• Home
  • »
  • News
  • »
  • uttara-kannada
  • »
  • Belambar Treatment: ಉತ್ತರ ಕನ್ನಡದ ಈ ನಾಟಿವೈದ್ಯರ ಬಳಿ ರಾಜ್​ಕುಮಾರ್, ಬಿಗ್ ಬಿ ಸಹ ಚಿಕಿತ್ಸೆ ಪಡೆದಿದ್ರು!

Belambar Treatment: ಉತ್ತರ ಕನ್ನಡದ ಈ ನಾಟಿವೈದ್ಯರ ಬಳಿ ರಾಜ್​ಕುಮಾರ್, ಬಿಗ್ ಬಿ ಸಹ ಚಿಕಿತ್ಸೆ ಪಡೆದಿದ್ರು!

X
ಇವರೇ ನೋಡಿ ಆ ವೈದ್ಯರು!

"ಇವರೇ ನೋಡಿ ಆ ವೈದ್ಯರು!"

ಗಾಂಧೀಜಿಯವರು ಎಡಭಾಗದ ಪಾರ್ಶ್ವವಾಯು ಮತ್ತು ಸಂಧಿವಾತದಿಂದ ಬಳಲಿದಾಗ ಹನುಮಂತ ಗೌಡರ ಅಜ್ಜ ಶಿವು ಗೌಡರು ಬೆಂಗಳೂರಿನ ನಂದಿಬೆಟ್ಟದ ವಿಶ್ರಾಂತಿ ಧಾಮಕ್ಕೆ ತೆರಳಿ ಚಿಕಿತ್ಸೆ ನೀಡಿ ಗುಣಪಡಿಸಿದ್ದರಂತೆ.

  • News18 Kannada
  • Last Updated :
  • Uttara Kannada, India
  • Share this:

    ಕಾರವಾರ: ಸುಂದರ ಹಸಿರು ಪರಿಸರದಲ್ಲಿ ಚಿಕ್ಕ ಮನೆ, ಸಾಲಾಗಿ ನಿಂತ ಹಲವರು. ಇವ್ರೆಲ್ಲ ಹೀಗೆ ಇಲ್ಯಾಕೆ ಕಾಯ್ತಿದ್ದಾರೆ ಅಂದ್ಕೊಂಡ್ರಾ..ಹೀಗೆ ಸಾಲಲ್ಲಿ ನಿಂತು ಚಿಕಿತ್ಸೆ ಪಡೆದವರ ಲಿಸ್ಟ್​ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರಿಂದ (Mahatma Gandhi) ಹಿಡಿದು ಡಾ. ರಾಜ್​ ಕುಮಾರ್ (Dr. Rajkumar) ತನಕ ಸಾವಿರಾರು ಜನರಿದ್ದಾರೆ. ಅಷ್ಟಕ್ಕೂ ಉತ್ತರ ಕನ್ನಡದ ಹಳ್ಳಿಯೊಂದರ ಈ ಪುಟ್ಟ ಮನೆಯ ಹಿನ್ನೆಲೆ ಕೇಳ್ತಾ ಹೋದ್ರೆ ನೀವೂ ಬೆರಗಾಗ್ತೀರ!ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ (Ankola) ತಾಲೂಕಿನ ಬೆಳಂಬಾರ ಗ್ರಾಮದ (Belambar) ಹನುಮಂತ ಗೌಡರ ಮನೆ ನಾಟಿ ವೈದ್ಯರ (Belambar Nati Vaidya) ಮನೆಯೆಂದೇ ಫೇಮಸ್ಸು.


    ದಿವಂಗತ ವೈದ್ಯ ಶಿವು ಬೊಮ್ಮು ಗೌಡರ ಶಾಂತಿ ಸ್ಮಾರಕ ಚಿಕಿತ್ಸಾಲಯದಲ್ಲಿ ಮಾಡಿಸುವ ವ್ಯಾಯಾಮಗಳು, ನೀಡುವ ಗಿಡಮೂಲಿಕೆಗಳ ಔಷಧಿ, ನೋವು ನಿವಾರಕ ಎಣ್ಣೆಗಳನ್ನ ಪಡೆಯಲು ಪ್ರತಿದಿನ ಸಂಧಿವಾತದಿಂದ ಬಳಲುವ ನೂರಾರು ಜನರು ಆಗಮಿಸುತ್ತಾರೆ.


    ಗಾಂಧೀಜಿಯವರಿಗೆ ಚಿಕಿತ್ಸೆ
    ಇಲ್ಲಿ ಪಾರ್ಶ್ವವಾಯು ರೋಗಿಗಳೂ ಗುಣಮುಖರಾಗಿ ಮನೆಗೆ ತೆರಳಿದ ಉದಾಹರಣೆಗಳಿವೆಯಂತೆ. ವಿಶೇಷ ಅಂದ್ರೆ ಮಹಾತ್ಮ ಗಾಂಧೀಜಿಯವರಿಗೂ ಇದೇ ಔಷಧ ನೀಡಿ ಚಿಕಿತ್ಸೆ ನೀಡಲಾಗಿತ್ತಂತೆ. ಗಾಂಧೀಜಿಯವರು ಎಡಭಾಗದ ಪಾರ್ಶ್ವವಾಯು ಮತ್ತು ಸಂಧಿವಾತದಿಂದ ಬಳಲಿದಾಗ ಹನುಮಂತ ಗೌಡರ ಅಜ್ಜ ಶಿವು ಗೌಡರು ಬೆಂಗಳೂರಿನ ನಂದಿಬೆಟ್ಟದ ವಿಶ್ರಾಂತಿ ಧಾಮಕ್ಕೆ ತೆರಳಿ ಚಿಕಿತ್ಸೆ ನೀಡಿ ಗುಣಪಡಿಸಿದ್ದರಂತೆ.


    ಇವರಿಗೂ ಚಿಕಿತ್ಸೆ ನೀಡಲಾಗಿತ್ತು
    ಹೀಗೆ ಇಲ್ಲಿ ಚಿಕಿತ್ಸೆ ಪಡೆದವರ ಲಿಸ್ಟ್ ನೋಡ್ತಾ ಹೋದ್ರೆ ವರನಟ ಡಾ.ರಾಜಕುಮಾರ್ ಕುಟುಂಬ, ಮಾಜಿ ಪ್ರಧಾನಿ ದೇವೇಗೌಡ, ಬಿಗ್ ಬಿ ಅಮಿತಾಭ್ ಬಚ್ಚನ್ ಅವರಂಥ ಗಣ್ಯರಿಗೂ ಈ ನಾಟಿ ವೈದ್ಯರ ಕುಟುಂಬ ಸಂಧಿವಾತ, ಪಾರ್ಶ್ವವಾಯುವಿಗೆ ನಾಟಿ ಚಿಕಿತ್ಸೆ ನೀಡಿದೆ.


    ಇದನ್ನೂ ಓದಿ: Agriculture Success Story: ಕಾಳು ಮೆಣಸಿನ ಕೋಟೆಯನ್ನೇ ಕಟ್ಟಿದ ಕೃಷಿಕ!


    200 ವರ್ಷಗಳಿಂದ ಚಿಕಿತ್ಸೆ
    200 ವರ್ಷಗಳ ಹಿಂದಿನ ನಾಟಿ ಚಿಕಿತ್ಸಾ ಪದ್ಧತಿಯ ಚಿಕಿತ್ಸೆ ಪಡೆದು ನೋವಿನಿಂದ ಬಂದವರನ್ನ ನಗುಮೊಗದಿಂದ ತೆರಳುತ್ತಿದ್ದಾರೆ.  ಹೀಗೆ ಹಿರಿಯರಿಂದ ಬಳುವಳಿಯಾಗಿ ಬಂದ ನಾಟಿ ಪದ್ಧತಿ ಚಿಕಿತ್ಸೆಯನ್ನು ಈಗ ಹನುಮಂತ ಗೌಡರು ನಿರ್ವಹಿಸ್ತಿದ್ದಾರೆ. ಎಷ್ಟೋ ಜನರು ಅದೆಷ್ಟೋ ಆಸ್ಪತ್ರೆಗಳಿಗೆ ಸುತ್ತಾಡಿ ಗುಣಮುಖವಾಗದೆ ಇಲ್ಲಿಗೆ ಬಂದು ಗುಣವಾಗಿರುವ ಉದಾಹರಣೆಗಳಿವೆಯಂತೆ. ಬದುಕು ಸಾಧ್ಯವೇ ಇಲ್ಲ ಎಂದುಕೊಂಡವರಿಗೆ ಪುನರ್ಜನ್ಮ ನೀಡಿರುವ ನಾಟಿ ಚಿಕಿತ್ಸಾಲಯ ಇದು ಅಂತಾರೆ ಹಲವರು.


    ಇದನ್ನೂ ಓದಿ: ಪಾಕಿಸ್ತಾನದ ವಿರುದ್ಧ ಹೋರಾಡಿ ಭಾರತವನ್ನು ಗೆಲ್ಲಿಸಿದ INS ಚಾಪೆಲ್ ಹೀಗಿದೆ ನೋಡಿ


    ಒಟ್ಟಿನಲ್ಲಿ ನಾಟಿ ವೈದ್ಯಕೀಯ ಕ್ಷೇತ್ರದಲ್ಲಿ ಈ ಶಿವು ಗೌಡರ ಕುಟುಂಬಿಕರ ಸಾಧನೆ ದೊಡ್ಡದು. ಮಹಾತ್ಮ ಗಾಂಧೀಜಿಯವರಂತಹ ಶ್ರೇಷ್ಟ ಸ್ವಾತಂತ್ರ್ಯ ಹೋರಾಟಗಾರರು, ಅಮಿತಾಬ್ ಬಚ್ಚನ್, ವರನಟ ರಾಜ್ ಕುಮಾರ್ ಅವರಂತಹ ಖ್ಯಾತರಿಗೆ ಚಿಕಿತ್ಸೆ ನೀಡಿದ್ದು ಈ ಕುಟುಂಬಕ್ಕೂ ಖುಷಿ ತಂದಿದೆ.


    ನೀವೂ ಹನುಮಂತ ಗೌಡ ಅವರನ್ನು ಸಂಪರ್ಕಿಸಲು 9242121337  ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.


    ವರದಿ: ದೇವರಾಜ್ ನಾಯ್ಕ್, ಕಾರವಾರ

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು