ಬಾವಿಯೊಳಗೊಂದು ಕೋಟೆ! ಒಳಗೆ ಮೂರು ಸುರಂಗ. ಅಬ್ಬಬ್ಬಾ ಎನ್ನುವಂತಿದೆ ರಾಜರ ಕಾಲದ ಈ ಅದ್ಭುತ. ಮೂರು ಕಡೆಗೆ ಸಂಪರ್ಕ ನೀಡೋ ಇಲ್ಲಿನ ಸುರಂಗ ಹಲವು ರೋಚಕತೆಯ ತಾಣವೂ ಹೌದು, ಅಷ್ಟಕ್ಕೂ ಈ ಬಾವಿ (Well) ಯಾರ ಕಾಲದ್ದು? ಈ ಬಾವಿ ಹೇಗಿತ್ತು? ಅನ್ನೋದನ್ನ ಹೇಳ್ತೀವಿ ನೋಡಿ. ಉತ್ತರ ಕನ್ನಡದ (Uttara Kannada Tourist Places) ಸಿದ್ದಾಪುರದ ಬೀಳಗಿಯಲ್ಲಿರುವ ಈ ಗೋಳಬಾವಿಯ ಸುರಂಗಗಳಲ್ಲಿ (Well Tunnel) ಒಂದು ಬೇಡ್ಕಣಿ ಕೋಟೆಗೆ ಸಂಪರ್ಕ ಕಲ್ಪಿಸಿದರೆ ಇನ್ನೊಂದು ಸಮೀಪದ ಮತ್ತೊಂದು ಬೀಳಗಿ ಅರಸರ ಅರಮನೆ ಸಂಪರ್ಕಿಸುತ್ತಂತೆ.
ಈಗ ಸುರಂಗಗಳನ್ನು ಮುಚ್ಚಲಾಗಿದ್ದು ಪ್ರವೇಶ ಬಾಗಿಲುಗಳು ನೋಡಬಹುದಾಗಿದೆ. ವಿಜಯನಗರದ ಆಳರಸರಾದ ಬೀಳಗಿ ವಂಶಸ್ಥರು ಕಟ್ಟಿಸಿದ ಬಾವಿ ರಕ್ಷಣಾತ್ಮಕ ಬಾವಿ ಹಾಗೂ ಕಾರಂಜಿ ಆನೆ ತೊಟ್ಟಿಯನ್ನು ಹೊಂದಿದ್ದ ವಿಲಾಸಿ ತಾಣವೂ ಆಗಿತ್ತಂತೆ.
ಇದನ್ನೂ ಓದಿ: Uttara Kannada: ಅಯ್ಯಪ್ಪನ ದರ್ಶನಕ್ಕೆ ಹೊರಟ ನಾಯಿ! ಪಾದಯಾತ್ರಿಗಳ ಜೊತೆ ಶಬರಿಮಲೆಗೆ ಪಯಣ
ಬಾವಿಯೊಳಗೆ ಇಳಿದರೆ ಅಚ್ಚರಿ ಬಯಲು!
ಚಚ್ಚೌಕಾರದಲ್ಲಿದ್ದರೂ ಈ ಬಾವಿಯನ್ನು ಗೋಳ ಬಾವಿಯೆಂದೇ ಕರೆಯಲಾಗುತ್ತೆ. ಬಾವಿಯೊಳಗೆ ಇಳಯುತ್ತಾ ಹೋದಂತೆ ವಿಭಿನ್ನಶೈಲಿಯ ಕೆತ್ತನೆ, ಗುಂಬಜ್ ಮಾದರಿ ಕಣ್ಮನಸೆಳೆಯುತ್ತೆ.
ಇದನ್ನೂ ಓದಿ: Uttara Kannada: ದಿಂಡಿಹಬ್ಬದಲ್ಲೂ ಕಾಂತಾರ ಸ್ಪೆಷಲ್! ಈ ಜಾತ್ರೆಯ ವಿಶೇಷವೇ ಸಖತ್
ಗೋಳಬಾವಿ ನೋಡಲು ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಸೂಕ್ತ ನಿರ್ವಹಣೆ ಇಲ್ಲ
ವಿಜಯನಗರ ಸಾಮಂತರ ವಿಶೇಷ ಕೊಡುಗೆಗಳಲ್ಲಿ ಇದೂ ಒಂದು. ಆದರೆ ಇದೀಗ ಸೂಕ್ತ ನಿರ್ವಹಣೆ ಇಲ್ಲದೇ ಇರೋದ್ರಿಂದ ಜನರನ್ನ ಆಕರ್ಷಿಸುತ್ತಿಲ್ಲ. ಒಂದು ವೇಳೆ ಗೋಳಬಾವಿಯನ್ನ ಇನ್ನಷ್ಟು ಅಭಿವೃದ್ಧಿ ಮಾಡಿದ್ರೆ ಉತ್ತಮ ಪ್ರವಾಸಿ ತಾಣವೂ ಆಗಬಹುದು ಅಂತಾರೆ ಸ್ಥಳೀಯರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ