ಕಾರವಾರ: ಸುತ್ತ ಸಮುದ್ರದ ಅಲೆಗಳ ಅಬ್ಬರ, ಸೂರ್ಯಾಸ್ತದ ಸಂಭ್ರಮ . ಅರಬ್ಬಿ ಸಮುದ್ರ ಹಾಗೂ ಕಾಳಿ ಸಂಗಮದ ಮನಮೋಹಕ ದೃಶ್ಯ! ಸಮುದ್ರದಲ್ಲಿ ಕುಳಿತು ಊಟ- ತಿಂಡಿ ಸವಿಯುತ್ತಾ ನೀರಿನ ಮೇಲೆ ತೇಲಾಡುತ್ತಾ ನದಿಯಲ್ಲಿ ಸುತ್ತಾಡುವುದೇ ಒಂದು ವಿಶೇಷ ಅನುಭವ. ಇದಕ್ಕಂತಾನೇ ಪ್ರವಾಸಿಗರು ಕೇರಳಕ್ಕೆ (Kerala) ಹೋಗೋದೂ ಉಂಟು. ಆದ್ರೆ ಈ ಅನುಭವ ಪಡೆಯೋಕೆ ಈಗ ಕೇರಳಕ್ಕೇ ಹೋಗ್ಬೇಕಂತೇನೂ ಇಲ್ಲ, ಉತ್ತರಕನ್ನಡ ಜಿಲ್ಲೆಯ (Uttara Kannada) ಕಾರವಾರದಲ್ಲೇ (Karwar) ಈ ಅನುಭವ ನಿಮ್ಮದಾಗಿಸಿಕೊಳ್ಳಬಹುದು.
ಹೌದು, ಕರ್ನಾಟಕದ ಕಾಶ್ಮೀರ ಕಾರವಾರ ನೈಸರ್ಗಿಕವಾಗಿಯೂ ಸುಂದರ ತಾಣ. ಇಲ್ಲಿನ ಕಡಲತೀರಗಳನ್ನ ನೋಡೋಕೆ ದೇಶದ ವಿವಿಧೆಡೆಯಿಂದ ಪ್ರವಾಸಿಗರು ಬರ್ತಾರೆ. ಹಾಗೆಯೇ ಇಲ್ಲಿನ ಕಾಳಿ ನದಿ ಕೂಡ ಪ್ರವಾಸೋದ್ಯಮದ ದೃಷ್ಟಿಯಿಂದ ಸಾಕಷ್ಟು ಪ್ರಮುಖ ಪಾತ್ರವಹಿಸ್ತಿದೆ.
ಸೂರ್ಯಾಸ್ತದ ಸಂಭ್ರಮವೂ ಅದ್ಭುತ
ಕಾಳಿ ನದಿ ದಂಡೆಯಲ್ಲಿ ನಿರ್ಮಿಸಿರುವ ಕಾಳಿ ರಿವರ್ ಗಾರ್ಡನ್ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಇಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಕೇರಳ ಮಾದರಿಯ ಶಿಖರಾ ಕ್ರೂಸ್ ಅನ್ನು ಪರಿಚಯಿಸಲಾಗಿದೆ. ಈ ಕ್ರೂಸ್ನಲ್ಲಿ ಕುಳಿತು ಅರಬ್ಬಿ ಸಮುದ್ರ ಹಾಗೂ ಕಾಳಿ ಸಂಗಮದ ಮನಮೋಹಕ ದೃಶ್ಯಗಳನ್ನ, ಸೂರ್ಯಾಸ್ತದ ಸೌಂದರ್ಯವನ್ನ ಕಣ್ತುಂಬಿಕೊಳ್ಳಬಹುದು.
ಕಾಳಿ ನದಿ- ಅರಬ್ಬೀ ಸಮುದ್ರ ಅಂದ ಒಟ್ಟಿಗೇ ನೋಡಿ
ಈ ಕ್ರೂಸ್ನಲ್ಲಿ ಒಂದೇ ಸಮಯದಲ್ಲಿ 25 ಜನ ತೆರಳಬಹುದಾಗಿದೆ. ಇಂಪಾದ ಸಂಗೀತ, ಸಸ್ಯಾಹಾರ ಮತ್ತು ಮಾಂಸಾಹಾರದ ಖಾದ್ಯಗಳನ್ನು ಸವಿಯಬಹುದು. ಕಾಳಿ ನದಿ ಹಾಗೂ ಅರಬ್ಬೀ ಸಮುದ್ರದ ಅಂದವನ್ನ ಕಣ್ತುಂಬಿಸಿಕೊಳ್ಳಬಹುದು.
ಇದನ್ನೂ ಓದಿ: PVC Pipe Gun: ಮಂಗನನ್ನು ಓಡಿಸೋಕೆ ಪೈಪ್ ಗನ್! ಕೃಷಿಕರೇ, ವಿಡಿಯೋ ನೋಡಿ
ಆಮೆಯಾಕಾರದ ಕೂರ್ಮಗಡ ದ್ವೀಪ
ರೈಲ್ವೆ ಬ್ರಿಡ್ಜ್, ಕಾಳಿ ಸೇತುವೆ ವೀಕ್ಷಣೆ, ಪ್ರಮುಖವಾಗಿ ಡಾಲ್ಫಿನ್ ನೃತ್ಯವನ್ನು ಸಹ ನೀವಿಲ್ಲಿ ನೋಡ್ಬಹುದು. ಅಷ್ಟೇ ಅಲ್ಲ ಕಣ್ರೀ, ಆಮೆಯಾಕಾರದ ಕೂರ್ಮಗಡ ದ್ವೀಪ ಹೇಗಿದೆ ಅಂತಾನೂ ನೀವು ನೋಡಬಹುದು.
ಇನ್ನು ಕೇವಲ ಕ್ರೂಸ್ ಒಂದೇ ಅಲ್ಲ, ಇತರ ವಾಟರ್ ಸ್ಪೋರ್ಟ್ಸ್ಗಳೂ ಇಲ್ಲಿವೆ. ಕಾಳಿ ರಿವರ್ ಗಾರ್ಡನ್ನಲ್ಲಿ ಕ್ಯಾಂಪ್ ಫೈರ್ ಜೊತೆ ಕ್ಯಾಂಪಿಂಗ್ ಮಾಡಲೂ ಅವಕಾಶವಿದ್ದು, ಫೊಟೊಶೂಟ್ಗಂತೂ ಬೆಸ್ಟ್ ಪ್ಲೇಸ್.
ಇದನ್ನೂ ಓದಿ: Uttara Kannada: ಕಡಿಮೆ ಖರ್ಚು, ಹೆಚ್ಚು ಲಾಭ! ಕೃಷಿಕರೇ ಈ ಪಂಪ್ ಬಳಸಿ ನೋಡಿ
ಹಾಗಿದ್ರೆ ಇನ್ಯಾಕೆ ತಡ, ಚುಮುಚುಮು ಈ ಚಳಿಯಲ್ಲೊಮ್ಮೆ ಕರ್ನಾಟಕದ ಕಾಶ್ಮೀರಕ್ಕೆ ಭೇಟಿ ನೀಡಿ, ಹೊಸ ವರ್ಷಕ್ಕೆ ಶಿಖರಾ ಕ್ರೂಸ್ ಜೊತೆಗೆ ಕಾಳಿ ರಿವರ್ ಗಾರ್ಡನ್ನ ಆ್ಯಕ್ಟಿವಿಟಿಗಳಲ್ಲಿ ಪಾಲ್ಗೊಂಡು ಮಸ್ತ್ ಎಂಜಾಯ್ ಮಾಡಿ.
ವರದಿ: ದೇವರಾಜ್ ನಾಯ್ಕ್, ಕಾರವಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ