ ಫೀಮೇಲ್ ಫುಟ್​ಬಾಲ್ ಸುಗ್ಗಿ! ಕಾಲ್ಚೆಂಡಿನ ಚಾಲಾಕಿಗಳ ಬೊಂಬಾಟ್ ಆಟ


    magod falls
    ಮಾಗೋಡು ಜಲಪಾತಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ಪ್ರಕೃತಿ ಗೀಚಿದ ಅದ್ಭುತ ಚಿತ್ರ!
    ಒಟ್ಟಿನಲ್ಲಿ ಮಾಗೋಡು ಫಾಲ್ಸ್ ಮಲೆನಾಡಿನ ಪ್ರಕೃತಿ ಮಡಿಲಲ್ಲಿ ಬೇಡ್ತಿಯು ಗೀಚಿ ಹೋದ ಅದ್ಭುತ ಚಿತ್ರದಂತಿದೆ. ಹಚ್ಚ ಹಸಿರ ಕಾನನದಲ್ಲಿ ಸಾಗುತ್ತಾ ಈ ಅದ್ಭುತ ಫಾಲ್ಸ್ ತಲುಪುವಾಗ ಆಗೋ ಖುಷಿನೇ ಬೇರೆ. ಸೋ, ನೀವು ಉತ್ತರ ಕನ್ನಡ ಪ್ರವಾಸ ಹೋಗ್ತೀರಿ ಅಂದ್ರೆ ಮಾಗೋಡ್ ಫಾಲ್ಸ್ ನೋಡುವುದನ್ನ ಮರೆಯಬೇಡಿ.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: